ರೋಗಗಳ ವಿರುದ್ಧ ಹೋರಾಡಲು ವಿಟಮಿನ್ ಸಿ ಬಹಳ ಮುಖ್ಯ. ವಿಟಮಿನ್ ಸಿ ನೀರಿನಲ್ಲಿ ಕರಗುವ ಕಾರಣ, ಇದು ದೇಹದಲ್ಲಿ ಕನಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ, ವಿಟಮಿನ್ ಸಿ ಯ ಸಾಮಾನ್ಯ ಮಟ್ಟವನ್ನು ಕಾಪಾಡಿಕೊಳ್ಳಲು, ನಿಮ್ಮ ಆಹಾರದಲ್ಲಿ ನೀವು ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಬೇಕು.
ವಿಟಮಿನ್ ಸಿ ಒಂದು ಸರಳವಾದ ಆದರೆ ಪರಿಣಾಮಕಾರಿ ವಿಟಮಿನ್ ಆಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಅದರ ಪಾತ್ರ ಮಹತ್ವದ್ದಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ, ನೆಗಡಿಯಿಂದ ಹಿಡಿದು ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ವಿಟಮಿನ್ ಸಿ ಅತ್ಯಗತ್ಯ. ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಸಹಾಯಕವಾಗುವ ಆಹಾರಗಳು ಯಾವುವು ಎಂದು ತಿಳಿಯಿರಿ.
ಸೀಬೆ ಹಣ್ಣು:
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ನೀವು ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಬಯಸಿದರೆ ನಿಮ್ಮ ಆಹಾರದಲ್ಲಿ ಸೀಬೆ ಹಣ್ಣನ್ನು ಸೇರಿಸಬಹುದು.
ಇದನ್ನೂ ಓದಿ- ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಿ ಬಿಡುತ್ತದೆ ಈ ಹಣ್ಣು
ನಿಂಬೆ ಹಣ್ಣು:
ನಿಂಬೆ ಹಣ್ಣು ಎಲ್ಲಾ ಋತುವಿನಲ್ಲಿಯೂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗಲಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿಂಬೆಹಣ್ಣು ಸೇರಿಸುವುದರಿಂದಲೂ ವಿಟಮಿನ್ ಸಿ ಕೊರತೆಯನ್ನು ನೀಗಿಸಬಹುದು.
ಪರಂಗಿ ಹಣ್ಣು:
ಪರಂಗಿ ಹಣ್ಣಿನಲ್ಲಿ ಕೂಡ ವಿಟಮಿನ್ ಸಿ ಸಮೃದ್ಧವಾಗಿದೆ. ನಿತ್ಯ ಪರಂಗಿ ಹಣ್ಣನ್ನು ಸೇವಿಸುವುದರಿಂದ ವಿಟಮಿನ್ ಸಿ ಕೊರತೆ ಎಂದಿಗೂ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಈ ಮೂರು ಸೊಪ್ಪು ಸೇವಿಸಿದರೆ ಸಾಕು ನಿಯಂತ್ರಣಕ್ಕೆ ಬರುತ್ತದೆ ಡಯಾಬಿಟೀಸ್
ಕಿವಿ ಹಣ್ಣು:
ಕಿವಿ ಹಣ್ಣು ಕೊಂಚ ದುಬಾರಿ ಎನಿಸಿದರೂ ಕೂಡ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಇದು ಬಹಳ ಪ್ರಯೋಜನಕಾರಿ.
ಕಿತ್ತಳೆ:
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.