26ನೇ ರಾಷ್ಟ್ರೀಯ ಯುವ ಜನೋತ್ಸವ: ಗಮನ ಸೆಳೆದ ಸಿರಿಧಾನ್ಯ ಮೇಳ

 ವಿವಿಧ ತಳಿಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಜಿಲ್ಲೆಯಾದ್ಯಂತ ಸಿರಿಧಾನ್ಯ ಬೆಳವಳಿಣಿಗೆಗೆ ಹೆಚ್ಚು ಒತ್ತು ನೀಡಲಾಗುವುದೆಂದರು. ಅತಿಥಿಗಳೆಲ್ಲರು ಸಾವಯವ ಬೆಲ್ಲದ ಚಹಾ ಹಾಗೂ ಮಿಲೆಟ್ ಗಂಜಿಯನ್ನು ಸೇವಿಸಿದರು.

Written by - Zee Kannada News Desk | Last Updated : Jan 14, 2023, 12:41 AM IST
  • ಸಿರಿಧಾನ್ಯ ಹಾಗೂ ಸಾವಯವ ಮೇಳವನ್ನು ಶಾಸಕರಾದ ಅಮೃತ ದೇಸಾಯಿ ಉದ್ಘಾಟಿಸಿದರು.
  • ವಿವಿಧ ತಳಿಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
  • ಅತಿಥಿಗಳೆಲ್ಲರು ಸಾವಯವ ಬೆಲ್ಲದ ಚಹಾ ಹಾಗೂ ಮಿಲೆಟ್ ಗಂಜಿಯನ್ನು ಸೇವಿಸಿದರು.
26ನೇ ರಾಷ್ಟ್ರೀಯ ಯುವ ಜನೋತ್ಸವ: ಗಮನ ಸೆಳೆದ ಸಿರಿಧಾನ್ಯ ಮೇಳ title=

ಧಾರವಾಡ ಕೃಷಿ ಇಲಾಖೆಯಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ದ ಸಿರಿಧಾನ್ಯ ಹಾಗೂ ಸಾವಯವ ಮೇಳವನ್ನು ಶಾಸಕರಾದ ಅಮೃತ ದೇಸಾಯಿ ಉದ್ಘಾಟಿಸಿದರು. ವಿವಿಧ ತಳಿಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಜಿಲ್ಲೆಯಾದ್ಯಂತ ಸಿರಿಧಾನ್ಯ ಬೆಳವಳಿಣಿಗೆಗೆ ಹೆಚ್ಚು ಒತ್ತು ನೀಡಲಾಗುವುದೆಂದರು. ಅತಿಥಿಗಳೆಲ್ಲರು ಸಾವಯವ ಬೆಲ್ಲದ ಚಹಾ ಹಾಗೂ ಮಿಲೆಟ್ ಗಂಜಿಯನ್ನು ಸೇವಿಸಿದರು.

ಇದನ್ನೂ ಓದಿ: Online Fraud: ಆನ್ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 10 ಲಕ್ಷ ರೂ..!

ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಓ ಡಾ: ಸುರೇಶ್ ಇಟ್ನಾಳ, ಕೃಷಿ ಇಲಾಖೆಯ ಜಂಟಿನಿರ್ದೇಶಕ ಐ.ಬಿ. ಬಿಜಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ ವಿವಿಧ ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ, ಸ್ತ್ರೀಶಕ್ತಿ ಗುಂಪುಗಳು, ಖಾಸಗಿ ಕಂಪನಿಗಳು, ವಿವಿಧ ಸಿರಿಧಾನ್ಯ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಿದರು. ಸಿರಿಧಾನ್ಯ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಿದರು. ರಾಗಿ, ಸಜ್ಜೆ, ನವಣೆ, ಅರಕ, ಉದಲು, ಕೊರಲು, ಸಾವೆ, ಬರಗು, ಮುಂತಾದ ಸಿರಿಧಾನ್ಯಗಳಿಂದ ಬ್ರೆಡ್, ಕುಕಿಸ್,ಮಿಲೆಟ್ ಡೋನೆಟ್, ಮಿಲೆಟ್ ರಸ್ಕ್, ಮಿಲೆಟ್ ರೊಟ್ಟಿ ಹಿಟ್ಟು ಸೇರಿ ವಿವಿಧ 25 ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಲಭ್ಯವಾಗಿದೆಯೆಂದರು. ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಸರೋಜಿನಿ ಕರಕಣ್ಣವರ ತಿಳಿಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಸಿರಿಧಾನ್ಯ ಸಂಸ್ಥೆಯಿಂದ ಒಟ್ಟು40 ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.

