Kiss Science: ಚುಂಬನದ ಹಿಂದಿನ ಈ ಗುಟ್ಟು ನಿಮಗೆಷ್ಟು ಗೊತ್ತು?

Science Behind Lip Lock: ಚುಂಬನದ ಹಿಂದೆಯೂ ಕೂಡ ಒಂದು ವಿಜ್ಞಾನ ಇದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.  ಚುಂಬನ ನೀಡಿದ ಬಳಿಕ ಕೆಮಿಕಲ್ ಹಾಗೂ ತತ್ವಗಳ ವಿನಿಮಯವಾಗುತ್ತದೆ. ಒಂದು ಮುತ್ತು ಕೇವಲ ಮುತ್ತಾಗಿರುವುದಿಲ್ಲ. ಇದಕ್ಕಾಗಿ ಶರೀರದ 30 ಖಂಡಗಳು ಸಕ್ರೀಯವಾಗುತ್ತವೆ. ಹಾಗಾದರೆ ಬನ್ನಿ ಕಿಸ್ ಹಿಂದೆ ಇರುವ ವಿಜ್ಞಾನವೇನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Dec 12, 2022, 11:11 PM IST
  • ಚುಂಬನದ ಹಿಂದಿನ ವಿಜ್ಞಾನ ನಿಮಗೆ ತಿಳಿದಿದೆಯೇ?
  • ಚುಂಬನದ ವೇಳೆ ಮೆದುಳಿನಿಂದ ಹಿಡಿದು ಶರೀರದ 30 ಖಂಡಗಳು ಸಕ್ರೀಯವಾಗುತ್ತವೆ.
  • ಕೆಲ ಕೆಮಿಕಲ್ ಹಾಗೂ ಬ್ಯಾಕ್ಟೀರಿಯಾಗಳ ವಿನಿಮಯ ಪ್ರಕ್ರಿಯೆ ನಡೆಯುತ್ತದೆ.
Kiss Science: ಚುಂಬನದ ಹಿಂದಿನ ಈ ಗುಟ್ಟು ನಿಮಗೆಷ್ಟು ಗೊತ್ತು? title=
Kiss Science

Science Behind Lip To Lip Kiss- ಚುಂಬನದ ಹಿಂದೆಯೂ ಕೂಡ ಒಂದು ವಿಜ್ಞಾನ ಇದೆ. ವಿಜ್ಞಾನಿಗಳ ಪ್ರಕಾರ 10 ಸೆಕೆಂಡ್ ಅವಧಿಯ 'Kiss' ವೇಳೆ 8 ಕೋಟಿ ಬ್ಯಾಕ್ಟೀರಿಯಾಗಳು ಪರಸ್ಪರರ ಶರೀರದಲ್ಲಿ ಪರಸ್ಪರ ವಿನಿಮಯವಾಗುತ್ತವೆ ಎಂದು ಹೇಳಿದರೆ ನೀವೂ ಬೆಚ್ಚಿಬೀಳಬಹುದು. ಅಷ್ಟೇ ಅಲ್ಲ ಇದರ ಹಲವು ಲಾಭಗಳು ಕೂಡ ಇವೆ ಎಂದು ವಿಜ್ಞಾನ ಹೇಳುತ್ತದೆ. 

ಚುಂಬನದ ಹಿಂದಿನ ವಿಜ್ಞಾನದ ಕೋನ ಇಲ್ಲಿದೆ
ಚುಂಬನದ ಮೂಲಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ವಿನಿಮಯಗೊಂಡರೂ ಕೂಡ, ಕೈ-ಕೈ ಮಿಲಾಯಿಸುವುದರಿಂದ ಜನ ಅನಾರೋತ್ಯಕ್ಕೆ ತುತ್ತಾಗುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳ ಪರಸ್ಪರ ವಿನಿಮಯದ ಬಳಿಕವೂ ಕೂಡ ಅದು ಇಬ್ಬರ ಪಾಲಿಗೆ ಲಾಭದಾಯಕವಾಗಿದೆ ಎಂದು ಇದರ ಹಿಂದಿನ ವಿಜ್ಞಾನ ಹೇಳುತ್ತದೆ.

