ನಾನು ಯಾವ ದೇವರನ್ನೂ ಅವಮಾನಿಸಿಲ್ಲ; ಸಿದ್ದರಾಮಯ್ಯ ಸ್ಪಷ್ಟನೆ

ಸಿದ್ದರಾಮಯ್ಯ ಅವರು ಶ್ರೀರಾಮನ ಪೋಟೋಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು, ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಇತ್ತೀಚಿಗೆ ಹರಿದಾಡಿತ್ತು. 

Last Updated : Nov 10, 2018, 03:02 PM IST
ನಾನು ಯಾವ ದೇವರನ್ನೂ ಅವಮಾನಿಸಿಲ್ಲ; ಸಿದ್ದರಾಮಯ್ಯ ಸ್ಪಷ್ಟನೆ title=

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮನ ಪೋಟೋಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು, ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಿತ್ತು. ಇದೀಗ ಆ ಸುದ್ದಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 

"ನನ್ನನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೋಸ್ಟ್'ಗಳು ಶೇರ್ ಆಗುತ್ತಿವೆ. ನಾನು ಯಾವ ದೇವರ ಫೋಟೋಗೂ ಅವಮಾನ ಮಾಡಿಲ್ಲ. ಅಷ್ಟಕ್ಕೂ ಆ ಚಿತ್ರದಲ್ಲಿರುವ ವ್ಯಕ್ತಿ ನನ್ನಂತೆ ಕಾಣುವುದೂ ಇಲ್ಲ, ನಮ್ಮ ಪಕ್ಷಕ್ಕೆ ಸೇರಿದವನೂ ಅಲ್ಲ, ಹಾಗೆಯೇ ಅದಕ್ಕೆ ನಾನು ಜವಾಬ್ದಾರನೂ ಅಲ್ಲ" ಎಂದು ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಇಂಥ ನಕಲಿ ಸುದ್ದಿಗಳಿಗೆ ಕಿವಿಗೊಡಬೇಡಿ, ನಂಬಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ. 

ಕರ್ನಾಟಕದಲ್ಲಿ ಹಿಂದುಗಳನ್ನು ಅಗೌರವಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಶ್ರೀರಾಮನ ಫೋಟೋಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಮುಸಲ್ಮಾನರನ್ನು ಸೆಳೆಯಲು, ಖುಷಿಪಡಿಸಲು ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಈಗಲೇ ಇದನ್ನು ಶೇರ್ ಮಾಡಿ, ಜನತೆಗೆ ಕಾಂಗ್ರೆಸ್ ಬಣ್ಣ ಬಯಲುಮಾಡಿ ಎಂದು ಬರೆಯುವ ಮೂಲಕ ಫೇಸ್ಬುಕ್ನಲ್ಲಿ ಬಿಜೆಪಿ ಕಾರ್ಯಕರ್ತ(ಆ ಅಕೌಂಟ್ ಈಗ ಡಿಲೀಟ್ ಆಗಿದೆ)ನೊಬ್ಬ ಶೇರ್ ಮಾಡಿದ್ದ. ಈ ಪೋಸ್ಟ್ 5 ಸಾವಿರಕ್ಕೂ ಹೆಚ್ಚು ಶೇರ್ ಆಗಿತ್ತು. ಈ ಬಗ್ಗೆ ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 
 

Trending News