Skin Care: ಮುಖಕ್ಕೆ ಅರಿಶಿನ ಹಚ್ಚುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನ

Skin Care: ಅರಿಶಿನವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಬಳಕೆಯಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ. ಇಷ್ಟು ಮಾತ್ರವಲ್ಲ ಅರಿಶಿನವನ್ನು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. 

Written by - Yashaswini V | Last Updated : May 11, 2022, 12:47 PM IST
  • ಅರಿಶಿನವು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
  • ಅರಿಶಿನವನ್ನು ಮುಖಕ್ಕೆ ಹಚ್ಹುವುದರಿಂದ ಮೊಡವೆಗಳು ಮಾಯವಾಗುತ್ತವೆ.
  • ಅರಿಶಿನದ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ.
Skin Care:  ಮುಖಕ್ಕೆ ಅರಿಶಿನ ಹಚ್ಚುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನ  title=
Turemeric Benefits For Skin

ತ್ವಚೆ ಆರೈಕೆ: ಅರಿಶಿನವನ್ನು ಸೌಂದರ್ಯವರ್ಧಕವಾಗಿ ಬಳಸಬಹುದೇ? ಅದನ್ನು ಮುಖಕ್ಕೆ ಹಚ್ಚುವುದರಿಂದ ಏನೂ ತೊಂದರೆ ಆಗುವುದಿಲ್ಲವೇ ಎಂಬುದು ಹಲವರ ಪ್ರಶ್ನೆ. ವಾಸ್ತವವಾಗಿ, ನಮ್ಮ ಹಿರಿಯರು ಪಾಲಿಸುವ ಯಾವುದೇ ನಿಯಮದ ಹಿಂದೆ ವಿಜ್ಞಾನವೂ ಅಡಗಿದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ.  ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಮದುವೆಗೆ ಮುನ್ನ ಮಾಡಲಾಗುವ ಅರಿಶಿನ ಶಾಸ್ತ್ರ. ಅರಿಶಿನ ಶಾಸ್ತ್ರ ಮಾಡಿದ ಬಳಿಕ ಮದುವೆ ಹುಡುಗ ಹಾಗೂ ಹುಡುಗಿಯ ಮುಖದಲ್ಲಿ ಒಂದು ರೀತಿಯ ಕಳೆಯನ್ನು ಕಾಣಬಹುದು. ಇದರಿಂದ ಅರಶಿನ ಸೌಂದರ್ಯವರ್ಧಕ ಎಂದು ಅರ್ಥಮಾಡಿಕೊಳ್ಳಬಹುದು.  

ಅರಿಶಿನವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಬಳಕೆಯಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ.  ಯಾವುದಾದರೂ ಸಣ್ಣ ಪುಟ್ಟ ಗಾಯವಾದರೂ ಅರಿಶಿನವನ್ನು ಹಚ್ಚಿದರೆ ಅದು ಗುಣವಾಗುತ್ತದೆ. ಇಷ್ಟು ಮಾತ್ರವಲ್ಲ ಅರಿಶಿನವನ್ನು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಮುಖಕ್ಕೆ ಅರಿಶಿನ ಹಚ್ಚುವುದರಿಂದ ಸಿಗುವ ಅದ್ಭುತ ಲಾಭಗಳ ಬಗ್ಗೆ ತಿಳಿಯೋಣ...

1. ಮುಖದ ಕಲೆ ನಿವಾರಣೆ:
ಮುಖದ ಮೇಲೆ ಯಾವುದೇ ರೀತಿಯ ಕಲೆ ನಿವಾರಿಸಲು ಮುಖಕ್ಕೆ ಅರಿಶಿನ ಹಚ್ಚುವ ಅಭ್ಯಾಸ ರೂಢಿಸಿಕೊಳ್ಳಿ. ವಾರಕ್ಕೆರಡು ದಿನ ಮುಖಕ್ಕೆ ಅರಿಶಿನ ಹಚ್ಚುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು. 

ಇದನ್ನೂ ಓದಿ- Health Tips: ಬೇಸಿಗೆಯಲ್ಲಿ ದೇಹವನ್ನು ತಂಪುಗೊಳಿಸಲು ಈ ಆಹಾರ ಸೇವಿಸಿ

2. ಕಾಂತಿಯುತ ಚರ್ಮ:
ಇದಲ್ಲದೆ, ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಇವೆ, ಇದು ಬ್ಯಾಕ್ಟೀರಿಯಾದ ಸೋಂಕಿನಿಂದ ಚರ್ಮವನ್ನು ರಕ್ಷಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಇದನ್ನು ಅನ್ವಯಿಸುವುದರಿಂದ ನಿಮ್ಮ ತ್ವಚೆಗೆ ಹೊಳಪು ಬರುತ್ತದೆ. 

3. ಡಾರ್ಕ್ ಸರ್ಕಲ್ ನಿವಾರಣೆ:
ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಹೋಗಲಾಡಿಸಲು ಅರಿಶಿನವು ತುಂಬಾ ಉಪಯುಕ್ತವಾಗಿದೆ. ಇದನ್ನು ನಿಮ್ಮ ಡಾರ್ಕ್ ಸರ್ಕಲ್‌ಗಳ ಮೇಲೆ ಹಚ್ಚಿದರೆ ಖಂಡಿತಾ ಇದರಿಂದ ನಿಮಗೆ ಪರಿಹಾರ ಸಿಗುತ್ತದೆ.  ಆದರೆ, ನಿಯಮಿತವಾಗಿ ಇದನ್ನು ಬಳಸುವುದರಿಂದ ಮಾತ್ರವೇ ಉತ್ತಮ ಫಲಿತಾಂಶ ಗೋಚರಿಸುತ್ತದೆ. 

ಇದನ್ನೂ ಓದಿ- Golden Blood ಬಗ್ಗೆ ನಿಮಗೆ ತಿಳಿದಿದೆಯೇ: ವಿಶ್ವದಲ್ಲಿಯೇ ಅಪರೂಪದ ರಕ್ತವಿದು

4. ಅಲರ್ಜಿ ಕೂಡ ದೂರವಾಗುತ್ತದೆ:
ನಿಮ್ಮ ಚರ್ಮದ ಮೇಲೆ ನೀವು ಯಾವುದೇ ರೀತಿಯ ಅಲರ್ಜಿಯನ್ನು ಹೊಂದಿದ್ದರೆ ಅರಿಶಿನವು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅರಿಶಿನದಲ್ಲಿರುವ ಗುಣಲಕ್ಷಣಗಳು ಅಲರ್ಜಿಯನ್ನು ಸುಲಭವಾಗಿ ತೆಗೆದುಹಾಕುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News