ಇದನ್ನೂ ಓದಿ : ʼಕೇಸರಿʼ ಮೇಲೆ ಕಂಗನಾ ಕಾಲಿಟ್ಟರೂ ನೋ ಮ್ಯಾಟರ್‌ : ನ್ಯಾಯಾ ಎಲ್ಲಿದೆ..?

ಸಿರಿಧಾನ್ಯಗಳನ್ನು ಮುಖ್ಯ ಆಹಾರದ ಸರಪಳಿಯಲ್ಲಿ ಸೇರಿಸಬೇಕೆಂದು ಪೂಜ್ಯರ ಆಶಯವಾಗಿದೆಯೆಂದು ದಿನೇಶ್ ತಿಳಿಸಿದರು.ಸಿರಿ ಧರ್ಮಸ್ಥಳ ಮಿಲೆಟನಿಂದ 3 ರೈತ ಉತ್ಪಾದಕರ ಕಂಪನಿಗಳನ್ನು ಆರಂಭಿಸಿದ್ದು, 3 ಸಾವಿರ ರೈತರು ಕೊಪ್ಪಳ, ದಾವಣಗೆರೆ, ಚಿತ್ರದುರ್ಗದಲ್ಲಿ ಬೆಳೆಸಲಾಗುತ್ತಿದೆಯೆಂದರು.

ಕುಂದಗೋಳದ ತೀರ್ಥ ಗ್ರಾಮದ ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ವ್ಯವಸ್ಥಾಪಕಿ ಬೀಬಿಜಾನ್ ಮಾತನಾಡಿ ತಾವು ಸುತ್ತಲಿನ ರೈತರಿಗೆ 80 ಕ್ವಿಂಟಾಲ್ ವಿವಿಧ ಸಿರಿಧಾನ್ಯಗಳನ್ನು ಬಿತ್ತಲು ವಿತರಿಸಿದ್ದು, ತಾವೇ ಖರೀದಿಸುವುದಾಗಿ ತಿಳಿಸಿದರು. ಅತ್ಯುತ್ತಮ ಸಹಜ ಹೆಲ್ತಿಮಿಕ್ಸ್ ಬಹುಬೇಡಿಕೆಯಲ್ಲಿದೆಯೆಂದರು.

ರಾಗಿಯಲ್ಲಿ ಕಪ್ಪು ಸಾಸಿವೆ, 140 ದಿನದ ರಾಗಿ, ತೈದಲು ರಾಗಿ, ಗೆಜ್ಜೆರಾಗಿ, ಯಾಡ ರಾಗಿ, ಕರಿಕಡ್ಡಿ ರಾಗಿ, ನೇಪಾಳ ರಾಗಿ, ಕೆಂಪು, ನವಣೆ, ಜಗಳೂರು ರಾಣಿ, ಐಯನರಾಣಿ, ಕೋಳಿಮೊಟ್ಟೆ ರಾಗಿ, ಪಿಚಕಡ್ಡಿ ರಾಗಿ, ಗುಚ್ಚರಾಗಿ, ಕೊಕ್ಕರೆವಾರೆ ರಾಗಿ, ಜೇನುಗೂಡು ರಾಗಿ ಇಷ್ಟು ವೈವಿಧ್ಯಮಯ ಪ್ರಜಾತಿಗಳು ಕಂಡವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News