Today Astrology(27-11-2022): ಮೇಷ ರಾಶಿಯ ಜನರು ಯಾರಿಗೂ ಸಾಲವನ್ನು ಕೊಡಬಾರದು. ಸಿಂಹ ರಾಶಿಯವರ ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ. ಕುಂಭ ರಾಶಿಯವರು ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಕುಟುಂಬದಲ್ಲಿನ ವಾದ-ವಿವಾದಗಳು ಕೊನೆಗೊಳ್ಳುತ್ತವೆ. ಯಾರಿಗೂ ಸಾಲವನ್ನು ಕೊಡಬೇಡಿ.
ಅದೃಷ್ಟದ ಬಣ್ಣ- ಅರಿಶಿನ
ವೃಷಭ ರಾಶಿ: ಶೀಘ್ರದಲ್ಲೇ ಆಸ್ತಿ ಖರೀದಿಸಬಹುದು. ಸ್ನೇಹಿತರ ಬೆಂಬಲ ಸಿಗಲಿದೆ. ಹಠಾತ್ ವಿತ್ತೀಯ ಲಾಭದ ಮುನ್ಸೂಚನೆ ಇದೆ.
ಅದೃಷ್ಟದ ಬಣ್ಣ- ನೀಲಿ
ಮಿಥುನ ರಾಶಿ: ಕೆಲಸದ ಹೊರೆ ಕಡಿಮೆ ಇರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಯಾವ ಮೂಲದಿಂದಾದರೂ ಹಣ ಪಡೆಯುವ ಬಲವಾದ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ- ಹಸಿರು
ಕರ್ಕ ರಾಶಿ: ಪ್ರಮುಖ ಕೆಲಸಗಳು ನಿಲ್ಲಬಹುದು. ಸಂಗಾತಿಯೊಂದಿಗೆ ವಾಗ್ವಾದ ಇರುತ್ತದೆ. ವ್ಯಾಪಾರದಲ್ಲಿ ನೀವು ಅಂದಕೊಂಡಂತೆ ಲಾಭವಾಗಲಿದೆ.
ಅದೃಷ್ಟದ ಬಣ್ಣ- ಆಕಾಶ ನೀಲಿ
ಇದನ್ನೂ ಓದಿ: Chanakya Niti: ಇಂತಹ ಮಡದಿಯರು ತಮ್ಮ ಪತಿಯ ಅದೃಷ್ಟದ ಬಾಗಿಲನ್ನೇ ತೆರೆಯುತ್ತಾರೆ
ಸಿಂಹ ರಾಶಿ: ಉದ್ಯೋಗದಲ್ಲಿ ತೀವ್ರತರ ಬದಲಾವಣೆ ಇರುತ್ತದೆ. ಆರೋಗ್ಯದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ. ಹಣದ ಖರ್ಚು ಹೆಚ್ಚಾಗಲಿದೆ.
ಅದೃಷ್ಟದ ಬಣ್ಣ- ಕೆಂಪು
ಕನ್ಯಾ ರಾಶಿ: ದಾಂಪತ್ಯ ಸಮಸ್ಯೆ ಕೊನೆಗೊಳ್ಳಲಿದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಬೇರೆಯವರಿಗೆ ನೀಡಿದ ಹಣ ಸಿಗಲಿದೆ.
ಅದೃಷ್ಟದ ಬಣ್ಣ- ನೀಲಿ
ತುಲಾ ರಾಶಿ: ಹೊಸ ಮನೆ ಖರೀದಿ ನಡೆಯಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ.
ಅದೃಷ್ಟದ ಬಣ್ಣ- ಕಂದು
ವೃಶ್ಚಿಕ ರಾಶಿ: ಆರೋಗ್ಯ ಸುಧಾರಿಸಲಿದೆ. ಉನ್ನತ ಅಧಿಕಾರಿಗಳಿಂದ ಲಾಭವಾಗಲಿದೆ. ಸಾಲ ಕೊಟ್ಟ ಹಣ ಮುಳುಗಬಹುದು.
ಅದೃಷ್ಟದ ಬಣ್ಣ- ಕಂದು
ಇದನ್ನೂ ಓದಿ: Rakta Chandana Remedies: ಎಷ್ಟೇ ಕಷ್ಟಪಟ್ಟರು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗುತ್ತಿಲ್ಲವೇ? ಈ ಉಪಾಯ ಟ್ರೈ ಮಾಡಿ
ಧನು ರಾಶಿ: ಈ ದಿನವು ಸೋಮಾರಿತನದಿಂದ ತುಂಬಿರುತ್ತದೆ. ಮಗುವಿನ ಕಾರಣದಿಂದ ಚಿಂತಿಸುವಿರಿ. ನಿಮ್ಮ ಮನೆಗೆ ಅತಿಥಿಯ ಆಗಮನವನ್ನು ನಿರೀಕ್ಷಿಸಲಾಗಿದೆ.
ಅದೃಷ್ಟದ ಬಣ್ಣ- ಕೆಂಪು
ಮಕರ ರಾಶಿ: ಉದ್ಯೋಗ ಪಡೆಯುವಲ್ಲಿ ತೊಂದರೆಗಳು ಉಂಟಾಗುತ್ತವೆ. ಸಂಗಾತಿಯೊಂದಿಗಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯಲ್ಲಿ ಸಮಯ ಕಳೆಯಿರಿ.
ಅದೃಷ್ಟದ ಬಣ್ಣ- ಆಕಾಶ ನೀಲಿ
ಕುಂಭ ರಾಶಿ: ವಿದೇಶ ಪ್ರವಾಸಕ್ಕೆ ಹೋಗಬಹುದು. ಸ್ಥಗಿತಗೊಂಡ ಹಣ ಸಿಗಲಿದೆ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ.
ಅದೃಷ್ಟದ ಬಣ್ಣ - ಬೂದು
ಮೀನ ರಾಶಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಹೊಸ ಉದ್ಯೋಗಾವಕಾಶ ಸಿಗಲಿದೆ. ಮನೆ ಸ್ವಚ್ಛಗೊಳಿಸುವತ್ತ ಗಮನ ಹರಿಸಿ.
ಅದೃಷ್ಟದ ಬಣ್ಣ - ಕ್ಯಾರೆಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.