KL Rahul Athiya Shetty Wedding: 2022ರ ವರ್ಷ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌ನಿಂದ ಹಿಡಿದು ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್‌ವರೆಗಿನ ಸೆಲೆಬ್ರಿಟಿ ವಿವಾಹಗಳಿಗೆ ಸಾಕ್ಷಿಯಾಗಿತ್ತು. ಇದೀಗ 2023ರಲ್ಲಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಗೆಳೆಯ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವರ್ಷದ ಮೊದಲ ತಿಂಗಳಲ್ಲಿ ಸೆಲೆಬ್ರಿಟಿ ವಿವಾಹವಾಗಿದೆ.
ಈ ಮದುವೆಯಲ್ಲಿ ವಧು ಅಥಿಯಾ ಶೆಟ್ಟಿ ಗುಲಾಬಿ ಬಣ್ಣದ ಚಿಕಂಕರಿ ಲೆಹೆಂಗಾದಲ್ಲಿ ಮಿಂಚಿದ್ದು, ಅಬ್ಬಬ್ಬಾ ದೇವಲೋಕದ ಸುಂದರಿಯಂತೆ ಕಾಣಿಸುತ್ತಿದ್ದರು. ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದ ನವಜೋಡಿ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
ಅಥಿಯಾ ಶೆಟ್ಟಿ, ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಮಗಳು. ಜನವರಿ 23ರಂದು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್ ಹೌಸ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಆತ್ಮೀಯ ವಲಯ ಮಾತ್ರ ಭಾಗವಹಿಸಿತ್ತು.
ಈ ಹಿಂದೆ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ತಮ್ಮ ಸಂಬಂಧವನ್ನು ಔಪಚಾರಿಕವಾಗಿ ದೃಢೀಕರಿಸದಿದ್ದರೂ, ಇಬ್ಬರೂ ಆಗಾಗ್ಗ ತಮ್ಮ ಪ್ರೇಮ ಸಂಬಂಧದ ಬಗ್ಗೆ ಸುಳಿವು ನೀಡುವಂತಹ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದರು. ಇದೀಗ ಅವೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟು ಪವಿತ್ರ ದಾಂಪತ್ಯ ಎಂದು ಹೆಸರಿಟ್ಟಿದ್ದಾರೆ.
ಇನ್ನು ದೇವಕನ್ಯೆಯರನ್ನೂ ನಾಚಿಸುವಂತೆ ಅಥಿಯಾ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಪ್ರಮುಖ ಕಾರಣ ಅವರು ಧರಿಸಿದ್ದ ಲೆಹೆಂಗಾ. ಈ ಲೆಹೆಂಗಾ ತಯಾರಿಸಿದ್ದು ಡಿಸೈನರ್ ಅನಾಮಿಕಾ ಖನ್ನಾ. ಈ ಹಿಂದೆ ಕಾಜಲ್ ಅಗರ್ವಾಲ್, ಸೋನಮ್ ಕಪೂರ್ ಮತ್ತು ರಿಚಾ ಚಡ್ಡಾ ಅವರಿಗೆ ವಧುವಿನ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದರು.
ಇನ್ನು ಅಥಿಯಾ ಧರಿಸಿದ್ದ ಈ ಲೆಹೆಂಗಾವನ್ನು ಕೈಯಿಂದಲೇ ಡಿಸೈನ್ ಮಾಡಲಾಗಿದ್ದು, ಸೂಕ್ಷ್ಮವಾದ ಕೆಲಸಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ಲೆಹೆಂಗಾ ತಯಾರಿಸಲು ಸುಮಾರು 10000 ಗಂಟೆ ತೆಗೆದುಕೊಳ್ಳಲಾಗಿದೆ. ಜರ್ದೋಜಿ ಮತ್ತು ಜಾಲಿ ಕೆಲಸ, ಮಿನಿಮಲಿಸ್ಟಿಕ್ ಮತ್ತು ರಾಯಲ್ ಬ್ರೈಡಲ್ ಲುಕ್ ಕಾಣಿಸಲೆಂದು ಶ್ರಮ ವಹಿಸಿ ಈ ಬಟ್ಟೆ ಸಿದ್ಧಗೊಳಿಸಲಾಗಿದೆ ಎಂದು ಸಂದರ್ಶನವೊಂದರಲ್ಲಿ ಅನಾಮಿಕ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್!
ಹಳೆ ಕಾಲದ ಆಕರ್ಷಣೆಯ ಸಾರವನ್ನು ಅನುಸರಿಸಿ ತಯಾರಿಸಲಾದ ಈ ಲೆಹೆಂಗಾದಲ್ಲಿ ಅತ್ಯಾಧುನಿಕ ಚಿಕಂಕರಿ ವರ್ಕ್ ಕೂಡ ಇದೆ. ಹಾಗಾಗಿ ಇದಕ್ಕೆ ಐಷಾರಾಮಿ ಲುಕ್ ಬಂದಿದೆ. ಅನೇಕ ವರ್ಷಗಳ ನಂತರವೂ ಅದರ ಆಕರ್ಷಣೆಯು ಸಾಟಿಯಿಲ್ಲದೆ ಉಳಿಯುತ್ತದೆ. ರೇಷ್ಮೆ ಬಟ್ಟೆಯೊಂದಿಗೆ ಸಿಲ್ಕ್ ಆರ್ಗನ್ಜಾ ಸಂಯೋಜಿಸಿ ಈ ಲೆಹೆಂಗಾ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ಪೋಲ್ಕಿ ಜ್ಯುವೆಲ್ಲರಿಯನ್ನು ಅಥಿಯಾ ಶೆಟ್ಟಿ ಧರಿಸಿದ್ದರು. ಇವೆಲ್ಲದಕ್ಕೂ ಪ್ರಮುಖವಾಗಿ ಅಥಿಯಾ ಮಾಡಿದ್ದ ಲೈಟ್ ಮೇಕ್ ಅಪ್ ಆಕೆಯ ನೈಜ ಸೌಂದರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.