ನೋ ಪ್ರಾಬ್ಲಂಮ್‌, ಧಾರಾಳವಾಗಿ ಎಲ್ಲವನ್ನೂ ʼಕೇಸರಿʼಕರಣ ಮಾಡಿ

ಶಾಲಾ ಕಟ್ಟಡ ದುರಸ್ತಿ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತಾನ್ನಾಡುವ ಸಂದರ್ಭದಲ್ಲಿ ಧಾರಾಳವಾಗಿ ಎಲ್ಲ ಕೇಸರೀಕರಣ ಮಾಡಿ ನೋ ಪ್ರಾಬ್ಲಂಮ್, ಎನ್ನುವ ಮೂಲಕ, ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಟಾಂಗ್ ನೀಡಿದರು.

Written by - Prashobh Devanahalli | Edited by - Krishna N K | Last Updated : Dec 29, 2022, 12:33 PM IST
  • ಧಾರಾಳವಾಗಿ ಎಲ್ಲ ಕೇಸರೀಕರಣ ಮಾಡಿ ನೋ ಪ್ರಾಬ್ಲಂಮ್.
  • ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಟಾಂಗ್ ನೀಡಿದ ಪ್ರಿಯಾಂಕ್ ಖರ್ಗೆ.
  • ಪಠ್ಯ ಪುಸ್ತಕ ಹಾಗೂ ಕಟ್ಟಡ ಕೇಸರೀಕರಣಕ್ಕೆ ತೋರಿಸಿದ ಆಸಕ್ತಿಯ ಅರ್ಧದಷ್ಟು ಕಟ್ಟಡ ನಿರ್ಮಾಣಕ್ಕೆ ತೋರಿಸುತ್ತಿಲ್ಲ ಕಾಂಗ್ರೆಸ್ ಸದಸ್ಯ.
ನೋ ಪ್ರಾಬ್ಲಂಮ್‌, ಧಾರಾಳವಾಗಿ ಎಲ್ಲವನ್ನೂ ʼಕೇಸರಿʼಕರಣ ಮಾಡಿ title=

ಬೆಳಗಾವಿ : ಶಾಲಾ ಕಟ್ಟಡ ದುರಸ್ತಿ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತಾನ್ನಾಡುವ ಸಂದರ್ಭದಲ್ಲಿ ಧಾರಾಳವಾಗಿ ಎಲ್ಲ ಕೇಸರೀಕರಣ ಮಾಡಿ ನೋ ಪ್ರಾಬ್ಲಂಮ್, ಎನ್ನುವ ಮೂಲಕ, ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಟಾಂಗ್ ನೀಡಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಲಾ ಕಟ್ಟಡ ದುರಸ್ತಿ ಬಗ್ಗೆ ಪ್ರಶ್ನೆ ಮಾಡಿದ ಪ್ರಿಯಾಂಕ್ ಖರ್ಗೆ, ಪಠ್ಯ ಪುಸ್ತಕ ಹಾಗೂ ಕಟ್ಟಡ ಕೇಸರೀಕರಣಕ್ಕೆ ತೋರಿಸಿದ ಆಸಕ್ತಿಯ ಅರ್ಧದಷ್ಟು ಕಟ್ಟಡ ನಿರ್ಮಾಣಕ್ಕೆ ತೋರಿಸುತ್ತಿಲ್ಲ. ತೋರಿಸಿದ್ದರೆ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲ ಆಗ್ತಿತ್ತು, ಎಂದರು. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರ ನೀಡಿ 2013 ರಿಂದ 2018 ರವೆರೆಗೆ ಅಂದಿನ ಸರ್ಕಾರ ಶಾಲಾ ಕಟ್ಟಡ ರಿಪೇರಿ ಮಾಡಿಲ್ಲ, ಅವಾಗಲೇ ದುರಸ್ತಿ ಕಾರ್ಯ ಮಾಡಿದ್ದರೆ ಇಷ್ಟು ಸಮಸ್ಯೆ ಆಗ್ತಿರಲಿಲ್ಲ. ಹೊಸ ಕಟ್ಟಡ ಕಟ್ಟುತ್ತೀವಿ ಎಂದಾಗ ಕೇಸರಿ ಬಣ್ಣದ ವಿವಾದ ಶುರುವಾಯಿತು. ಕೊಠಡಿ ಕಟ್ಟದೇ ಇದ್ದಿದ್ದರೆ ಕೇಸರಿ ಹಸಿರು ಬಣ್ಣ ವಿವಾದ ಬರ್ತಿರಲಿಲ್ಲ. ಕಟ್ಟಡಕ್ಕೆ ಹಸಿರು ಬಣ್ಣ ಹೊಡೆದರೂ ಯಾರೂ ವಿರೋಧ ಮಾಡ್ತಿರಲಿಲ್ಲ. ಪಠ್ಯ ಪುಸ್ತಕದಲ್ಲಿ ಸುಳ್ಳು ಇತಿಹಾಸ ತೆಗೆದು ನಿಜ ಇತಿಹಾಸ ಕೊಡುವ ಪ್ರಯತ್ನ ಮಾಡಿದ್ದೀವಿ, ಎಂದರು.

