People Scared Listening: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹದೊಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರ ಹಿಂದಿನ ಕಥೆ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ. ಬೆಳಗಿನ ಜಾವ 3 ಗಂಟೆಗೆ ಯಾರದ್ದಾದರೂ ಧ್ವನಿ ಕೇಳಿದರೆ, ಅದರಲ್ಲೂ ಹಾರರ್ ಸಿನಿಮಾದ ಹಾಡು ಕೇಳಿಸಿದರೆ ನಿಮಗೆ ಹೇಗನಿಸಬಹುದು. ಒಮ್ಮೆ ಯೋಚಿಸಿ ನೋಡಿ.
ಇದನ್ನೂ ಓದಿ: Shradha Murder Case: ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?
ನೆಲಮಾಳಿಗೆಯಲ್ಲಿ ಜನರು ಇದ್ದಕ್ಕಿದ್ದಂತೆ ‘ಮೇರೆ ಡೋಲ್ ನಾ…’ ಹಾಡನ್ನು ಕೇಳುತ್ತಾರೆ. ಇದು ಕನ್ನಡದ ಆಪ್ತಮಿತ್ರ ಸಿನಿಮಾದ ಹಿಂದಿ ರಿಮೇಕ್ ಸಿನಿಮಾವಾದ ‘ಭೂಲ್ ಭುಲಯ್ಯ’ ಸಿನಿಮಾದ ಹಾಡು. ಕನ್ನಡದಲ್ಲಿ ನಾಗವಲ್ಲಿ ಎಂಬ ತೆಲುಗು ನಾಟ್ಯಗಾರ್ತಿಯ ಆತ್ಮ ‘ರಾ..ರಾ..’ ಎಂಬ ಹಾಡನ್ನು ಹಾಡಿದ್ದರೆ, ಹಿಂದಿಯಲ್ಲಿ ಮಂಜುಲಿಕಾ ಎಂಬಾಕೆಯ ಆತ್ಮ ಹಾಡಿರುವ ಹಾಡಾಗಿದೆ. ಈ ಸಿನಿಮಾ ಕಂಡ ಎಂಥವರಿಗೂ ಈ ಹಾಡನ್ನು ಕೇಳಿದರೆ ಮೈ ಜುಂ ಎನಿಸದೆ ಇರದು.
ಈ ವಿಡಿಯೋದಲ್ಲಿ ಮಂಜುಲಿಕಾ ಇಲ್ಲ. ಹೊರತಾಗಿ ಈ ಸಿನಿಮಾದ ಹಾಡನ್ನು ಯುವತಿಯೋರ್ವಳು ಹಾಡಿದ್ದಾಳೆ. ಈ ಗಾಯಕಿಯ ಹೆಸರು ಶ್ರೇಯಾ ಬಸು. ಮೊದಲು ನೀವೂ ಈ ವೈರಲ್ ವಿಡಿಯೋ ನೋಡಲೇಬೇಕು.
ಈ ಹಾಡನ್ನು ಬೆಳಗಿನ ಜಾವ 3 ಗಂಟೆಗೆ ಹಾಡುತ್ತಿದ್ದರಿಂದ ಸುತ್ತಮುತ್ತಲಿನ ಜನರು ಭಯಭೀತಗೊಳ್ಳುವಂತೆ ಮಾಡಿದೆ. ವೀಡಿಯೊದಲ್ಲಿ ಕಂಡುಬರುವ ಗಾಯಕಿ ದಿ ವಾಯ್ಸ್ ಇಂಡಿಯಾ ಕಿಡ್ಸ್ 2016 ರ ಫೈನಲಿಸ್ಟ್ ಆಗಿದ್ದಾರೆ. ಶ್ರೇಯಾ ಬಸು ಅವರ ಧ್ವನಿಯಲ್ಲಿ ಭೂಲ್ ಭುಲಯ್ಯ ಸಿನಿಮಾದ ಈ ಪ್ರಸಿದ್ಧ ಹಾಡು ತುಂಬಾ ಮಧುರವಾಗಿ ಧ್ವನಿಸುತ್ತದೆ. ಆದರೆ ಎಲ್ಲರೂ ಮಲಗಿರುವಾಗ ಇಂತಹ ಹಾಡು ಕೇಳಿದರೆ ಬೆವರಿಳಿಯುವುದು ಖಂಡಿತ. ಮಂಜುಲಿಕಾನೇ ಬಂದು ಈ ಹಾಡನ್ನು ಹಾಡುತ್ತಿದ್ದಾರೆ ಎಂದು ಅನಿಸುತ್ತದೆ.
ಇದನ್ನೂ ಓದಿ: Shraddha Walkar Murder Case: ಶ್ರದ್ಧಾ ಮೃತದೇಹ ಇಟ್ಟಿದ್ದ ಫ್ರಿಡ್ಜ್ ಇದುವೇ! ಶವದ ಜೊತೆ ಆಹಾರವನ್ನು ಇಟ್ಟಿದ್ದನಂತೆ ಕ್ರೂರಿ!
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಭೂಲ್ ಭುಲಯ್ಯಾ ಸಿನಿಮಾದ ಹಾಡು 2007 ರಲ್ಲಿ ಬಿಡುಗಡೆಯಾಯಿತು ಮತ್ತು ಶ್ರೇಯಾ ಘೋಷಾಲ್ ಅವರ ಮಾಂತ್ರಿಕ ಧ್ವನಿಯನ್ನು ಜನರು ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರ (ಸಾಮಾಜಿಕ ಮಾಧ್ಯಮ ಬಳಕೆದಾರರು) ವಿಭಿನ್ನ ಪ್ರತಿಕ್ರಿಯೆಗಳನ್ನು ಸಹ ನೋಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.