ನವದೆಹಲಿ: ತೂಕ ಇಳಿಕೆ ಮಾಡಲು ನೀವು ಬೇವಿನ ಹೂವುಗಳು ಮತ್ತು ನಿಂಬೆಯನ್ನು ಸಹ ಬಳಸಬಹುದು. ಆಯುರ್ವೇದದಲ್ಲಿ ಬೇವಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಎಲ್ಲರಿಗೂ ತಿಳಿದಿದೆ. ಇದರ ಬಳಕೆಯಿಂದ ತ್ವಚೆಯ ಸಮಸ್ಯೆಯಿಂದ ಹಿಡಿದು ತೂಕ ಹೆಚ್ಚಾಗುವ ಸಮಸ್ಯೆಯನ್ನು ನೀಗಿಸಬಹುದು, ಆದರೆ ನೀವು ಎಂದಾದರೂ ತೂಕ ಇಳಿಸಲು ಬೇವಿನ ಹೂವುಗಳನ್ನು ಬಳಸಿದ್ದೀರಾ? ನೀವು ಬೇವಿನ ಹೂವುಗಳ ಚಹಾವನ್ನು ಸೇವಿಸಿದರೆ, ನಿಮ್ಮ ತೂಕವು ವೇಗವಾಗಿ ಇಳಿಕೆಯಾಗಲು ಆರಂಭಿಸುತ್ತದೆ. (Lifestyle News In Kannada)
ತೂಕ ಇಳಿಸಿಕೊಳ್ಳಲು ಬೇವಿನ ಹೂವಿನ ಚಹಾವನ್ನು ಸೇವಿಸಬಹುದು. ಆದರೆ, ಈ ಚಹಾ ತಯಾರಿಸಲು ನಿಮಗೆ ಹೆಚ್ಚು ಪರಿಶ್ರಮ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮೊದಲು ನೀವು ತಾಜಾ ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಈ ಹೂವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರ ನಂತರ ಅದನ್ನು 1 ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಈ ಚಹಾ ಸಿದ್ಧವಾಗಲಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಸೇವಿಸುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ.
ಇದನ್ನೂ ಓದಿ-ಬೂದು ಬಣ್ಣಕ್ಕೆ ತಿರುಗುತ್ತಿರುವ ನಿಮ್ಮ ಕಪ್ಪು ಕೂದಲನ್ನು ಈ ರೀತಿ ನೈಸರ್ಗಿಕವಾಗಿ ಕಪ್ಪಾಗಿಸಿ!
ಜೇನುತುಪ್ಪದ ಜೊತೆಗೆ ಬೇವಿನ ಹೂವುಗಳನ್ನು ಬಳಸಿ ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬಹುದು
ಇದಲ್ಲದೇ ಬೇವಿನ ಹೂವು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಬಳಸುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಈ ಎರಡರ ಸಂಯೋಜನೆಯು ನಿಮ್ಮ ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಬಳಸಲು, ಕೆಲವು ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಅವುಗಳನ್ನು ಚೆನ್ನಾಗಿ ಪುಡಿಮಾಡಿ. ಇದರ ನಂತರ 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ. ಇದರೊಂದಿಗೆ, ನೀವು ಬೇವಿನ ಚಹಾಕ್ಕೆ ನಿಂಬೆಯನ್ನೂ ಸಹ ಸೇರಿಸಬಹುದು.
ಇದನ್ನೂ ಓದಿ-ತೂಕ ಇಳಿಕೆಗೆ ಈ ಪಾನೀಯ ಒಂದು ರಾಮಬಾಣ ಉಪಾಯ? ಹೇಗೆ ಸೇವಿಸಬೇಕು ಇಲ್ಲಿ ತಿಳಿದುಕೊಳ್ಳಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