ಇತಿಹಾಸ ಸೃಷ್ಟಿಸಿದ Suryakumar Yadav: ‘ICC T20I ವರ್ಷದ ಕ್ರಿಕೆಟಿಗ-2022’ ಪ್ರಶಸ್ತಿಗೆ ಭಾಜನರಾದ ಮಿಸ್ಟರ್ 360

ICC T20I Cricketer of the Year Suryakumar Yadav: ICC ಪುರುಷರ T20 ವರ್ಷದ ಕ್ರಿಕೆಟಿಗ ಪ್ರಶಸ್ತಿಯು 2021 ರಿಂದ ಪ್ರಾರಂಭವಾಗಿದ್ದು, ಈ ಪ್ರಶಸ್ತಿಯನ್ನು ಮೊದಲು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಸ್ವೀಕರಿಸಿದರು. ಈ ಬಳಿಕ ಸೂರ್ಯಕುಮಾರ್ ಯಾದವ್ ಅವರಿಗೆ 2022 ರಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Written by - Bhavishya Shetty | Last Updated : Jan 25, 2023, 06:06 PM IST
    • ಮಿಸ್ಟರ್.360 ಎಂದೇ ಖ್ಯಾತಿ ಪಡೆದ ಸೂರ್ಯಕುಮಾರ್ ಯಾದವ್
    • ಕ್ರಿಕೆಟ್ ಲೋಕದಲ್ಲಿ ಇತಿಹಾಸವನ್ನು ಸೃಷ್ಟಿಸಿದ ಸ್ಫೋಟಕ ಬ್ಯಾಟ್ಸ್‌ಮನ್
    • 2022ರ ICC T20I ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಿ ಗೌರವ
ಇತಿಹಾಸ ಸೃಷ್ಟಿಸಿದ Suryakumar Yadav: ‘ICC T20I ವರ್ಷದ ಕ್ರಿಕೆಟಿಗ-2022’ ಪ್ರಶಸ್ತಿಗೆ ಭಾಜನರಾದ ಮಿಸ್ಟರ್ 360 title=
Suryakumar Yadav

ICC T20I Cricketer of the Year Suryakumar Yadav: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟೀಂ ಇಂಡಿಯಾದ ಮಿಸ್ಟರ್.360 ಎಂದೇ ಖ್ಯಾತಿ ಪಡೆದ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಲೋಕದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅವರಿಗೆ 2022 ರ ICC T20I ವರ್ಷದ ಕ್ರಿಕೆಟಿಗ (T20I Cricketer of the Year) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ: KL Rahul Athiya Shetty: ರಾಹುಲ್-ಅಥಿಯಾಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು ಗೊತ್ತಾ? ಯಾರ ವಿವಾಹಕ್ಕೂ ಸಿಕ್ಕಿಲ್ಲ ಇಷ್ಟೊಂದು ದುಬಾರಿ ಉಡುಗೊರೆ!

ICC ಪುರುಷರ T20 ವರ್ಷದ ಕ್ರಿಕೆಟಿಗ ಪ್ರಶಸ್ತಿಯು 2021 ರಿಂದ ಪ್ರಾರಂಭವಾಗಿದ್ದು, ಈ ಪ್ರಶಸ್ತಿಯನ್ನು ಮೊದಲು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಸ್ವೀಕರಿಸಿದರು. ಈ ಬಳಿಕ ಸೂರ್ಯಕುಮಾರ್ ಯಾದವ್ ಅವರಿಗೆ 2022 ರಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸೂರ್ಯಕುಮಾರ್ ಯಾದವ್ ಪ್ರಸ್ತುತ T20 ನಲ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದಾರೆ. ICC T20 ರ್ಯಾಂಕಿಂಗ್‌ನಲ್ಲಿ 908 ಅಂಕಗಳನ್ನು ಹೊಂದಿದ್ದಾರೆ. ಕಳೆದ ವರ್ಷವಷ್ಟೇ ಅವರು ಈ ಸಾಧನೆ ಮಾಡಿದ್ದರು.

2022ರಲ್ಲಿ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಮೈದಾನದ ಪ್ರತಿಯೊಂದು ಕ್ಷೇತ್ರದಲ್ಲೂ ರನ್ ಗಳಿಸಿದ್ದರು. ಟೀಂ ಇಂಡಿಯಾದ ಮಿಸ್ಟರ್ 360 ಎಂದೇ ಅವರನ್ನು ಕರೆಯಲಾಗುತ್ತಿದೆ. 2022 ರಲ್ಲಿ, ಸೂರ್ಯಕುಮಾರ್ ಯಾದವ್ 31 ಪಂದ್ಯಗಳಲ್ಲಿ 1164 ರನ್ ಗಳಿಸಿದ್ದಾರೆ. T20 ಸ್ವರೂಪದಲ್ಲಿ 187.43 ಸ್ಟ್ರೈಕ್ ರೇಟ್ ಮತ್ತು ಅವರ ಸರಾಸರಿ 46.56 ಹೊಂದಿದ್ದಾರೆ. ಒಂದು ವರ್ಷದೊಳಗೆ ಟಿ20ಯಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್.

ಇನ್ನು 2022 ರಲ್ಲಿ, ಸೂರ್ಯಕುಮಾರ್ ಯಾದವ್ T20 ನಲ್ಲಿ 68 ಸಿಕ್ಸರ್ಗಳನ್ನು ಹೊಡೆದಿದ್ದು, ಈ ಮೂಲಕ T20 ನಲ್ಲಿ ಒಂದು ವರ್ಷದೊಳಗೆ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. '2022' ರಲ್ಲಿ ಅವರು ಎರಡು ಶತಕ ಮತ್ತು 9 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ಇದನ್ನೂ ಓದಿ:  Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್!

ಭಾರತಕ್ಕಾಗಿ ಸೂರ್ಯಕುಮಾರ್ ಯಾದವ್ T20 ವಿಶ್ವಕಪ್ 2022 ರಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 3 ಅರ್ಧಶತಕಗಳನ್ನು  ಬಾರಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 190 ರ ಸಮೀಪದಲ್ಲಿತ್ತು ಮತ್ತು ಸರಾಸರಿ 60 ಆಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News