Budget 2023: ನಿರೀಕ್ಷೆಯ ಭಾರ ಹೊತ್ತ ಕೇಂದ್ರ ಬಜೆಟ್ ನ್ನು ವೀಕ್ಷಿಸಲು ಇಲ್ಲಿದೆ ಸುಲಭ ಮಾರ್ಗ...!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2023 ರಂದು ಅವರು ಮಂಡಿಸಲಿದ್ದು, ಅವರ ಭಾಷಣವು ಸುಮಾರು ಬೆಳಗ್ಗೆ 11:00 ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ, ಬಜೆಟ್ ಭಾಷಣವನ್ನು ಸಂಸತ್ತಿನ ಅಧಿಕೃತ ಚಾನೆಲ್‌ನಲ್ಲಿ ವೀಕ್ಷಿಸಬಹುದು.

Written by - Zee Kannada News Desk | Last Updated : Jan 31, 2023, 08:22 PM IST
  • 2023-24 ರ ಹಣಕಾಸು ವರ್ಷಕ್ಕೆ ಬಜೆಟ್ ಹಂಚಿಕೆಗಳು ಮತ್ತು ನಿರೀಕ್ಷಿತ ಆದಾಯ ಸಂಗ್ರಹಗಳನ್ನು ಪಟ್ಟಿ ಮಾಡುತ್ತದೆ
  • 2023 ರ ಬಜೆಟ್ ಅನ್ನು 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಒಂದು ವರ್ಷ ಮುಂಚಿತವಾಗಿ ಮಂಡಿಸಲಾಗುತ್ತಿದೆ
  • ಈ ಹಿನ್ನೆಲೆಯಲ್ಲಿ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟಿದ್ದಾರೆ.
Budget 2023: ನಿರೀಕ್ಷೆಯ ಭಾರ ಹೊತ್ತ ಕೇಂದ್ರ ಬಜೆಟ್ ನ್ನು ವೀಕ್ಷಿಸಲು ಇಲ್ಲಿದೆ ಸುಲಭ ಮಾರ್ಗ...! title=
file photo

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಬಜೆಟ್ 2023 ಅನ್ನು ನಾಳೆ ಮಂಡಿಸಲಿದ್ದಾರೆ.

ಜಾಗತಿಕ ಆರ್ಥಿಕತೆಯು ಹಿಂಜರಿತದ ಒತ್ತಡದಲ್ಲಿರುವಾಗ ಮತ್ತು ವಿಶ್ವದ ಎಲ್ಲಾ ಪ್ರಮುಖ ಆರ್ಥಿಕತೆಗಳು ಮಂದಗತಿಗೆ ಸಾಕ್ಷಿಯಾಗಿರುವ ಸಮಯದಲ್ಲಿ 2023 ರ ಬಜೆಟ್ ಬಂದಿದೆ.ಈ ಹಿನ್ನೆಲೆಯಲ್ಲಿ, ಹಣಕಾಸು ಸಚಿವೆ ಸೀತಾರಾಮನ್ ಅವರ ಬಜೆಟ್ 2023 ಜಿಡಿಪಿ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2023 ರಂದು ಅವರು ಮಂಡಿಸಲಿದ್ದು, ಅವರ ಭಾಷಣವು ಸುಮಾರು ಬೆಳಗ್ಗೆ 11:00 ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ, ಬಜೆಟ್ ಭಾಷಣವನ್ನು ಸಂಸತ್ತಿನ ಅಧಿಕೃತ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಇದು ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿರುತ್ತದೆ, ಅಷ್ಟೇ ಅಲ್ಲದೆ ನಿರ್ಮಲಾ ಸೀತಾರಾಮನ್ ಅವರು ಐದನೇ ಬಾರಿಗೆ ಬಜೆಟ್ ನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ.2023-24 ರ ಹಣಕಾಸು ವರ್ಷಕ್ಕೆ ಬಜೆಟ್ ಹಂಚಿಕೆಗಳು ಮತ್ತು ನಿರೀಕ್ಷಿತ ಆದಾಯ ಸಂಗ್ರಹಗಳನ್ನು ಪಟ್ಟಿ ಮಾಡುತ್ತದೆ. 2023 ರ ಬಜೆಟ್ ಅನ್ನು 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಒಂದು ವರ್ಷ ಮುಂಚಿತವಾಗಿ ಮಂಡಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟಿದ್ದಾರೆ.

ಈ ವರ್ಷವೂ 2023 ರ ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಾಗುತ್ತದೆ.ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಹಣಕಾಸು ಸಚಿವಾಲಯದ ಪ್ರಕಾರ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು ತಮ್ಮ ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಎಲ್ಲಾ 14 ಬಜೆಟ್ 2023 ದಾಖಲೆಗಳು ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News