Trans fat foods: 5 ಶತಕೋಟಿ ಜನರು ಈ ವಿಷ ತಿನ್ನುವ ಮೂಲಕ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ!

ಟ್ರಾನ್ಸ್ ಕೊಬ್ಬಿನ ಆಹಾರಗಳು: ಪ್ರಪಂಚದಾದ್ಯಂತ ಸುಮಾರು 5 ಶತಕೋಟಿ ಜನರು ಟ್ರಾನ್ಸ್-ಕೊಬ್ಬಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದು ಹೃದ್ರೋಗ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.

Written by - Puttaraj K Alur | Last Updated : Jan 25, 2023, 10:04 AM IST
  • ಪ್ರಪಂಚದಾದ್ಯಂತ ಸುಮಾರು 500 ಕೋಟಿ ಜನರು ಟ್ರಾನ್ಸ್-ಕೊಬ್ಬಿನಿಂದ ಅಸುರಕ್ಷಿತರಾಗಿದ್ದಾರೆ
  • ಟ್ರಾನ್ಸ್-ಕೊಬ್ಬು ಹೃದಯ ಕಾಯಿಲೆ ಮತ್ತು ಸಾವಿನ ಅಪಾಯ ಹೆಚ್ಚಿಸುತ್ತದೆ
  • ಪ್ಯಾಕ್ ಮಾಡಿದ & ಬೇಯಿಸಿದ ಆಹಾರ, ಅಡುಗೆ ಎಣ್ಣೆಗಳಲ್ಲಿ ಟ್ರಾನ್ಸ್-ಕೊಬ್ಬು ಕಂಡುಬರುತ್ತದೆ
Trans fat foods: 5 ಶತಕೋಟಿ ಜನರು ಈ ವಿಷ ತಿನ್ನುವ ಮೂಲಕ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ! title=
ಟ್ರಾನ್ಸ್ ಕೊಬ್ಬಿನ ಆಹಾರಗಳು

ನವದೆಹಲಿ: WHO ಪ್ರಕಾರ ಪ್ರಪಂಚದಾದ್ಯಂತ ಸುಮಾರು 5 ಶತಕೋಟಿ (500 ಕೋಟಿ) ಜನರು ಟ್ರಾನ್ಸ್-ಕೊಬ್ಬಿನಿಂದ ಅಸುರಕ್ಷಿತರಾಗಿದ್ದಾರೆ. ಇದು ಹೃದಯ ಕಾಯಿಲೆ ಮತ್ತು ಸಾವಿನ ಅಪಾಯ ಹೆಚ್ಚಿಸುತ್ತದೆ. ಟ್ರಾನ್ಸ್-ಕೊಬ್ಬು ಒಂದು ರೀತಿಯ ಅಪರ್ಯಾಪ್ತ ಕೊಬ್ಬು, ಇದು ನೈಸರ್ಗಿಕ ಮತ್ತು ಕೃತಕ ರೂಪದಲ್ಲಿ ಬರುತ್ತದೆ. ಇದು ಸಾಮಾನ್ಯವಾಗಿ ಪ್ಯಾಕ್ ಮಾಡಿದ ಆಹಾರಗಳು, ಬೇಯಿಸಿದ ಆಹಾರಗಳು, ಅಡುಗೆ ಎಣ್ಣೆಗಳು ಮತ್ತು ಸ್ಪ್ರೆಡ್‌ಗಳಲ್ಲಿ ಕಂಡುಬರುತ್ತವೆ.

WHO ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ‘ಆರೋಗ್ಯದ ಅಪಾಯ ಅಧಿಕವಾಗಿರುವಾಗ ಟ್ರಾನ್ಸ್ ಕೊಬ್ಬಿನಿಂದ ಯಾವುದೇ ಪ್ರಯೋಜನವಿಲ್ಲ. ಸರಳವಾಗಿ ಹೇಳುವುದಾದರೆ ಟ್ರಾನ್ಸ್ ಕೊಬ್ಬು ವಿಷಕಾರಿ ರಾಸಾಯನಿಕವಾಗಿದ್ದು, ಇದು ಮನುಷ್ಯರನ್ನು ನಿಧಾನವಾಗಿ ಕೊಲ್ಲುತ್ತದೆ. ಇದು ನೀವು ಸೇವಿಸುವ ಆಹಾರದಲ್ಲಿರಬಾರದು. ನಾವೆಲ್ಲರೂ ಇದನ್ನು ಹೋಗಲಾಡಿಸುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 12,000 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್

