ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..?

 Health tipes:ಕೊತ್ತಂಬರಿ ಸೊಪ್ಪನ್ನು ನಮ್ಮ ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ನೈಸರ್ಗಿಕವಾದ ಪೋಷಕಾಂಶಗಳಿಂದ ತುಂಬಿದ್ದು, ಸೂಪ್‌, ಸಲಾಡ್, ರಸಂ, ಚಟ್ನಿ, ದಾಲ್‌ಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುತ್ತಾರೆ. ಆದರೆ ನಮ್ಮಲ್ಲಿ ಅನೇಕರಿಗೆ ಇದರ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. 

Written by - Zee Kannada News Desk | Last Updated : Feb 6, 2023, 02:30 PM IST
  • ಕೊತ್ತಂಬರಿಯು ವಿಟಮಿನ್ ಎ, ಸಿ, ಇ ಮತ್ತು ಕ್ಯಾರೊಟಿನಾಯ್ಡ್‌ಗಳು ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ.
  • ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ
  • ಹಲವಾರು ಪ್ರಯೋಜನಗಳಿಗೆ ಸಾಕ್ಷಿ ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪಿನ  ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..? title=

Health tipes:ಕೊತ್ತಂಬರಿ ಸೊಪ್ಪನ್ನು ನಮ್ಮ ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ನೈಸರ್ಗಿಕವಾದ ಪೋಷಕಾಂಶಗಳಿಂದ ತುಂಬಿದ್ದು, ಸೂಪ್‌, ಸಲಾಡ್, ರಸಂ, ಚಟ್ನಿ, ದಾಲ್‌ಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುತ್ತಾರೆ. ಆದರೆ ನಮ್ಮಲ್ಲಿ ಅನೇಕರಿಗೆ ಇದರ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಹಾಗಾಗಿಯೇ ಕೆಲವರು ಇದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಇದು ಕೇವಲ ತರಕಾರಿಗಳನ್ನು ಅಲಂಕರಿಸಲು ಮಾತ್ರವಲ್ಲ, ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

ಕೊತ್ತಂಬರಿಯು ವಿಟಮಿನ್ ಎ, ಸಿ, ಇ ಮತ್ತು ಕ್ಯಾರೊಟಿನಾಯ್ಡ್‌ಗಳು ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ. 

ಕಣ್ಣಿನ ದೃಷ್ಟಿಗೆ ಉತ್ತಮ
ಕೊತ್ತಂಬರಿ ಸೊಪ್ಪು  ಕಣ್ಣಿನ  ಉತ್ತಮ ದೃಷ್ಟಿಗೆ  ಸಹಕಾರಿಯಾಗಿದೆ.  ಕೊತ್ತಂಬರಿಯಲ್ಲಿ ವಿಟಮಿನ್ ಎ ಸಮೃದಿಯಾಗಿದೆ. ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ನೋವಿನ ಸಮಸ್ಯೆಯೂ ದೂರವಾಗುತ್ತದೆ.

 ಇದನ್ನೂ ಓದಿ: Hair Fall Control Solution : ನಿಮಗೆ ಪಿಸಿಒಡಿಯಿಂದ ಕೂದಲುದುರುವ ಸಮಸ್ಯೆಯೇ? ಹಾಗಿದ್ರೆ, ಈ ಹರ್ಬಲ್ ಆಯಿಲ್ ಬಳಸಿ!

ಕೊತ್ತಂಬರಿಯಲ್ಲಿರುವ ಜೀವಸತ್ವಗಳು, ಖನಿಜಗಳು ನಿರೋಧಕಗಳು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ರಕ್ತದ ಮಟ್ಟ ಹೆಚ್ಚಿಸಲು  ಸಹಕಾರಿಯಾಗಿದೆ. 

ಮಲಬದ್ಧತೆಯಿಂದ ಕಾಡುತ್ತಿದ್ದರೆ  ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಾಯಕವಾಗಿದೆ. ಮಜ್ಜಿಗೆ ಬೆರೆಸಿದ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ನಿವಾರಣೆ ಮಾಡಬಹುದು.

ಮಧುಮೇಹ ನಿಯಂತ್ರಣ 
 ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಸಿರು ಕೊತ್ತಂಬರಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಬಹುದು.  

 ಇದನ್ನೂ ಓದಿ:ನೈಸರ್ಗಿಕ ಪದ್ಧತಿಯಿಂದ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೇ? ಇಂದಿನಿಂದಲೇ ಈ ಸೂಪ್ ಸೇವನೆ ಆರಂಭಿಸಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News