ICC Men's T20 World Cup : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ಎಡವಿದ್ದೆಲ್ಲಿ?

ಇಲ್ಲಿನ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿದೆ. ಆ ಮೂಲಕ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ನುಚ್ಚುನೂರಾಗಿದೆ. 

Written by - Zee Kannada News Desk | Last Updated : Nov 10, 2022, 05:47 PM IST
  • ಪದೇ ಪದೇ, ಟಾಪ್ ಆರ್ಡರ್ ನಲ್ಲಿ ಭಾರತ ತಂಡದ ಆರಂಭಿಕ ಜೋಡಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದೆ.
  • ಅದರಲ್ಲೂ ಕೆ.ಎಲ್.ರಾಹುಲ್ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
  • ಇನ್ನೊಂದೆಡೆಗೆ ರೋಹಿತ್ ಶರ್ಮಾ ಕೇವಲ ಒಂದು ಅರ್ಧಶತಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ICC Men's T20 World Cup : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ಎಡವಿದ್ದೆಲ್ಲಿ? title=

ಅಡಿಲೇಡ್: ಇಲ್ಲಿನ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿದೆ. ಆ ಮೂಲಕ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ನುಚ್ಚುನೂರಾಗಿದೆ.

2019 ರ ಏಕದಿನ ಪಂದ್ಯದ ವಿಶ್ವಕಪ್, 2021 ರ ಟಿ 20 ವಿಶ್ವಕಪ್ ಅಥವಾ 2022 ರ ಟಿ 20 ವಿಶ್ವಕಪ್ ಆವೃತ್ತಿ, ಭಾರತ ನಿರಸ ಪ್ರದರ್ಶನವನ್ನು ಮುಂದುವರೆಸಿದೆ.ಹಾಗಾದರೆ ಸದ್ಯ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೋಲಲಿಕ್ಕೆ ಪ್ರಮುಖ ಕಾರಣಗಳೇನು ಎನ್ನುವುದನ್ನು ನಾವು ತಿಳಿಯಬೇಕಾಗಿದೆ.

ಇದನ್ನೂ ಓದಿ: Dandruff Remedies: ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಮನೆಮದ್ದುಗಳು

ಪವರ್‌ಪ್ಲೇಯಲ್ಲಿ ಬ್ಯಾಟ್ಸಮನ್ ಗಳಲ್ಲಿ ಸ್ಪಷ್ಟ ಆಟದ ಕೊರತೆ

ಪದೇ ಪದೇ, ಟಾಪ್ ಆರ್ಡರ್ ನಲ್ಲಿ ಭಾರತ ತಂಡದ ಆರಂಭಿಕ ಜೋಡಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದೆ.ಅದರಲ್ಲೂ ಕೆ.ಎಲ್.ರಾಹುಲ್ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇನ್ನೊಂದೆಡೆಗೆ ರೋಹಿತ್ ಶರ್ಮಾ ಕೇವಲ ಒಂದು ಅರ್ಧಶತಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಈ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ಭಾರತ ತಂಡವು ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿತು.

ವೇಗದ ಬೌಲರ್ ಕೊರತೆ:

ಜಸ್ಪ್ರೀತ್ ಬುಮ್ರಾ ಗಾಯಗೊಂಡ ನಂತರ, ಅವರ ಸ್ಥಾನವನ್ನು ತುಂಬ ಬಲ್ಲ ಆಟಗಾರನ್ಯಾರು ಎನ್ನುವ ಪ್ರಶ್ನೆಗಳೆಲ್ಲಾ ಈ ಸಂದರ್ಭದಲ್ಲಿ ಉದ್ಬವಿಸಿದವು. ಯಾಕೆಂದರೆ ಟೀಮ್ ಇಂಡಿಯಾದಲ್ಲಿ ಬುಮ್ರಾ ರೀತಿಯಲ್ಲಿ ವೇಗದ ಬೌಲರ ಇಲ್ಲದೆ ಇರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ವಯಸ್ಸಾದ ಆಟಗಾರರ  ಮೇಲೆ ಅತಿಯಾದ ಅವಲಂಬನೆ:

ನಾಯಕ ರೋಹಿತ್ ಶರ್ಮಾ ಈಗಾಗಲೇ 35 ವರ್ಷ ವಯಸ್ಸಿನವರಾಗಿದ್ದಾರೆ, ಆದರೆ ವಿರಾಟ್ ಕೊಹ್ಲಿ ಅವರು 34 ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್, ದೀರ್ಘಕಾಲದವರೆಗೆ ಆಡದಿದ್ದರೂ  32. ದಿನೇಶ್ ಕಾರ್ತಿಕ್, 37. ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಇಬ್ಬರಿಗೂ 32 ವರ್ಷ ವಯಸ್ಸಾಗಿದೆ. ಟೂರ್ನಿಯುದ್ದಕ್ಕೂ ಕೊಹ್ಲಿಯನ್ನು ಹೊರತುಪಡಿಸಿ, ಈ ಆಟಗಾರರು ಯಾರೂ ನಿರೀಕ್ಷಿಸಿದ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ.

ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ಆಡಲು ಇಷ್ಟವಿಲ್ಲದಿರುವುದು:

ಭಾರತವು T20 ವಿಶ್ವಕಪ್‌ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದೆ (ಸೂಪರ್ 12 ನಲ್ಲಿ 5 ಮತ್ತು 1 ಸೆಮಿಫೈನಲ್). ಈ ಯಾವುದೇ ಪಂದ್ಯಗಳಲ್ಲಿ 15 ಜನರ ತಂಡದಲ್ಲಿ ಏಕೈಕ ಮಣಿಕಟ್ಟಿನ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಬಳಸಿಕೊಳ್ಳಲಿಲ್ಲ.ಬದಲಾಗಿ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮೇಲೆ ಹೆಚ್ಚಾಗಿ ಅವಲಂಭಿಸಲಾಯಿತು.ಮಣಿಕಟ್ಟಿನ ಸ್ಪಿನ್ನರ್‌ಗಳು T20 ಕ್ರಿಕೆಟ್‌ನಲ್ಲಿ ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News