ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!

Mercury Transit February 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ ಹಾಗೂ ಬುಧ ಗೋಚರ ಅತ್ಯಂತ ಫಲಪ್ರದ ಎಂದು ಭಾವಿಸಲಾಗುತ್ತದೆ.   

Written by - Nitin Tabib | Last Updated : Feb 2, 2023, 12:37 PM IST
  • ಮಕರ ರಾಶಿಯಲ್ಲಿ ಬುಧನ ಪ್ರವೇಶ ಒಂದು ಪ್ರಾಯೋಗಿಕ
  • ಹಾಗೂ ಕ್ರಮಬದ್ಧ ಗೋಚರ ವಿಧಾನವನ್ನು ಸೂಚಿಸುತ್ತದೆ.
  • ಮಕರ ರಾಶಿಯಲ್ಲಿರುವ ಶನಿ ಗ್ರಹದಿಂದ ಬುಧನ ಮೇಲೂ ಪ್ರಭಾವ ಉಂಟಾಗಲಿದೆ.
ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು! title=
ಮಕರ ರಾಶಿಗೆ ಬುಧನ ಪ್ರವೇಶ

Budh Rashi Gochar 2023: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಅತ್ಯಂತ ವೇಗದ ಗ್ರಹ ಎಂದು ಭಾವಿಸಲಾಗುತ್ತದೆ. ಇದು ತನ್ನದೇ ಆದ ಕನ್ಯಾ ರಾಶಿಯಲ್ಲಿ ಉಚ್ಛ ಭಾವದಲ್ಲಿರುವ ಏಕಮಾತ್ರ ಗ್ರಹವಾಗಿದೆ. ಬುಧ ಮಿಥುನ ರಾಶಿಗೂ ಅಧಿಪತಿ. ಬುಧ ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹವಾಗಿರುವ ಕಾರಣ ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧನನ್ನು ಯಾವಾಗಲು ಸೂರ್ಯನ ಜೊತೆಗೆ ಏಕಭಾವ ಅಥವಾ ಪರಸ್ಪರಿಗೆ ಒಂದೇ ಅಂತರದಲ್ಲಿ ಭಾವಿಸಲಾಗುತ್ತದೆ. ಬುಧ ಫೆಬ್ರವರಿ 2023 ರಂದು ಬೆಳಗ್ಗೆ 7:11ಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದೆ.ಬುಧನ ಈ ಮಕರ ರಾಶಿ ಗೋಚರ ಯಾವ ಜಾತಕದವರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ,

ಮಕರ ರಾಶಿಯಲ್ಲಿ ಬುಧನ ಪ್ರವೇಶ ಒಂದು ಪ್ರಾಯೋಗಿಕ ಹಾಗೂ ಕ್ರಮಬದ್ಧ ಗೋಚರ ವಿಧಾನವನ್ನು ಸೂಚಿಸುತ್ತದೆ. ಮಕರ ರಾಶಿಯಲ್ಲಿರುವ ಶನಿ ಗ್ರಹದಿಂದ ಬುಧನ ಮೇಲೂ ಪ್ರಭಾವ ಉಂಟಾಗಲಿದೆ. ವಾಸ್ತವದಲ್ಲಿ ನಾವು ಯಾವುದಾದರೊಂದು ಸಂಗತಿಗೆ ನಮ್ಮ ಮನಸ್ಸನ್ನು ಹೊಂದಿಸಿದಾಗ ನಮ್ಮ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ಮಕರ ಜಾತಕದಲ್ಲಿ  ಬುಧ ಹೊರಗಿನ ಪ್ರಪಂಚದಿಂದ ಸ್ವೀಕರಿಸುವ ಸಂವೇದನೆಗಳನ್ನು ವರ್ಗೀಕರಿಸುವ ಬಲವಾದ ಅಗತ್ಯವನ್ನು ಹೊಂದಿದೆ. 

ಮೇಷ ರಾಶಿ
ಮೇಷ ರಾಶಿಯ ದಶಮ ಭಾವದಲ್ಲಿ ಬುಧನ ಈ ಸಂಚಾರ ನೆರವೇರುತ್ತಿದೆ. ಇದರಿಂದ ಮೇಷ ರಾಶಿಯ ಜನರು ಪ್ರಗತಿಪರ ಮತ್ತು ಪ್ರಯೋಜನಕಾರಿ ಫಲಿತಾಂಶಗಳನ್ನು ಅನುಭವಿಸುತ್ತಾರೆ. ಈ ಸ್ಥಳೀಯರು ತಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಇವರಿಗೆ ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಇದರೊಂದಿಗೆ, ಸ್ಥಳೀಯರಿಗೆ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಪ್ರತಿಷ್ಠೆ ಮತ್ತು ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ. ತೃತೀಯ ಭಾವದ ಅಧಿಪತಿ ವೃತ್ತಿಜೀವನದ ದಶಮ ಭಾವದಲ್ಲಿ ಸಾಗುತ್ತಿದ್ದಾನೆ. ಹೀಗಾಗಿ  ವೃತ್ತಿಪರರು ಈಗ ಉತ್ತಮ ಕೌಶಲ್ಯ ಮತ್ತು ಶ್ರದ್ಧೆಯಿಂದ ಮಾತನಾಡಲಿದ್ದಾರೆ ಮತ್ತು ಇದರಿಂದ ಅವರ ವೃತ್ತಿಪರ ನೆಟ್‌ವರ್ಕ್ ಸುಧಾರಿಸಲಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.

