IPL 2023 Mini Auction: ಟೀಂ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಎರಡು ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಅದೇ ಸಮಯದಲ್ಲಿ, ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ಆಟಗಾರರ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆದಿದೆ. ಈ ಬಾರಿಯ ಐಪಿಎಲ್ ಹರಾಜಿನಿಂದ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಆಟಗಾರನನ್ನು ಯಾವುದೇ ತಂಡವು ಖರೀದಿಸುತ್ತಿಲ್ಲ. ಈ ಆಟಗಾರ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗಿದ್ದಾರೆ.
ಇದನ್ನೂ ಓದಿ: IPL 2023 auction: ಬಿಡ್ಡಿಂಗ್ ನಲ್ಲಿ ನ್ಯಾಷನಲ್ ಕ್ರಶ್ ಕವಿಯಾ ಮಾರನ್ ರಿಯಾಕ್ಷನ್ ಗೆ ಫ್ಯಾನ್ಸ್ ಫಿದಾ...!
ಐಪಿಎಲ್ 2023 ರ ಹರಾಜು ಸಾಕಷ್ಟು ಐತಿಹಾಸಿಕವಾಗಿತ್ತು. ಈ ಬಾರಿಯ ಹರಾಜಿನಲ್ಲಿ ದಾಖಲೆ ಮೊತ್ತದ ಮಳೆ ಸುರಿದರೂ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್‌ಗೆ ಖರೀದಿದಾರರು ಸಿಗಲಿಲ್ಲ. ಅಭಿಮನ್ಯು ಈಶ್ವರನ್ ಮೇಲೆ ಯಾವುದೇ ತಂಡ ಬೆಟ್ ಆಡಲಿಲ್ಲ ಮತ್ತು ಅವರು ಮಾರಾಟವಾಗದ ಆಟಗಾರರ ಪಟ್ಟಿಗೆ ಸೇರಿಕೊಂಡರು.
ನಿಯಮಿತ ನಾಯಕ ರೋಹಿತ್ ಶರ್ಮಾ ಗಾಯಗೊಂಡ ನಂತರ ಅಭಿಮನ್ಯು ಈಶ್ವರನ್ ಬಾಂಗ್ಲಾದೇಶ ಪ್ರವಾಸದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಸರಣಿಯಲ್ಲಿ ಅಭಿಮನ್ಯು ಈಶ್ವರನ್ ಎರಡೂ ಪಂದ್ಯಗಳ ಪ್ಲೇಯಿಂಗ್ 11 ರಲ್ಲಿ ತಮ್ಮ ಸ್ಥಾನವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅಭಿಮನ್ಯು ಈಶ್ವರನ್ ಅವರು ಈ ಸರಣಿಗೆ ಮುಂಚೆಯೇ ಅನೇಕ ಸಂದರ್ಭಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಅವರು ಇನ್ನೂ ಚೊಚ್ಚಲ ಪಂದ್ಯವನ್ನು ಆಡಿಲ್ಲ.
ಇದನ್ನೂ ಓದಿ: IPL 2023 Mini Auction : IPL ಹರಾಜಿನಲ್ಲಿ ಸುರಿಯಿತು ಹಣದ ಮಳೆ : ಇಲ್ಲದೆ ಎಲ್ಲಾ ಟೀಂಗಳ ಸ್ಕ್ವಾಡ್ ಲಿಸ್ಟ್!
ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ:
ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುತ್ತಿದ್ದಾರೆ. ಕಳೆದ ಕೆಲವು ಋತುಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ, ಆದರೆ ಅವರು ಇನ್ನೂ ಭಾರತಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅಭಿಮನ್ಯು ಈಶ್ವರನ್ ಇಲ್ಲಿಯವರೆಗೆ 70 ಪ್ರಥಮ ದರ್ಜೆ ಪಂದ್ಯಗಳಲ್ಲಿ 43.22 ಸರಾಸರಿಯಲ್ಲಿ 15 ಶತಕಗಳು ಮತ್ತು 20 ಅರ್ಧ ಶತಕಗಳನ್ನು ಒಳಗೊಂಡಂತೆ 4841 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 233 ಮತ್ತು ಅವರು ಲಿಸ್ಟ್-ಎ ಮತ್ತು ದೇಶೀಯ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.