ನವದೆಹಲಿ: ಹಝರತ್ ನಿಜಾಮುದ್ದೀನ್ ಔಲಿಯ ದರ್ಗಾದಲ್ಲಿ ಮಹಿಳಾ ಪ್ರವೇಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ದೆಹಲಿಯ ಆಪ್ ಸರ್ಕಾರ ಮತ್ತು ಪೊಲೀಸರ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 11 ರಂದು ನಡೆಯಲಿದೆ.
ವಾಸ್ತವವಾಗಿ ಹಜರತ್ ನಿಜಾಮುದ್ದೀನ್ ಔಲಿಯ ದರ್ಗಾದಲ್ಲಿ ಮಹಿಳೆಯರನ್ನು ಪ್ರವೇಶಿಸಲು ಅವಕಾಶ ನೀಡುವಂತೆ ಮಹಿಳಾ ಕಾನೂನು ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ದರ್ಗಾ ಒಂದು ಧಾರ್ಮಿಕ ಆಚರಣೆ ಸ್ಥಳವಾಗಿದ್ದು ದರ್ಗಾದ ಹೊರಗಡೆ ದರ್ಗಾ ಒಳಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಇಂಗ್ಗೀಷ್ ಮತ್ತು ಹಿಂದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.
ದೆಹಲಿ ಪೊಲೀಸರು ಸೇರಿದಂತೆ ಅನೇಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರ ಪರವಾಗಿ, ವಕೀಲ ಕಮಲೇಶ್ ಕುಮಾರ್ ಮಿಶ್ರಾ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಕೇಂದ್ರ ಸರ್ಕಾರವನ್ನು ಹೊರತು ಪಡಿಸಿ, ದೆಹಲಿ ಸರ್ಕಾರ, ಪೊಲೀಸರು ಹಾಗೂ ದರ್ಗಾದ ಆಡಳಿತ ಮಂಡಳಿಗೆ ನೊಟೀಸ್ ನೀಡಿದೆ.