ಚಿಕ್ಕಂದಿನಿಂದ ವೃದ್ಧಾವಸ್ಥೆಯವರೆಗೆ
ಪ್ರೀತಿಯ ಆರಂಭ ಕೂಡ ತುಟಿಗಳಿಂದಲೇ ಆರಂಭವಾಗುತ್ತದೆ. ಚಿಕ್ಕಂದಿನಲ್ಲಿ ಮಗು ತಾಯಿಯ ಹಾಲು ಸೇವನೆಯ ವೇಳೆ ಅಥವಾ ಬಾಟಲಿ ಹಾಲು ಸೇವಿಸುವ ವೇಳೆ ತುಟಿಗಳನ್ನೇ ಹೆಚ್ಚಾಗಿ ಬಳಸುತ್ತದೆ. ಇದು ಕಿಸ್ಸಿಂಗ್ ಜೊತೆ ಹತ್ತಿರದ ಸಂಬಂಧ ಹೊಂದಿದೆ. ಇದು ಮಕ್ಕಳ ಮೆದುಳಿನ ನ್ಯೂರಲ್/ ನರಗಳ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಇದರಿಂದ ಕಿಸ್ಸಿಂಗ್ ಗೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಿಸುತ್ತದೆ

ಕಿಸ್ ವೇಳೆ ಮನಸ್ಸಿನಲ್ಲಿ ಸುಖದ ಅನುಭವ
ತುಟಿಗಳು ಶರೀರದ ಅತ್ಯಂತ ಎಕ್ಸ್ಪೋಸ್ದ್  ಅಂಗವಾಗಿದೆ ಮತ್ತು ಇದು ಮನುಷ್ಯರಲ್ಲಿ ಕಾಮದ ಭಾವನೆ ಮೂಡಿಸುತ್ತದೆ. ಮನುಷ್ಯರ ತುಟಿಗಳು ಪ್ರಾಣಿಗಳ ವಿಪರೀತ ಎಂಬಂತೆ ಹೊರಗಡೆ ಚಾಚಿಕೊಂಡಿವೆ. ತುಟಿಗಳಲ್ಲಿ ಸಂವೇದನೆ ಹೆಚ್ಚಿಸುವ ನರಗಳ ಭಡಿಮಾರವೇ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ನರಗಳ ಸ್ಪರ್ಶ ಮಾತ್ರದಿಂದ ಮೆದುಳಿಗೆ ಸಿಗ್ನಲ್ ತಲುಪಿಸುತ್ತದೆ ಮತ್ತು ಇದರಿಂದ ಸುಖದ ಅನುಭವ ಹೆಚ್ಚಾಗುತ್ತದೆ. 

ಮೆದುಳಿನ ನರಗಳು ಸಕ್ರೀಯಗೊಳ್ಳುತ್ತವೆ 
ಚುಂಬನ ನಮ್ಮ ಮೆದುಳಿನ ಒಂದು ದೊಡ್ಡ ಭಾಗವನ್ನು ಸಕ್ರೀಯಗೊಳಿಸುತ್ತದೆ. ಇದರಿಂದ ಆಕಸ್ಮಿಕವಾಗಿ ನಮ್ಮ ಮೆದುಳು ಸಕ್ರೀಯಗೊಂಡು ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಮುಂದೆ ಏನಾಗಲಿದೆ ಎಂಬುದನ್ನು ಮೆದುಳು ಆಲೋಚಿಸಲು ಆರಂಭಿಸುತ್ತದೆ. ಕಿಸ್ ಪ್ರಭಾವದಿಂದ ನಮ್ಮ ಶರೀರದಲ್ಲಿರುವ ಹಾರ್ಮೋನ್ ಗಳು ಹಾಗೂ ನ್ಯೂರೋಟ್ರಾನ್ಸ್ಮೀಟರ್ ಗಳು ಮಿಲ್ ರೀತಿ ತಿರುಗಲಾಂಭಿಸುತ್ತವೆ. ಇದರಿಂದ ನಮ್ಮ ಯೋಜನೆ ಹಾಗೂ ಇಮೊಶನ್ ಮೇಲೆ ಪ್ರಭಾವ ಉಂಟಾಗಲು ಶುರುವಾಗುತ್ತದೆ.

