Chandra Grahan 2022 : ನಾಳೆ ಅಂದರೆ ನವೆಂಬರ್ 8 ರಂದು ವರ್ಷದ ಕೊನೆಯ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. 15 ದಿನಗಳ ಹಿಂದೆ ಈ ವರ್ಷದ ಕೊನೆಯ ಸೂರ್ಯಗ್ರಹಣ ಗೋಚರಿಸಿತ್ತು. ವರ್ಷದ ಕೊನೆಯ ಚಂದ್ರಗ್ರಹಣವು ಭಾರತದ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ. ಅದರಲ್ಲಿಯೂ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. ಭಾರತದಲ್ಲಿ, ಈ ಚಂದ್ರಗ್ರಹಣವು ಪೂರ್ವ ರಾಜ್ಯಗಳಲ್ಲಿ ಚಂದ್ರೋದಯದೊಂದಿಗೆ ಮಾತ್ರ ಗೋಚರಿಸುತ್ತದೆ. ಈ ಚಂದ್ರಗ್ರಹಣವು ಸಂಪೂರ್ಣ ಚಂದ್ರಗ್ರಹಣವಾಗಿರುವುದರಿಂದ, ಅದರ ಸೂತಕ ಅವಧಿಯು ಮಾನ್ಯವಾಗಿರುತ್ತದೆ.
ಮೇಷ ರಾಶಿಯಲ್ಲಿ ಚಂದ್ರಗ್ರಹಣ :
ವರ್ಷದ ಕೊನೆಯ ಚಂದ್ರಗ್ರಹಣವು ಮೇಷ ರಾಶಿ ಮತ್ತು ಭರಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಗ್ರಹಣ ಪರಿಣಾಮ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಾಣಿಸಿಕೊಳ್ಳಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಚಂದ್ರಗ್ರಹಣವು ನವೆಂಬರ್ 8 ರಂದು ಸಂಜೆ 5.20 ಕ್ಕೆ ಆರಂಭವಾಗಿ, ಸಂಜೆ 6.20 ಕ್ಕೆ ಕೊನೆಗೊಳ್ಳುತ್ತದೆ. ಇದರ ಸೂತಕ ಅವಧಿಯು ನವೆಂಬರ್ 8 ರ ಬೆಳಿಗ್ಗೆ 8.21 ಕ್ಕೆ ಪ್ರಾರಂಭವಾಗುತ್ತದೆ.
ಇದನ್ನೂ ಓದಿ : Chandra Grahan 2022: ಚಂದ್ರಗ್ರಹಣದಂದು ವಿನಾಶಕಾರಿ ಷಡಾಷ್ಟಕ ಯೋಗ.. ತಪ್ಪದೇ ಈ ಪರಿಹಾರ ಮಾಡಿಕೊಳ್ಳಿ
ಚಂದ್ರಗ್ರಹಣ ಸಮಯ :
ಭಾರತೀಯ ಕಾಲಮಾನ ಮಧ್ಯಾಹ್ನ 1.32ರಿಂದ ವಿಶ್ವದಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಮಾತ್ರ ಸಂಜೆ ಚಂದ್ರೋದಯದೊಂದಿಗೆ ಗ್ರಹಣ ಕಾಣಿಸಿಕೊಳ್ಳಲಿದೆ. ಸಂಪೂರ್ಣ ಚಂದ್ರಗ್ರಹಣವು ದೇಶದ ಪೂರ್ವ ಭಾಗಗಳಾದ ಇಟಾನಗರ, ಕೋಲ್ಕತ್ತಾ, ಪಾಟ್ನಾ, ಸಿಲಿಗುರಿ, ಗುವಾಹಟಿ ಮತ್ತು ರಾಂಚಿಯಲ್ಲಿ ಗೋಚರಿಸುತ್ತದೆ. ಇನ್ನು ಅನೇಕ ನಗರಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ. ಈ ಚಂದ್ರಗ್ರಹಣವು ಈಶಾನ್ಯ ಯುರೋಪ್, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ.
ಭಾರತದ ನಗರಗಳಲ್ಲಿ ಚಂದ್ರಗ್ರಹಣದ ಆರಂಭದ ಸಮಯ :
ಬೆಂಗಳೂರು ಸಂಜೆ 5.49
ದೆಹಲಿ ಸಂಜೆ 5.28
ನೋಯ್ಡಾ ಸಂಜೆ 5.30
ಅಮೃತಸರ ಸಂಜೆ 5.32
ಲಕ್ನೋ ಸಂಜೆ 5.16
ಭೋಪಾಲ್ ಸಂಜೆ 5.36
ಲುಧಿಯಾನ ಸಂಜೆ 5.34
ಜೈಪುರ ಸಂಜೆ 5.37
ಶಿಮ್ಲಾ ಸಂಜೆ 5.20
ಮುಂಬೈ ಸಂಜೆ 6.01
ಕೋಲ್ಕತ್ತಾ ಸಂಜೆ 4.52
ರಾಯಪುರ ಸಂಜೆ 5.21
ಪಾಟ್ನಾ ಸಂಜೆ 5.00
ಇಂದೋರ್ ಸಂಜೆ 5.43
ಡೆಹ್ರಾಡೂನ್ ಸಂಜೆ 5.22
ಉದಯಪುರ ಸಂಜೆ 5.49
ಗಾಂಧಿನಗರ ಸಂಜೆ 5.55
ಇದನ್ನೂ ಓದಿ : Baba Vanga Predictions: ರಷ್ಯಾ vs ಅಮೆರಿಕ, 3ನೇ ವಿಶ್ವ ಯುದ್ಧದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.