ಸಚಿನ ಕ್ರಿಕೆಟ್ ಗೆ ಪಾದಾರ್ಪಣೆಗೊಂಡು ಇಂದಿಗೆ 29 ವರ್ಷ!

ಬರೋಬ್ಬರಿ ನವಂಬರ್ 15 ಕ್ಕೆ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆಗೊಂಡು ಒಟ್ಟು 29 ವರ್ಷವಾಯಿತು. 

Last Updated : Nov 15, 2018, 01:42 PM IST
 ಸಚಿನ ಕ್ರಿಕೆಟ್ ಗೆ ಪಾದಾರ್ಪಣೆಗೊಂಡು ಇಂದಿಗೆ 29 ವರ್ಷ!  title=

ನವದೆಹಲಿ: ಬರೋಬ್ಬರಿ ನವಂಬರ್ 15 ಕ್ಕೆ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆಗೊಂಡು ಒಟ್ಟು 29 ವರ್ಷವಾಯಿತು. 

ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಸ್ವತಃ ತಮ್ಮ ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಟ್ವೀಟ್ ನಲ್ಲಿ ಸಚಿನ ಅವರು ಪ್ರತಿಕ್ರಿಯಿಸುತ್ತಾ" ಪ್ರತಿವರ್ಷ ಈ ಹಲವಾರು ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಈ ದಿನ ಮೊದಲ ಬಾರಿಗೆ  ಭಾರತವನ್ನು  ಪ್ರತಿನಿಧಿಸಿದ್ದು,  ಭಾರತವನ್ನು ೨೪ ವರ್ಷಗಳ ಕಾಲ  ಪ್ರತಿನಿಧಿಸಿದ್ದು ಗೌರವದ ಸಂಗತಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ವಿರುದ್ದದ  ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ನವಂಬರ್ 15 1989 ರಂದು ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು 15 ರನ್ ಗಳನ್ನು ಗಳಿಸಿದ್ದರು.ವಿಶೇಷವೆಂದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ವಾಖರ್ ಯೂನಿಸ್ ಕೂಡ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು.

ಈಗ ಬಿಸಿಸಿಐ ಕೂಡ ಸಚಿನ್ ಅವರು ಟೆಸ್ಟ್ ಗೆ ಪಾದಾರ್ಪಣೆ ಮಾಡಿರುವ ದಿನವನ್ನು ಸ್ಮರಿಸಿ" ಈ ದಿನದಂದು ಗಡಿಯಾರ ಮತ್ತೆ ತಿರುಗಿದಂತೆ 1989 ರಲ್ಲಿ ಸಚಿನ್ ಅವರು ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡಿದರು.2013 ರಲ್ಲಿ ಲೆಜೆಂಡ್ ಆಟಗಾರನಾಗಿ  ಹೊರಬಂದರು ಎಂದು ಟ್ವೀಟ್ ಮಾಡಿದೆ.   
 

Trending News