ಕಿಸ್ ವೇಳೆ ಈ ಸಂಗತಿಗಳು ವಿನಿಮಯಗೊಳ್ಳುತ್ತವೆ
ಇಬ್ಬರ ತುಟಿಗಳು ಪರಸ್ಪರ ಸೇರಿದಾಗ 9 ಮಿಲಿಗ್ರಾಂ ನೀರು, 0.7 ಮಿಲಿಗ್ರಾಂ ಪ್ರೋಟೀನ್, 0.18 ಮಿಲಿಗ್ರಾಂ ಆರ್ಗ್ಯಾನಿಕ್ ಕಂಪೌಂಡ್ ಗಳು, 0.71 ಮಿಲಿಗ್ರಾಂ ವಿವಿಧ ರೀತಿಯ ಫ್ಯಾಟ್ ಗಳು ಹಾಗೂ 0.45 ಮಿಲಿಗ್ರಾಂ ಸೋಡಿಯಂ ಕ್ಲೋರೈಡ್ ಗಳು ವಿನಿಮಯಗೊಳ್ಳುತ್ತವೆ.  ಶರೀರದ ಕ್ಯಾಲೋರಿ ಬರ್ನ್ ಮಾಡುವ ಕೆಲಸ ಕೂಡ ಕಿಸ್ ಮಾಡುತ್ತದೆ. ಕಿಸ್ ಮಾಡುವ ಜೋಡಿ ನಿಮಿಷಕ್ಕೆ 2 ರಿಂದ 26  ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಈ ಸುಖದ ಅನುಭವದ ವೇಳೆ ಸುಮಾರು 30 ವಿವಿಧ ರೀತಿಯ ಖಂಡಗಳ ಬಳಕೆಯಾಗುತ್ತವೆ.

ಸಂಸ್ಕೃತಿ ಏನು ಹೇಳುತ್ತದೆ
ವಿವಿಧ ಸಂಸ್ಕೃತಿಗಳಲ್ಲಿ ವಿವಿಧ ರೀತಿಯಲ್ಲಿ ಚುಂಬನದ ಮಹತ್ವ ಹೇಳುತ್ತವೆ. ಹಲವು ಬಾರಿ ಚುಂಬನವನ್ನು ಲಾಲಾರಸಗಳ ವಿನಿಮಯ ಎಂದೂ ಕೂಡ ಹೇಳಲಾಗುತ್ತದೆ. ಈ ಚುಂಬನ (Kiss) ಎಲ್ಲಿಂದ ಆರಂಭಗೊಂಡಿತು ಎಂಬುದು ತಿಳಿಯುವುದು ತುಂಬಾ ಆವಶ್ಯಕ. ಈ ಕುರಿತಾದ ಅಧ್ಯಯನಗಳು ಕಿಸ್ ಪರಂಪರೆ 2000 ವರ್ಷಗಳ ಹಿಂದೆ ಪಾಸ್ಚಿಮಾತ್ಯದಲ್ಲಿ ಆರಂಭಗೊಂಡಿತು ಎನ್ನುತ್ತವೆ. ಇನ್ನೊಂದೆಡೆ 2015 ನಡೆಸಲಾಗಿರುವ ಒಂದು ಅಧ್ಯಯನ 168 ಸಂಸ್ಕೃತಿಗಳಲ್ಲಿ ಅರ್ಧದಷ್ಟು ಸಂಸ್ಕೃತಿಗಳು ಕಿಸ್ ಪರಂಪರೆಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನಲಾಗಿದೆ. ಹಲವು ಸಂಸ್ಕೃತಿಗಳಲ್ಲಿ ಇದೊಂದು ಪಾಪ ಎಂದೇ ಹೇಳಲಾಗಿದೆ. 

ಕಿಸ್ ಲಾಭಗಳು 
>> ಸಂಬಂಧ ಗಟ್ಟಿಗೊಳ್ಳುತ್ತದೆ- ಚುಂಬನ ಒಂದು ಸುಖ ನೀಡುವ ಚಟುವಟಿಕೆ. ಶಾರೀರಿಕ ಸಂಬಂಧದ ವೇಳೆಯೂ ಕೂಡ ಇದಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಇದರಿಂದ ಪ್ರೇಮ ವಿನಿಮಯ ಮಾಡಲು ಸಹಕಾರ ಸಿಗುತ್ತದೆ.

>> ಒತ್ತಡ ಕಡಿಮೆ ಮಾಡುತ್ತದೆ - ಕಿಸ್ ಸಂದರ್ಭದಲ್ಲಿ ಮೆದುಳಿನಿಂದ ಸ್ರವಿಸುವ ಕೆಮಿಕಲ್ ಗಳಿಂದ ಮೆದುಳು ಮತ್ತು ಮನಸ್ಸು ಶಾಂತವಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ ಮೆದುಳು ಫ್ರೆಶ್ ಆಗುತ್ತದೆ. 

