ನವದೆಹಲಿ: ಅಡಿಲೇಡ್ನ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ನೆದರಲ್ಯಾಂಡ್ ಸೋಲಿನ ರುಚಿ ತೋರಿಸಿದೆ. ಟಿ-20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ದೊಡ್ಡ ನಿರಾಸೆ ಅನುಭವಿಸಿದ್ದು, ಟೂರ್ನಿಯಿಂದಲೇ ಹೊರಬಿದ್ದಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೆದರಲ್ಯಾಂಡ್ ನಿಗದಿತ 20 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 158 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಟಾರ್ಗೆಟ್ ಬೆನ್ನತ್ತಿದ ದ.ಆಫ್ರಿಕಾ ನೆದರಲ್ಯಾಂಡ್ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.
ನೆದರಲ್ಯಾಂಡ್ ಪರ ಬಾಸ್ ಡಿ ಲೀಡೆ(41), ಸ್ಟೀಫನ್ ಮೈಬರ್ಗ್(37), ಟಾಮ್ ಕೂಪರ್(35), ಮ್ಯಾಕ್ಸ್ ಓಡೌಡ್(29) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ನೆದರಲ್ಯಾಂಡ್ ಮಾರಕ ಬೌಲಿಂಗ್ ದಾಳಿ ಸಿಲುಕಿ ನಲುಗಿತು. ಪರಿಣಾಮ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ತೆಂಬ ಬವುಮ ಪಡೆಯ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಬೇಕಾಯಿತು. ನೆದರಲ್ಯಾಂಡ್ ಪರ ಬೌಲಿಂಗ್ನಲ್ಲಿ ಬ್ರಾಂಡನ್ ಗ್ಲೋವರ್ 3, ಬಾಸ್ ಡಿ ಲೀಡೆ ಮತ್ತು ಫ್ರೆಡ್ ಕ್ಲಾಸೆನ್ ತಲಾ 2 ವಿಕೆಟ್ ಪಡೆದ ಮಿಂಚಿದರು.
WHAT A WIN! 🤩
Netherlands defeat South Africa in their final Group 2 match of #T20WorldCup#SAvNED |📝: https://t.co/uV2K8BEShf pic.twitter.com/FiN3eRnDim
— T20 World Cup (@T20WorldCup) November 6, 2022
ಇದನ್ನೂ ಓದಿ: World Cup 2022 ಫೈನಲ್ ನಲ್ಲಿ ಇಂಡೋ-ಪಾಕ್ ಮುಖಾಮುಖಿ! ಹೇಗೆ ಸಾಧ್ಯ? ಏನಿದು ಲೆಕ್ಕಾಚಾರ?
ಪಾಕಿಸ್ತಾನಕ್ಕೆ ಸುವರ್ಣಾವಕಾಶ!
ನೆದರಲ್ಯಾಂಡ್ ಕೈಯಲ್ಲಿ ಹೀನಾಯ ಸೋಲು ಕಂಡ ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಿಂದ ಗಂಟುಮೂಟೆ ಕಟ್ಟಿದೆ. ಇಂದಿನ ಪಂದ್ಯದ ಫಲಿತಾಂಶದಿಂದ ನಿರಾಸೆಯ ಕಾರ್ಮೋಡದಲ್ಲಿದ್ದ ಪಾಕಿಸ್ತಾನಕ್ಕೆ ತಂಡಕ್ಕೆ ಮರಭೂಮಿಯಲ್ಲಿ ನೀರು ಸಿಕ್ಕಂತಾಗಿದೆ. ಇಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲಿದೆ. ಒಂದ ವೇಳೆ ಸೋತರೆ ಬಾಂಗ್ಲಾದೇಶಕ್ಕೆ ಅವಕಾಶವಿದೆ.
ಹೀಗಾಗಿ ಇಂದಿನ ಮತ್ತೊಂದು ಪಂದ್ಯದ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ದಕ್ಷಿಣ ಆಫ್ರಿಕಾ ಸೋಲುವ ಮೂಲಕ ಭಾರತದ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ. ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ್ದ ಜಿಂಬಾಬ್ವೆ ತಂಡ ಟೀಂ ಇಂಡಿಯಾವನ್ನು ಸೋಲಿಸಲು ಸಜ್ಜಾಗಿದೆ. ಇದೀಗ ಭಾರತ ತಂಡ ಜಿಂಬಾಬ್ವೆ ಮೇಲೆ ಸೋತರೂ ಸೆಮಿಫೈನಲ್ ಪ್ರವೇಶಿಸಲಿದೆ. ಐಸಿಸಿ ಟೂರ್ನಿಗಳಲ್ಲಿ ನಿರಾಸೆಗಳ ಮೇಲೆ ನಿರಾಸೆ ಅನುಭವಿಸುತ್ತಿದ್ದ ದ.ಆಫ್ರಿಕಾ ತಂಡಕ್ಕೆ ಒಂದು ಉತ್ತಮ ಅವಕಾಶವಿತ್ತು. ಆದರೆ ಆ ಅವಕಾಶವನ್ನು ಕೈಚೆಲ್ಲುವ ಮೂಲಕ ದ.ಆಫ್ರಿಕಾ ತಂಡ ಮತೊಮ್ಮೆ ದೊಡ್ಡ ನಿರಾಸೆ ಅನುಭವಿಸಿದೆ.
ಇದನ್ನೂ ಓದಿ: T20 World Cup 2022: ಲೈಂಗಿಕ ದೌರ್ಜನ್ಯ ಆರೋಪ: ಸಿಡ್ನಿಯಲ್ಲಿ ಸ್ಟಾರ್ ಕ್ರಿಕೆಟಿಗ ಬಂಧನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.