Vastu Tips for Married People: ಪತಿ-ಪತ್ನಿ ನಡುವಿನ ವೈಮನಸ್ಯ ದೂರಮಾಡಲು ಈ ವಾಸ್ತು ಸಲಹೆ ಅನುಸರಿಸಿ

Vastu Tips for Married People:  ನಿಮ್ಮ ಮನೆಯಲ್ಲಿ ಪದೇ ಪದೇ ಜಗಳಗಳು ನಡೆಯುತ್ತಿದ್ದರೆ ಅದರ ಹಿಂದೆ ವಾಸ್ತು ದೋಷವಿರಬಹುದು. ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳಲಿದ್ದೇವೆ, ಅವುಗಳನ್ನು ಅನುಸರಿಸಿ ನಿಮ್ಮ ವೈವಾಹಿಕ ಜೀವನದ ಎಲ್ಲಾ ತೊಂದರೆಗಳು ದೂರ ಮಾಡಬಹುದು.  

Written by - Yashaswini V | Last Updated : Nov 11, 2021, 08:07 AM IST
  • ಮನೆಯಲ್ಲಿನ ಜಗಳಗಳ ಹಿಂದೆ ವಾಸ್ತು ದೋಷಗಳಿರಬಹುದು
  • ಈ ಮಂತ್ರವನ್ನು ಪಠಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ
  • ಈ ಕ್ರಮಗಳನ್ನು ನಂಬಿಕೆಯಿಂದ ಮಾಡಿ, ಆಗ ಮಾತ್ರ ನಿಮ್ಮ ಆಸೆ ಈಡೇರುತ್ತದೆ
Vastu Tips for Married People: ಪತಿ-ಪತ್ನಿ ನಡುವಿನ ವೈಮನಸ್ಯ ದೂರಮಾಡಲು ಈ ವಾಸ್ತು ಸಲಹೆ ಅನುಸರಿಸಿ title=
Vastu Tips for Married People

Vastu Tips for Married People: ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು ಸಹಜ. ಇಬ್ಬರು ವ್ಯಕ್ತಿಗಳಿರುವಲ್ಲೆಲ್ಲಾ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ. ಆದರೆ ಸಣ್ಣ ವ್ಯತ್ಯಾಸಗಳು ಭಿನ್ನಾಭಿಪ್ರಾಯಗಳಾಗಿ ಬೆಳೆದರೆ, ಅದು ಆತಂಕದ ವಿಷಯವಾಗುತ್ತದೆ. ನಂತರ ಇದು ಜಗಳಕ್ಕೆ ಕಾರಣವಾಗುತ್ತದೆ. ಇದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ವೈಯಕ್ತಿಕ ಜೀವನದಲ್ಲಿ ಇಂತಹ ತೊಂದರೆಗಳನ್ನು ಅನುಭವಿಸುತ್ತಿದ್ದರೆ, ನಾವು ನಿಮಗೆ ಕೆಲವು ಸುಲಭ ಪರಿಹಾರಗಳನ್ನು ಹೇಳಲಿದ್ದೇವೆ, ಅವುಗಳನ್ನು ಮಾಡುವುದರಿಂದ, ನಿಮ್ಮ ಜೀವನದಲ್ಲಿ ಮತ್ತೆ ಸಂತೋಷವನ್ನು ಪಡೆಯಬಹುದು. 

ಮನೆಯಲ್ಲಿ ಶಿವ-ಪಾರ್ವತಿಯರ ಮೂರ್ತಿ ಇಡಿ:
ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ದೈನಂದಿನ ಜಗಳಗಳನ್ನು ತೊಡೆದುಹಾಕಲು ಶಿವ-ಪಾರ್ವತಿಯ ವಿಗ್ರಹ ಅಥವಾ ಚಿತ್ರದ ಮುಂದೆ ತುಪ್ಪದ ದೀಪವನ್ನು ನಿಯಮಿತವಾಗಿ ಬೆಳಗಿಸಿ. ಇದರೊಂದಿಗೆ, ಪ್ರತಿದಿನ ಶಿವ ಚಾಲೀಸಾವನ್ನು ಪಠಿಸುವಾಗ, ನಿಮ್ಮ ಇಚ್ಛೆಗಳನ್ನು ಹೇಳಿಕೊಳ್ಳಿ. ನೆನಪಿನಲ್ಲಿಡಿ, ಈ ಕ್ರಮಗಳನ್ನು ನಂಬಿಕೆಯಿಂದ ಮಾಡಿ, ಆಗ ಮಾತ್ರ ನಿಮ್ಮ ಆಸೆ ಈಡೇರುತ್ತದೆ.