2018ರಲ್ಲಿ  WHO ಮೊದಲ ಬಾರಿಗೆ 2023ರ ವೇಳೆಗೆ ಕೃತಕವಾಗಿ ಉತ್ಪತ್ತಿಯಾಗುವ ಟ್ರಾನ್ಸ್ ಕೊಬ್ಬನ್ನು ಪ್ರಪಂಚದಿಂದ ಹೊರಹಾಕಲು ಕರೆ ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 43 ದೇಶಗಳು ಈಗ ಆಹಾರದಲ್ಲಿನ ಟ್ರಾನ್ಸ್-ಕೊಬ್ಬಿನ ವಿರುದ್ಧ ಹೋರಾಡಲು ಉತ್ತ  ನೀತಿಗಳನ್ನು ಜಾರಿಗೆ ತಂದಿವೆ. ಇದು ಜಾಗತಿಕವಾಗಿ 2.8 ಶತಕೋಟಿ ಜನರನ್ನು ರಕ್ಷಿಸುತ್ತದೆ. 5 ಬಿಲಿಯನ್ ಜನರು ಇನ್ನೂ ಈ ಅಪರ್ಯಾಪ್ತ ಕೊಬ್ಬಿನ ಆರೋಗ್ಯದ ಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.

ಹೃದ್ರೋಗ ಮತ್ತು ಟ್ರಾನ್ಸ್ ಫ್ಯಾಟ್‌ನಿಂದ ಸಾವನ್ನಪ್ಪುವ ಹೆಚ್ಚಿನ ಅಪಾಯವಿರುವ 16 ದೇಶಗಳಲ್ಲಿ 9 ದೇಶಗಳು ಈ ದಿಕ್ಕಿನಲ್ಲಿ ಇನ್ನೂ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಂಡಿಲ್ಲವೆಂದು WHO ಹೇಳಿದೆ. ಈ 9 ದೇಶಗಳ ಪೈಕಿ ಆಸ್ಟ್ರೇಲಿಯಾ, ಅಜರ್‌ಬೈಜಾನ್, ಭೂತಾನ್, ಈಕ್ವೆಡಾರ್, ಈಜಿಪ್ಟ್, ಇರಾನ್, ನೇಪಾಳ, ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ ಸೇರಿವೆ. WHO ಈ ದೇಶಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದೆ.

ಇದನ್ನೂ ಓದಿ: ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣ: ಬ್ರಿಟನ್​ ಪ್ರಧಾನಿ ರಿಷಿ ಸುನಕ್‍ಗೆ ದಂಡ..!

ಹೃದಯದ ಮೇಲೆ ಟ್ರಾನ್ಸ್-ಕೊಬ್ಬಿನ ಪರಿಣಾಮಗಳು

ಡೈರಿ ಮತ್ತು ಮಾಂಸದ ಉತ್ಪನ್ನಗಳಲ್ಲಿ ನೈಸರ್ಗಿಕ ಟ್ರಾನ್ಸ್-ತೈಲಗಳು ಕಂಡುಬರುತ್ತವೆ. ಆದರೆ ಈ ಕೊಬ್ಬಿನಾಮ್ಲಗಳ ಕಡಿಮೆ ಸೇವನೆಯಿಂದ ಯಾವುದೇ ಪ್ರಮುಖ ಹಾನಿ ಕಂಡುಬಂದಿಲ್ಲ. ಆದರೆ ಇತರ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಬದಲಿಗೆ ಈ ಟ್ರಾನ್ಸ್-ಕೊಬ್ಬಿನ ಸೇವನೆಯು ಹೃದ್ರೋಗಕ್ಕೆ ನೇರವಾಗಿ ಸಂಬಂಧಿಸಿರುವ LDL (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News