Treatment For Blood Cancer: ಬ್ಲಡ್ ಕ್ಯಾನ್ಸರ್ ಒಂದು ಅತ್ಯಂತ ಮಾರಣಾಂತಿಕ ಕಾಯಿಲೆಯಾಗಿದ್ದು, ಅದಕ್ಕೆ ಇರುವರೆಗೆ ಯಾವುದೇ ಸೂಕ್ತವಾದ ಚಿಕತ್ಸೆ ಇರಲ್ಲಿಲ್ಲ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಜೀವ ಉಳಿಸಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು ಒಂದು ಕೋಟಿ ಜನರು ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಈ ಸುದ್ದಿ ವರದಾನಕ್ಕೆ ಸಮ ಎಂದರೆ ತಪ್ಪಾಗಲಾರದು. ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಪೀಡಿತ ಹೆಣ್ಣು ಮಗುವಿಗೆ ಬ್ರಿಟನ್‌ನ ಕೆಲವು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಬಾಲಕಿಯ ಚಿಕಿತ್ಸೆ ಯಶಸ್ವಿಯಾಗಿದ್ದು, ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ಇಡೀ ವೈದ್ಯಕೀಯ ಲೋಕಕ್ಕೆ ಒಂದು ಸಂತಸದ ಸುದ್ದಿಯಾಗಿದೆ.
ಇದನ್ನೂ ಓದಿ-Rosie Moore: ಅಪಾಯಕಾರಿ ಜಂತುಗಳನ್ನು ಮೈಮೇಲೆ ಎಳೆದುಕೊಳ್ಳುವ ವಿಶ್ವದ ಹಾಟ್ ಸೈಂಟಿಸ್ಟ್ ಇವಳೇ ನೋಡಿ
ಬಿಬಿಸಿ ವರದಿಯ ಪ್ರಕಾರ, 13 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ಬಾಲಕಿಗೆ ಚಿಕಿತ್ಸೆ ನೀಡಲು ವೈದ್ಯರು ಹೊಸ ರೀತಿಯ ಸೆಲ್ ಥೆರಪಿಯನ್ನು ಬಳಸಿದ್ದಾರೆ. ಈ ಪ್ರಯೋಗವನ್ನು ಮೊದಲ ಬಾರಿಗೆ ನಡೆಸಲಾಗಿದೆ. ಈ ಪ್ರಯೋಗಗಳು ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿವೆ, ಏಕೆಂದರೆ ಹುಡುಗಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.
ಇದನ್ನೂ ಓದಿ-World's Most Venomous Snake: ಒಂದೇ ಏಟಿಗೆ 100 ಜನರನ್ನು ಮಸಣಕ್ಕಟ್ಟುತ್ತಂತೆ ಈ ಹಾವು
ಕ್ಯಾನ್ಸರ್ ಎಂದರೇನು ಮತ್ತು ಅದು ಏಕೆ ಅಪಾಯಕಾರಿ?
ಮನುಷ್ಯನ ದೇಹದಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ಇವುಗಳ ಅಥವಾ ಒಂದಕ್ಕಿಂತ ಹೆಚ್ಚು ಜೀವಕೋಶಗಳ ವಂಶವಾಹಿಗಳಲ್ಲಿ ಬದಲಾವಣೆಯಾದಾಗ ಕ್ಯಾನ್ಸರ್ ಅಪಾಯ ಎದುರಾಗುತ್ತದೆ. ಈ ಜೀನ್‌ಗಳು ಮಾನವ ಡಿಎನ್‌ಎಯ ತುಣುಕುಗಳಾಗಿವೆ, ಅವು ಪ್ರತಿ ಜೀವಕೋಶದೊಳಗೆ ಇರುತ್ತವೆ. ಈ ಜೀನ್‌ಗಳು ಹಾನಿಗೊಳಗಾದಾಗ, ಕ್ಯಾನ್ಸರ್ ಕೋಶಗಳು ಹುಟ್ಟಿಕೊಳ್ಳುತ್ತವೆ. ಕ್ಯಾನ್ಸರ್ ಕೋಶಗಳ ರಚನೆಯಿಂದ ಜೀವಕೋಶಗಳು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರ್ಥ. ಪ್ರಾರಂಭದಲ್ಲಿ ಇದನ್ನು ಪತ್ತೆ ಮಾಡದಿದ್ದರೆ, ಈ ಜೀವಕೋಶಗಳು ಅತ್ಯಂತ ವೇಗವಾಗಿ ಹರಡುತ್ತವೆ ಮತ್ತು ಮೂಲ ಜೀವಕೋಶದ ಸ್ಥಾನವನ್ನು ಪಡೆದುಕೊಳ್ಳುತ್ತವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.