8 ಕಂತುಗಳಲ್ಲಿ 18 ತಿಂಗಳ ಬಾಕಿ ಡಿಎ! ಸರ್ಕಾರದ ಮಹತ್ವದ ನಿರ್ಧಾರ!

7th Pay Commission DA Arrears : 18 ತಿಂಗಳ ಬಾಕಿ ಉಳಿಸಿಕೊಂಡಿರುವ ತುಟ್ಟಿ ಭತ್ಯೆಗಾಗಿ, ಸರ್ಕಾರಿ ನೌಕರರು ಬಹಳ ದಿನಗಳಿಂದ ಬೇಡಿಕೆ ಇಡುತ್ತಿದ್ದಾರೆ. ಇದೀಗ ನೌಕರರ ಬೇಡಿಕೆಗೆ ಸರ್ಕಾರ ಅನುಮೋದನೆ ನೀಡಿದೆ. 

Written by - Ranjitha R K | Last Updated : Jan 27, 2023, 12:18 PM IST
  • ನೌಕರರ ಹಿತದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ
  • ಎಂಟು ಕಂತುಗಳಲ್ಲಿ ಕೈ ಸೇರುವುದು ಬಾಕಿ ಡಿಎ
  • ಮಾರ್ಚ್ 2023ರಲ್ಲಿ ಡಿಎ ಹೆಚ್ಚಳ ಘೋಷಣೆ
8 ಕಂತುಗಳಲ್ಲಿ 18 ತಿಂಗಳ ಬಾಕಿ ಡಿಎ!  ಸರ್ಕಾರದ ಮಹತ್ವದ ನಿರ್ಧಾರ! title=

7th Pay Commission DA  Arrears : ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 18 ತಿಂಗಳ ಬಾಕಿ ಉಳಿಸಿಕೊಂಡಿರುವ ತುಟ್ಟಿ ಭತ್ಯೆಗಾಗಿ, ಸರ್ಕಾರಿ ನೌಕರರು ಬಹಳ ದಿನಗಳಿಂದ ಬೇಡಿಕೆ ಇಡುತ್ತಿದ್ದಾರೆ. ಇದೀಗ ನೌಕರರ ಬೇಡಿಕೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಅನುಮೋದನೆಯ ನಂತರ, ಈ ಹಣವು ನೌಕರರ ಖಾತೆಗೆ ಎಂಟು ಕಂತುಗಳಲ್ಲಿ ಬರಲಿದೆ. 

ಮಾರ್ಚ್ 2023ರಲ್ಲಿ ಡಿಎ ಹೆಚ್ಚಳ ಘೋಷಣೆ : 
ಈ ಬಾರಿ ಸುಮಾರು ಒಂದು ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಮಾರ್ಚ್ 2023 ರಲ್ಲಿ ಘೋಷಿಸುವ ನಿರೀಕ್ಷೆಯಿದೆ. ಇದು ಜನವರಿ 1 ರಿಂದ ಜಾರಿಗೆ ಬರಲಿದೆ.  ಈ ಮಧ್ಯೆ, ವಿವಿಧ ರಾಜ್ಯ ಸರ್ಕಾರಗಳು ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಸಹ ಘೋಷಿಸುತ್ತಿವೆ. ಇದೀಗ ಬಾಕಿ ಉಳಿದಿರುವ ಡಿಎ ಮತ್ತು ಡಿಆರ್ ಬಗ್ಗೆ  ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. 

ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗುವುದು 20,000 ಪಿಂಚಣಿ!

ಡಿಎ 20.2% ಕ್ಕೆ ಏರಿಕೆ :
ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು 2.73% ರಷ್ಟು ತೆಲಂಗಾಣ ಸರ್ಕಾರ ಹೆಚ್ಚಿಸಿದೆ. ಈ ಹೆಚ್ಚಳದ ನಂತರ, ಉದ್ಯೋಗಿಗಳ ಡಿಎ 17.29% ರಿಂದ 20.2% ಕ್ಕೆ ಏರಿದೆ. ಈ ಹೆಚ್ಚಳವನ್ನು ಜುಲೈ 1, 2021 ರಿಂದ ಜಾರಿಗೆ ತರಲಾಗುವುದು ಎಂದು ರಾಜ್ಯ ಹಣಕಾಸು ಸಚಿವ ಹರೀಶ್ ರಾವ್ ತಿಳಿಸಿದ್ದಾರೆ. ಈ ಹಣವನ್ನು 8 ಕಂತುಗಳಲ್ಲಿ ನೌಕರರ ಜಿಪಿಎಫ್ ಖಾತೆಗೆ ಜಮಾ ಮಾಡಲಾಗುವುದು.

ಯಾರಿಗೆ ಸಿಗಲಿದೆ ಪ್ರಯೋಜನ ?  : 
ಸರ್ಕಾರದಿಂದ ಬಾಕಿ ಉಳಿದಿರುವ ಡಿಎ ಬಾಕಿಯ ಲಾಭವನ್ನು ಮೇ 31, 2023 ರಂದು ನಿವೃತ್ತಿಯಾಗುವ ನೌಕರರಿಗೆ ಮಾತ್ರ ನೀಡಲಾಗುತ್ತದೆ. ಈ  ಉದ್ಯೋಗಿಗಳು ಅಂತಿಮ 4 ತಿಂಗಳ ಸೇವೆಯಲ್ಲಿ ಸಾಮಾನ್ಯ ಭವಿಷ್ಯ ನಿಧಿಗೆ  ಹಣ ಜಮಾ ಮಾಡುವುದರಲ್ಲಿಯೂ ವಿನಾಯಿತಿ ನೀಡಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ 4.4 ಲಕ್ಷ ನೌಕರರು ಮತ್ತು 2.28 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. 

ಇದನ್ನೂ ಓದಿ : PPF ಖಾತೆ ಇದ್ದರೆ ಬಜೆಟ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ .! ಕೈ ಸೇರುವುದು 1.5 ಕೋಟಿ ರೂಪಾಯಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News