Vastu Tips For Money : ನೀವು ಮಾಡು ಈ ಕೆಲಸಗಳೇ ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣ!

Vastu Tips For Money : ದೈನಂದಿನ ಜೀವನದಲ್ಲಿ, ನೀವು ಕೆಲ ತಪ್ಪುಗಳನ್ನು ಮಾಡುತ್ತಿರುತ್ತೀರಿ, ಅದರ ಬಗ್ಗೆ ನಿಮಗೆ ಅರಿವಿರುವುದಿಲ್ಲ. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಈ ತಪ್ಪುಗಳು ತುಂಬಿ ಅಪಾಯವಾಗಿವೆ. ಈ ದೋಷಗಳನ್ನು ಸರಿಯಾದ ಸಮಯದಲ್ಲಿ ಸರಿಪಡಿಸದಿದ್ದರೆ, ವಾಸ್ತು ದೋಷಗಳು ಉಂಟಾಗಬಹುದು.

Written by - Channabasava A Kashinakunti | Last Updated : Jan 20, 2023, 06:57 PM IST
  • ದೈನಂದಿನ ಜೀವನದಲ್ಲಿ, ನೀವು ಕೆಲ ತಪ್ಪುಗಳು
  • ನಿಮ್ಮ ಆರ್ಥಿಕ ಸ್ಥಿತಿಯು ದುರ್ಬಲಗೊಳ್ಳಲು ಪ್ರಾರಂಭ
  • ಜೀವನದಲ್ಲಿ ಬಡತನವು ನಿಮ್ಮನ್ನು ಕಾಡುತ್ತದೆ
Vastu Tips For Money : ನೀವು ಮಾಡು ಈ ಕೆಲಸಗಳೇ ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣ! title=

Vastu Tips For Money : ದೈನಂದಿನ ಜೀವನದಲ್ಲಿ, ನೀವು ಕೆಲ ತಪ್ಪುಗಳನ್ನು ಮಾಡುತ್ತಿರುತ್ತೀರಿ, ಅದರ ಬಗ್ಗೆ ನಿಮಗೆ ಅರಿವಿರುವುದಿಲ್ಲ. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಈ ತಪ್ಪುಗಳು ತುಂಬಿ ಅಪಾಯವಾಗಿವೆ. ಈ ದೋಷಗಳನ್ನು ಸರಿಯಾದ ಸಮಯದಲ್ಲಿ ಸರಿಪಡಿಸದಿದ್ದರೆ, ವಾಸ್ತು ದೋಷಗಳು ಉಂಟಾಗಬಹುದು. ಈ ಕಾರಣದಿಂದಾಗಿ, ನಿಮ್ಮ ಆರ್ಥಿಕ ಸ್ಥಿತಿಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ . ಜೀವನದಲ್ಲಿ ಬಡತನವು ನಿಮ್ಮನ್ನು ಕಾಡುತ್ತದೆ. ನೀವು ಮಾಡುವ ತಪ್ಪುಗಳು ಇಲ್ಲಿವೆ..

ರಾತ್ರಿ ಮನೆ ಕಸ ಗುಡಿಸುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು ಎಂದು ಹೇಳಲಾಗುತ್ತದೆ. ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ. ಅದಕ್ಕೆ, ರಾತ್ರಿ ಕಸ ಗುಡಿಸಿದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಈ ಕಾರಣದಿಂದಾಗಿ, ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಗುತ್ತದೆ.

ರಾತ್ರಿ ಊಟ ಮಾಡಿದ ನಂತರ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮುಸುರೆ ಪಾತ್ರೆಗಳನ್ನು ಸಹ ಸಮಯಕ್ಕೆ ತೊಳೆಯಬೇಕು. ಜನರು ಸಾಮಾನ್ಯವಾಗಿ ರಾತ್ರಿಯ ಊಟದ ನಂತರ, ಅವರು ಬೆಳಿಗ್ಗೆ ತೊಳೆಯಲು ಮುಸುರೆ ಪಾತ್ರೆಗಳನ್ನು ಬಿಟ್ಟುಬಿಡುತ್ತಾರೆ. ಹೀಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆಗೆ ಅಗೌರವವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದಲ್ಲ. ಇದು ತಪ್ಪು ಅಭ್ಯಾಸ. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗಬಹುದು ಮತ್ತು ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಂಚರಿಸಲು ಪ್ರಾರಂಭಿಸುತ್ತದೆ. ಇದರಿಂದ ಜೀವನದಲ್ಲಿ ಬಡತನವಿದ್ದು ಮನೆಯ ಸುಖ-ಶಾಂತಿಯೂ ದೂರವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿಯಲ್ಲಿ ಬಟ್ಟೆ ಒಗೆಯಬಾರದು. ಇದರ ಹಿಂದಿನ ಕಾರಣವೆಂದರೆ ನಕಾರಾತ್ಮಕ ಶಕ್ತಿಗಳು ರಾತ್ರಿಯಲ್ಲಿ ಹೆಚ್ಚು ಪರಿಣಾಮಕಾರಿ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಲ್ಲಿ ಬಟ್ಟೆಗಳನ್ನು ತೊಳೆದರೆ, ನಂತರ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸುತ್ತಲು ಪ್ರಾರಂಭಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಯಾರಿಗಾದರೂ ಹಣವನ್ನು ನೀಡಲು ಬಯಸಿದರೆ, ಸೂರ್ಯಾಸ್ತದ ನಂತರ ಅದನ್ನು ನೀಡದಿರಲು ಪ್ರಯತ್ನಿಸಿ. ಸೂರ್ಯಾಸ್ತದ ನಂತರ ಹಣ ನೀಡುವುದರಿಂದ ಸಾಲದ ಹೊರೆ ಹೆಚ್ಚುತ್ತದೆ ಮತ್ತು ಹಣದ ನಷ್ಟ ಪ್ರಾರಂಭವಾಗುತ್ತದೆ. ಇದರೊಂದಿಗೆ ಮನೆಯ ಸುಖ-ಶಾಂತಿಯೂ ದೂರವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News