ಇದನ್ನೂ ಓದಿ: ಕೈದಿಗಳ ಸಂಬಳ ಮತ್ತೆ 3 ಪಟ್ಟು ಜಾಸ್ತಿ: ರಾಜ್ಯದ ಕೈದಿಗಳಿಗೆ ದೇಶದಲ್ಲೇ ಅತಿಹೆಚ್ಚು ಸ್ಯಾಲರಿ..!

ಮಧ್ಯಪ್ರದೇಶ ಮಾಡಿದ ಖರ್ಗೆ,ಅದಕ್ಕೆ, ಬಣ್ಣ ಯಾವುದಾದರೂ‌ ಹಾಕಿ ನಮ್ಮ‌ ವಿರೋಧ ಇಲ್ಲ.ಗುಣಮಟ್ಟದ ಮೂಲಸೌಕರ್ಯ ನೀಡಿ, ಉತ್ತಮ ಸೆಲೆಬೆಸ್ ಎಂದು ನಮ್ಮ ಆಗ್ರಹ.ಧಾರಾಳವಾಗಿ ಎಲ್ಲ ಕೇಸರೀಕರಣ ಮಾಡಿ ನೋ ಪ್ರಾಬ್ಲಂಮ್, ಎಂದರು. ಮತ್ತೆ ಉತ್ತರ ನೀಡಿದ ಸಚಿವ ನಾಗೇಶ್,ಆದರೆ ಪಠ್ಯ ಹಸುರೀಕರಣಕ್ಕೆ ನಾವು ವಿರೋಧಿಸಿಲ್ಲ,ಟಿಪ್ಪು ಸುಲ್ತಾನ್ ಬಗ್ಗೆ ನೀವು ಹಾಕಿದಾಗ ನಾವು ವಿರೋಧಿಸಿಲ್ಲ, ಎಂದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪೈಕಿ ಎಷ್ಟು ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿ ಎಂಬ ಪ್ರಶ್ನೆಗೆ ಸಚಿವರು ನೀಡಿದ ಉತ್ತರದಲ್ಲಿ 60% ಸರ್ಕಾರಿ ಶಾಲೆಯ ದುರಸ್ತಿಯ ಅಗತ್ಯವಿದೆ ಎಂದಿದ್ದಾರೆ.

ರಾಜ್ಯದಲ್ಲಿ ಒಟ್ಟು ಪ್ರಾಥಮಿಕ ಶಾಲೆ 42,239. ಸಣ್ಣ ಮಟ್ಟದ ದುರಸ್ತಿ 13,107, ದೊಡ್ಡ ಮಟ್ಟದ ದುರಸ್ತಿಗೆ 14,373. ಒಟ್ಟು ದುರಸ್ತಿ 27,470 ಆಗಬೇಕಿದೆ. ರಾಜ್ಯದಲ್ಲಿ ಒಟ್ಟು ಪ್ರೌಢಶಾಲೆ 4,819. ಸಣ್ಣ ರಿಪೇರಿ 1,365, ದೊಡ್ಡ ಮಟ್ಟದ ರಿಪೇರಿ 1,056. ಒಟ್ಟು 2,421 ಪ್ರೌಢಶಾಲೆ ದುರಸ್ತಿ ಆಗಬೇಕಿದೆ. ಶೇ.60 ರಷ್ಟು ಶಾಲೆಗಳು ದುರಸ್ತಿ ಆಗಬೇಕಿದೆ. 2,68,203 ಲಕ್ಷ ದುರಸ್ತಿಗೆ ಬೇಕಿದೆ ಅಂತ ವರದಿ ಕೊಟ್ಟಿದ್ದಾರೆ. UDIS ಮತ್ತು SATS ವರದಿಯಲ್ಲಿ ವ್ಯತ್ಯಾಸ ಇದೆ. ಶಾಲೆಗಳ ದುರಸ್ತಿ ಮಾಡಲು ನೀಲಿ ನಕ್ಷೆ ಮಾಡಿಕೊಳ್ಳಲಾಗಿದೆಯಾ.? CSR ಅಡಿ ಅನೇಕ ಶಾಲೆ ಕಟ್ಟಲಾಗಿದೆ ಅಂತ ಹೇಳಿದ್ದು, ಎಷ್ಟು ಶಾಲೆ ಕಟ್ಟಲಾಗಿದೆ ಅಂತ ತಿಳಿಸುವಂತೆ ಮನವಿ ಮಾಡಿದ ಪ್ರಿಯಾಂಕ್ ಖರ್ಗೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News