ನವದೆಹಲಿ : ಗುರುವಾರದ ಉಪವಾಸವನ್ನು (Thursaday fasting) ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ಉಪವಾಸವು ಬೃಹಸ್ಪತಿ ದೇವನಿಗೆ ಸಂಬಂಧಿಸಿದ್ದಾಗಿದೆ. ಗುರುವಾರ ಉಪವಾಸ ಮಾಡಿದರೆ, ವಿಷ್ಣು ಮತ್ತು ಗುರುವಿನ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಈ ವೃತಾಚರಣೆಯಿಂದ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಸಿಗುತ್ತದೆ ಎನ್ನುವುದು ನಂಬಿಕೆ. ಇದಲ್ಲದೇ ಈ ವೃತದಿಂದ ಮಕ್ಕಳು, ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಗುರುವಾರದ ವೃತದಲ್ಲಿ ದೋಷವಿದ್ದರೆ (fasting dosha) ವೃತದ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮುಟ್ಟಿನ ಸಂದರ್ಭದಲ್ಲಿ ಉಪವಾಸ ಮಾಡಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಹೆಣ್ಣು ಮಕ್ಕಳನ್ನು ಸಹಜವಾಗಿಯೇ ಕಾಡುತ್ತಿರುತ್ತದೆ (thursday fasting vidhi).
ಮುಟ್ಟಿನ ಅವಧಿಯಲ್ಲಿ ಉಪವಾಸ ಮಾಡಬೇಕೇ ಅಥವಾ ಬೇಡವೇ? :
ಗುರುವಾರದ ಉಪವಾಸದಲ್ಲಿ (thursday fasting) ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಗುರುವಾರದ ಉಪವಾಸ ವೃತವನ್ನು ಆಚರಿಸಬಾರದು (thursday fasting method). ಧಾರ್ಮಿಕ ನಂಬಿಕೆಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ ಉಪವಾಸ ಮಾಡುವುದಿಲ್ಲ. ಇದಲ್ಲದೆ, ಈ ಅವಧಿಯಲ್ಲಿ ದೇವತೆಗಳ ಆರಾಧನೆಯನ್ನು ಸಹ ನಿಷೇಧಿಸಲಾಗಿದೆ. ಹೀಗಾಗಿ, ಗುರುವಾರದ ಉಪವಾಸ ಮಾಡುವವರು ಈ ಬಗ್ಗೆ ತಿಳಿದು ಕೊಂಡಿರಬೇಕು.
ಇದನ್ನೂ ಓದಿ : Lucky Daughters : ಈ 3 ರಾಶಿಯ ಹೆಣ್ಣುಮಕ್ಕಳು ತಮ್ಮ ತಂದೆಗೆ ತುಂಬಾ ಅದೃಷ್ಟವಂತರಂತೆ!
ಗುರುವಾರದ ಉಪವಾಸದ ವೇಳೆ ನೆನಪಿರಲಿ ಈ ವಿಚಾರಗಳು :
ಗುರುವಾರ ಉಪವಾಸ ಮಾಡುವವರು ತಪ್ಪಿಯೂ ಕೂಡಾ ಕೂದಲು, ಗಡ್ಡ, ಉಗುರು ಕತ್ತರಿಸಬಾರದು (hair cut on thursday). ಏಕೆಂದರೆ ಹೀಗೆ ಮಾಡುವುದರಿಂದ ಉಪವಾಸದ ಫಲ ಸಿಗುವುದಿಲ್ಲ. ಇದಲ್ಲದೆ, ಈ ಉಪವಾಸದ ಸಮಯದಲ್ಲಿ ಮನೆಯಿಂದ ಕಸ ಅಥವಾ ಬೇಡದ ವಸ್ತುಗಳನ್ನು ಮನೆಯಿಂದ ಹೊರ ಹಾಕಬಾರದು. ಇಷ್ಟೇ ಅಲ್ಲ, ಗುರುವಾರದ ಉಪವಾಸದಲ್ಲಿ ಉಪ್ಪು (salt) ಸೇವನೆಯನ್ನು ಸಹ ನಿಷೇಧಿಸಲಾಗಿದೆ.
ಮದುವೆ ಮತ್ತು ಮಕ್ಕಳಿಗೆ ಏನು ಮಾಡಬೇಕು?
ಅಕಾಲಿಕ ವಿವಾಹ ಮತ್ತು ಮಕ್ಕಳಿಗಾಗಿ ಗುರುವಾರ ಉಪವಾಸವನ್ನು ಆಚರಿಸಿ. ಬೆಳಿಗ್ಗೆ ಸ್ನಾನದ ನಂತರ, ಸೂರ್ಯನಿಗೆ ಅರಿಶಿನ ಬೆರೆಸಿದ ನೀರನ್ನು ಅರ್ಪಿಸಿ. ಇದರ ನಂತರ, ಗುರುವಿನ ಮಂತ್ರವನ್ನು (ಓಂ ಬೃಹಸ್ಪತಯೇ ನಮಃ) ಜಪಿಸಿ.
ಇದನ್ನೂ ಓದಿ : ಬೆಳ್ಳಿಯನ್ನು ಈ ರೀತಿಯಲ್ಲಿ ಬಳಸಿದರೆ, ಹೊಳೆಯುತ್ತದೆ ಅದೃಷ್ಟ, ಆದರೆ ಈ ರಾಶಿಯವರು ಬೆಳ್ಳಿಯಿಂದ ದೂರವಿರಿ
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.