ವೃಷಭ ರಾಶಿ
ಬುಧ ನಿಮ್ಮ ರಾಶಿಯ ದ್ವಿತೀಯ ಹಾಗೂ ಪಂಚಮ ಭಾವದ ಅಧಿಪತಿಯಾಗಿದ್ದು, ಮಕರ ರಾಶಿಯ ಒಂಬತ್ತನೇ ಭಾವದಲ್ಲಿ ಸಂಚರಿಸಲಿದ್ದಾನೆ. ವೃಷಭ ರಾಶಿಯವರಿಗೆ ಇದು ವಿಶೇಷವಾಗಿ ಮಂಗಳಕರ ಸಂಚಾರವಾಗಿದೆ. ಈ ಸಂದರ್ಭದಲ್ಲಿ 9 ನೇ ಭಾವದಲಿರುವ ಬುಧ ತನ್ನ ಮನೆಯಾಗಿರುವ ತೃತೀಯ ಭಾವದ ಮೇಲೆ ದೃಷ್ಟಿ ಕೆಂದ್ರೀಕರಿಸಲಿದ್ದಾನೆ. ಮತ್ತು ಸಂವಹನ ಶೈಲಿಯನ್ನು ಅತ್ಯಂತ ವೃತ್ತಿಪರ ಮತ್ತು ಚಿಂತನಶೀಲವಾಗಿಸುತ್ತಾನೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತಾರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ-Shani Udaya 2023: ಶನಿ ಉದಯಿಸುತ್ತಿದ್ದಂತೆ ನಿರ್ಮಾಣಗೊಳ್ಳಲಿದೆ 'ಧನ ರಾಜಯೋಗ' ಈ ರಾಶಿಗಳ ಮೇಲೆ ಶುಭ ದೃಷ್ಟಿ

ಕರ್ಕ ರಾಶಿ
ಬುಧವು ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಸಾಗುತ್ತಿದ್ದಾನೆ, ಇದು ಕಾನೂನು ಅಧ್ಯಯನ ಮಾಡುವ ಅಥವಾ ಅಭ್ಯಾಸ ಮಾಡುವ ಜನರಿಗೆ ಉತ್ತಮ ಸಮಯವಾಗಿರುತ್ತದೆ. ನೀವು ಮಾಧ್ಯಮದಲ್ಲಿದ್ದರೆ ಅಥವಾ ಪತ್ರಿಕೋದ್ಯಮ ಅಥವಾ ಸಮೂಹ ಸಂವಹನವನ್ನು ಓದುತ್ತಿದ್ದರೆ ಈ ಸಾಗನೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆಲೋಚನೆ ಮತ್ತು ಕೆಲಸದಲ್ಲಿ ಹೆಚ್ಚು ಪ್ರಾಯೋಗಿಕತೆ ಇರುತ್ತದೆ ಮತ್ತು ನೀವು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೀರಿ.

ಇದನ್ನೂ ಓದಿ-ಅಶ್ವಿನಿ ನಕ್ಷತ್ರದಲ್ಲಿ ರಾಹು ಪ್ರವೇಶ, ಈ ಮೂರು ರಾಶಿಗಳ ಜನರಿಗೆ ಅಪಾರ ಧನ, ಸ್ಥಾನಮಾನ ಪ್ರಾಪ್ತಿ!

ಮಕರ ರಾಶಿ
ನಿಮ್ಮ ಜಾತಕದ ಪ್ರಥಮ ಭಾವದಲ್ಲಿ ಬುಧನ ಸಂಕ್ರಮಣದಿಂದ, ಸರ್ಕಾರಿ ವೃತ್ತಿಪರರಿಗೆ ಸಮಾಜದಲ್ಲಿ ಹೆಸರು ಮತ್ತು ಖ್ಯಾತಿ ಮತ್ತು ಗೌರವವನ್ನು ಗಳಿಸಲು ಇದು ಉತ್ತಮ ಸಮಯವಾಗಿದೆ. ನಿಮ್ಮ ತೀಕ್ಷ್ಣವಾದ ಮನಸ್ಸು ಮತ್ತು ನಿಮ್ಮ ಅದ್ಭುತ ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಬಳಸಿಕೊಂಡು ನೀವು ಹಣವನ್ನು ಗಳಿಸುವಿರಿ. ಈ ಗೋಚರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News