>> ಮೆಟಾಬಾಲಿಜಂ - ಕಿಸ್ ಮಾಡುವುದರಿಂದ ಕ್ಯಾಲೋರಿ ಬರ್ನ್ ಆಗುತ್ತದೆ, ಇದರಿಂದ ಮೆಟಾಬಾಲಿಜಂ ಪಕ್ರಿಯೆಗೆ ಉತ್ತೇಜನ ಸಿಗುತ್ತದೆ.

>> ಬಾಯಿ ಆರೋಗ್ಯಪೂರ್ಣವಾಗಿರುತ್ತದೆ - ನಮ್ಮ ಬಾಯಿಯ ಲಾಲಾ ರಸದಲ್ಲಿ ವೈರಸ್ ಹಾಗೂ ಬ್ಯಾಕ್ಟೀರಿಯ ಜೊತೆಗೆ ಹೋರಾಡುವ ಹಲವು ಅಂಶಗಳಿರುತ್ತವೆ. ಹೀಗಾಗಿ ಕಿಸ್ ಮಾಡುವುದರಿಂದ ಬಾಯಿ, ಹಲ್ಲುಗಳು ಹಾಗೂ ವಸಡುಗಳು ಆರೋಗ್ಯಪೂರ್ಣವಾಗಿರಿಸುತ್ತವೆ. 

>> ರೋಗಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ - ಸಂಗಾತಿಯ ಬಾಯಿಯೋಳಗಿರುವ ಕ್ರಿಮಿಗಳ ಸಂಪರ್ಕಕ್ಕೆ ಬರುವುದರಿಂದ ರೋಗ ಪರಸ್ಪರರ ರೋಗಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕಿಸ್ ಮಾಡುವುದರಿಂದ ಆಗುವ ಹಾನಿಗಳು 
>> ಕಿಸ್ ಮಾಡುವುದರಿಂದ ಆಗುವ ಹಾನಿಗಳಲ್ಲಿ ಮೊದಲ ಹಾನಿ ಎಂದರೆ ಇದರಿಂದ ಕೆಲ ರೋಗಗಳು ಬೇಗನೆ ಹರಡುತ್ತವೆ. 

>> ಕೆಲ ಸೋಂಕಿತ ಹನಿಗಳು ಗಾಳಿಯಲ್ಲಿಯೂ ಕೂಡ ಇರುತ್ತವೆ. ಈ ಸೋಂಕಿತ ಹನಿಗಳು ಶ್ವಾಸದ ಮೂಲಕ ಶರೀರ ಸೇರಿದರೆ ಇದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ-Spy Device: ಭ್ರಷ್ಟಾಭಾರಿಗಳೇ ಹುಷಾರ್...! ಈ ಮ್ಯಾಚ್ ಬಾಕ್ಸ್ ಸೈಜ್ ಉಪಕರಣ ನಿಮ್ಮನ್ನು ಜೈಲಿಗಟ್ಟಬಹುದು

>> ಮೂಗು ಹಾಗೂ ಗಂಟಲಿನ ಮೂಲಕ ಕೆಲ ಕಣಗಳು ತಮ್ಮ ಗಾತ್ರದ ಕಾರಣ ದೀರ್ಘಕಾಲದವರೆಗೆ ಗಾಳಿಯಲ್ಲಿರುವ ಕ್ಷಮತೆ ಹೊಂದಿರುತ್ತವೆ . ಇವುಗಳನ್ನೂ ನ್ಯೂಕ್ಲೆಟ್ ಗಳೆಂದು ಕರೆಯಲಾಗುತ್ತದೆ. ಇವು ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶಿಸುತ್ತವೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತವೆ. 

ಇದನ್ನೂ ಓದಿ-Year Ender 2022: Srivalli ಯಿಂದ ಹಿಡಿದು ಕಚ್ಚಾ ಬಾದಾಮವರೆಗೆ ಯುಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳಿವು

>>ಕಿಸ್ ಹಲವು ರೀತಿಯ ಇನ್ಫೆಕ್ಷನ್ ಗೂ ಕಾರಣ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News