ಇದನ್ನೂ ಓದಿ- Flick Eye: ಕಣ್ಣುಗಳು ಏಕೆ ಅದರುತ್ತವೆ? ಇದರ ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ತಿಳಿಯಿರಿ

ಈ ಮಂತ್ರವನ್ನು ಪಠಿಸಿ:
ನಿಮ್ಮ ವೈವಾಹಿಕ ಜೀವನವನ್ನು (Married Life) ಸಂತೋಷಪಡಿಸಲು ನೀವು ಮಾತಂಗಿ ಯಂತ್ರವನ್ನು ಮನೆಗೆ ತರಬೇಕು. ಇದರ ನಂತರ, ನಿಯಮಿತವಾಗಿ ಅದರ ಮುಂದೆ ಕುಳಿತು 'ಓಂ ಹ್ರೀಂ ಕ್ಲೀಂ ಹೂಂ ಮಾತಂಗ್ಯೈ ಫಟ್ಸ್ವಾಹಾ' ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ಮಾತ್ರ ಇರುತ್ತದೆ.

ಶುಕ್ರವಾರದಂದು ಈ ಪರಿಹಾರವನ್ನು ಮಾಡಿ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ಶುಕ್ರವಾರದಂದು, ಕನ್ಯೆಯರನ್ನು ಕರೆದು ಅವರಿಗೆ ಬಿಳಿ ಸಿಹಿ ಪದಾರ್ಥಗಳನ್ನು ತಿನ್ನಿಸಿ. ಇದನ್ನು ಶುಕ್ಲ ಪಕ್ಷದಿಂದ ಪ್ರಾರಂಭಿಸಿ 11, 21 ಅಥವಾ 51 ಶುಕ್ರವಾರ ಮಾಡಿ. ರಾತ್ರಿ ಮಲಗುವಾಗ ಗಂಡನ ತಲೆಗೆ ಸಿಂಧೂರವನ್ನು ಇಟ್ಟು ಕರ್ಪೂರವನ್ನು ಇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿಯೂ ಶಾಂತಿ ನೆಲೆಸುತ್ತದೆ.

ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣನ ಚಿತ್ರವನ್ನು ಇರಿಸಿ: 
ವೈವಾಹಿಕ ಜೀವನದಲ್ಲಿ ಶಾಂತಿಗಾಗಿ, ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣನ ಚಿತ್ರವನ್ನು ಇರಿಸಿ. ಇದಲ್ಲದೇ ಮನೆಯ ಬಾಗಿಲಿಗೆ ತುಪ್ಪದಲ್ಲಿ ಸಿಂಧೂರವನ್ನು ಬೆರೆಸಿ ಗೋಡೆಯ ಮೇಲೆ ಸ್ವಸ್ತಿಕವನ್ನು ಬರೆಯುವುದರಿಂದ ವಾಸ್ತು ದೋಷಗಳು ಕಡಿಮೆಯಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ- Tulsi Plant : ನಿಮ್ಮ ಮನೆ ಮುಂದಿನ ತುಳಸಿ ಗಿಡ ಒಣಗಿ ಹೋಗಿದೆಯೇ? ಹಾಗಿದ್ರೆ ಹೀಗೆ ಮಾಡಿ ಮತ್ತೆ ಚಿಗುರುತ್ತದೆ 

ಪ್ರಾಣಿಗಳ ಫೋಟೋ ಇಡುವುದನ್ನು ತಪ್ಪಿಸಿ:
 ವಾಸ್ತು ಪ್ರಕಾರ, ಯಾವುದೇ ಸಮಯದಲ್ಲಿ ಸಿಂಹ, ಚಿರತೆಯಂತಹ ಕಾಡು ಪ್ರಾಣಿಗಳ ಚಿತ್ರಗಳನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಇಂತಹ ಚಿತ್ರಗಳನ್ನು ಮನೆಯಲ್ಲಿ ಹಾಕುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ. ಇದು ಮನೆಯ ಜನರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುವುದು.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ.  ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News