ಒಟ್ಟಿಗೆ ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ! ಬೆಲೆ ಕೂಡಾ ದುಬಾರಿಯೇನಿಲ್ಲ

ಅಪ್ಡೇಟೆಡ್ 2023 ಸುಜುಕಿ Gixxer ಮತ್ತು Gixxer SF  ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್/ಪರ್ಲ್ ಬ್ಲೇಜ್ ಆರೆಂಜ್ ಮತ್ತು ಮೆಟಾಲಿಕ್ ಟ್ರಿಟಾನ್ ಬ್ಲೂ  ಹೀಗೆ ಮೂರು ಬಣ್ಣದ ಆಯ್ಕೆಗಳಲ್ಲಿ  ಬರುತ್ತದೆ.

Written by - Ranjitha R K | Last Updated : Feb 9, 2023, 10:40 AM IST
  • ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ
  • ಈ ಬೈಕ್ ಗಳ ಬೆಲೆ ಕೂಡಾ ದುಬಾರಿಯಲ್ಲ
  • ಇಲ್ಲಿದೆ ಎಲ್ಲಾ ಬೈಕ್ ಗಳ ಬೆಲೆ ಮತ್ತು ವೈಶಿಷ್ಟ್ಯ
ಒಟ್ಟಿಗೆ ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ! ಬೆಲೆ ಕೂಡಾ ದುಬಾರಿಯೇನಿಲ್ಲ  title=

ಬೆಂಗಳೂರು : ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಅಪ್ಡೇಟೆಡ್ ಗಿಕ್ಸರ್ ರೇಂಜ್ ಅನ್ನು ಪರಿಚಯಿಸಿದೆ. ಗಿಕ್ಸರ್, ಜಿಕ್ಸರ್ ಎಸ್‌ಎಫ್, ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‌ಎಫ್ 250 ಹೀಗೆ ನಾಲ್ಕು ಬೈಕ್ ಗಳನ್ನು ಅನಾವರಣಗೊಳಿಸಿವೆ. ಈ ಬೈಕ್ ಗಳ ಬೆಲೆ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.   

Gixxer ರೇಂಜ್ ನಲ್ಲಿ ಮೊದಲ ಬಾರಿಗೆ, ಸುಜುಕಿ ರೈಡ್ ಬ್ಲೂಟೂತ್ ಕನೆಕ್ಟಿವಿಟಿ  ಸಿಸ್ಟಮ್ ಅನ್ನು ಹೊಂದಿದೆ.  ಇದನ್ನು ಸಂಪೂರ್ಣ ಡಿಜಿಟಲ್ ಉಪಕರಣ ಕನ್ಸೋಲ್‌ನೊಂದಿಗೆ ನೀಡಲಾಗಿದೆ. ಅಪ್ಲಿಕೇಶನ್ ಮೂಲಕ, ಬೈಕ್ ಸವಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಬೈಕ್‌ಗೆ ಲಿಂಕ್ ಮಾಡಬಹುದು.   ಇನ್‌ಕಮಿಂಗ್ ಕರೆಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ವಿವರಗಳು ಮತ್ತು ಎಸ್‌ಎಂಎಸ್ ಮತ್ತು ವಾಟ್ಸಾಪ್  ನೋಟಿಫಿಕೆಶನ್  ಇನ್‌ಸ್ಟ್ರುಮೆಂಟ್ ಕನ್ಸೋಲ್‌ನಲ್ಲಿ  ಕಂಡುಬರುತ್ತದೆ. ಇದರಲ್ಲಿ, ಫೋನ್ ಬ್ಯಾಟರಿ  ಲೆವೆಲ್,  ಸ್ಪೀಡ್ ಅಲರ್ಟ್ ಮತ್ತು ಇಟಿಎ ( estimated time of arrival) ನಂತಹ ಮಾಹಿತಿಯೂ ಲಭ್ಯವಿದೆ. 

ಇದನ್ನೂ ಓದಿ : ಇದೇ ಕಾರಣಕ್ಕೆ ಟಾಟಾ ಕಂಪನಿಯ ಈ ಮೂರು ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದು!

ಅಪ್ಡೇಟೆಡ್ 2023 ಸುಜುಕಿ Gixxer ಮತ್ತು Gixxer SF  ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್/ಪರ್ಲ್ ಬ್ಲೇಜ್ ಆರೆಂಜ್ ಮತ್ತು ಮೆಟಾಲಿಕ್ ಟ್ರಿಟಾನ್ ಬ್ಲೂ  ಹೀಗೆ ಮೂರು ಬಣ್ಣದ ಆಯ್ಕೆಗಳಲ್ಲಿ  ಬರುತ್ತದೆ. ಹೊಸ Gixxer 250 ಅನ್ನು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಶೇಡ್‌ಗಳಲ್ಲಿ  ಪರಿಚಯಿಸಲಾಗಿದೆ. ಆದರೆ Gixxer SF 250 ಅನ್ನು ಮೆಟಾಲಿಕ್ ಟ್ರೈಟಾನ್ ಬ್ಲೂ ಮತ್ತು ಮೆಟಾಲಿಕ್ ಸೋನಿಕ್ ಸಿಲ್ವರ್ ಪೇಂಟ್ ಸ್ಕೀಮ್‌ಗಳಲ್ಲಿ  ಹೊರ ತರಲಾಗಿದೆ. 

ನವೀಕರಿಸಿದ 2023 ಸುಜುಕಿ Gixxer ಮೊದಲಿನಂತೆಯೇ ಅದೇ 155cc ಎಂಜಿನ್ ಅನ್ನು ಹೊಂದಿದೆ. ಇದು 13.41bhp ಮತ್ತು 13.8Nm ಅನ್ನು  ಜನರೆಟ್ ಮಾಡುತ್ತದೆ. ಇದರಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ.  ಹೊಸ Gixxer 250 ಶ್ರೇಣಿಯು 249cc ಎಂಜಿನ್‌ನೊಂದಿಗೆ ಬರುತ್ತದೆ.  ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಎಂಜಿನ್ 26.13bhp ಪವರ್ ಮತ್ತು 22.2Nm ಟಾರ್ಕ್ ಅನ್ನು  ಜನರೇಟ್ ಮಾಡುತ್ತದೆ. 

ಇದನ್ನೂ ಓದಿ : Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಸುಜುಕಿ Gixxer ಬೆಲೆ :
- Gixxer: Rs 1.40 ಲಕ್ಷ
- Gixxer SF: Rs 1.45 ಲಕ್ಷ
- Gixxer 250: Rs 1.95 ಲಕ್ಷ
- Gixxer SF 250: Rs 2.02 ಲಕ್ಷ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News