ನವದೆಹಲಿ: ಭಾರತೀಯ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರು ಮುಂಬರುವ ಗುಜರಾತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ತಮ್ಮ ಪತ್ನಿ ರಿವಾಬಾ ಅವರನ್ನು ಅಭಿನಂದಿಸಿದ್ದಾರೆ ಮತ್ತು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Chandra Grahan 2022: ಚಂದ್ರಗ್ರಹಣದಂದು ವಿನಾಶಕಾರಿ ಷಡಾಷ್ಟಕ ಯೋಗ.. ತಪ್ಪದೇ ಈ ಪರಿಹಾರ ಮಾಡಿಕೊಳ್ಳಿ
ಈ ಕುರಿತಾಗಿ ಪೋಸ್ಟ್ ಮಾಡಿರುವ ಜಡೇಜಾ, "ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದಿದ್ದಕ್ಕಾಗಿ ನನ್ನ ಹೆಂಡತಿಗೆ ಅಭಿನಂದನೆಗಳು. ನೀವು ಮಾಡಿದ ಎಲ್ಲಾ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಬಗ್ಗೆ ಹೆಮ್ಮೆ ಇದೆ. ನಿಮಗೆ ನನ್ನ ಶುಭಾಶಯಗಳು, ನೀವು ಮುಂದುವರೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಿ' ಎಂದರು.ಇನ್ನೊಂದೆಡೆಗೆ ರವೀಂದ್ರ ಜಡೇಜಾ ತನ್ನ ಪೋಸ್ಟ್ ನಲ್ಲಿ ಪತ್ನಿಯ ಹೆಸರನ್ನು ಉಲ್ಲೇಖಿಸದಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Jai hind 🇮🇳 pic.twitter.com/JWdbV0brab
— Ravindrasinh jadeja (@imjadeja) November 10, 2022
ಇದನ್ನೂ ಓದಿ: Dandruff Remedies: ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಮನೆಮದ್ದುಗಳು
ಇಂದು ಬಿಡುಗಡೆಯಾದ 160 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾಮ್ನಗರ ಉತ್ತರ ಕ್ಷೇತ್ರಕ್ಕೆ ಬಿಜೆಪಿಯ ರಿವಾಬಾ ಜಡೇಜಾ ಆಯ್ಕೆಯಾಗಿದ್ದಾರೆ. ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಎಂ ಜಡೇಜಾ ಅವರನ್ನು ಪಕ್ಷ ಕೈಬಿಟ್ಟಿದೆ.
ರಿವಾಬಾ ಜಡೇಜಾ ಶಿಕ್ಷಣದಿಂದ ಮೆಕ್ಯಾನಿಕಲ್ ಇಂಜಿನಿಯರ್. ಕಾಂಗ್ರೆಸ್ ಹಿರಿಯ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿ, ಅವರು 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ಕುಟುಂಬದ ರಜಪೂತ ಪರಂಪರೆಯನ್ನು ಹೊಂದಿದ್ದು, ಜಾಮ್ ನಗರ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ಈಗ ಅವರು ಸಕ್ರಿಯ ರಾಜಕಾರಣಿಯಾಗಿದ್ದಾರೆ.ಕಳೆದ ಕೆಲವು ತಿಂಗಳುಗಳಿಂದ, ಅವರು ಬೆಂಬಲವನ್ನು ಸಂಗ್ರಹಿಸಲು ಹಳ್ಳಿಗಳಲ್ಲಿ ಸಂಚರಿಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ, ಈ ವರ್ಷ ಏಷ್ಯಾಕಪ್ ವೇಳೆ ಮೊಣಕಾಲಿನ ಗಾಯದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.