ಚೀನಾ & ಅದಾನಿ ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?: ಕಾಂಗ್ರೆಸ್

ಅದಾನಿಯೇ ಪ್ರಧಾನಿಯೋ ಪ್ರಧಾನಿಯೇ ಅದಾನಿಯೋ, ಅದಾನಿಯೊಳ್ ಪ್ರಧಾನಿಯೋ ಪ್ರಧಾನಿಯೊಳ್ ಅದಾನಿಯೋ, ಅದಾನಿಯಿಂದ ಪ್ರಧಾನಿಯೋ ಪ್ರಧಾನಿಯಿಂದ ಅದಾನಿಯೋ? ಈ ಒಗಟ ಬಿಡಿಸುವವರಾರು ಓ ಹರಿಯೇ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Written by - Puttaraj K Alur | Last Updated : Feb 9, 2023, 07:11 PM IST
  • ಚೀನಾ & ಅದಾನಿ 2 ಪದಗಳು ಪ್ರಧಾನಿ ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?
  • ಅದಾನಿಗೆ ಪ್ರಧಾನಿ ಮೋದಿ ಮಾಡಿದ ಸಹಾಯವೇನು? LIC ಹೂಡಿಕೆಯ ನಷ್ಟಕ್ಕೆ ಹೊಣೆ ಯಾರು?
  • ಕಾಂಗ್ರೆಸ್ ಬಗ್ಗೆ ಇಲ್ಲದ ಆರೋಪ ಹೊರಿಸಲು ಕಾಲಹರಣ ಮಾಡದೆ ಪ್ರಧಾನಿ ಮೋದಿ ನೇರವಾಗಿ ದೇಶಕ್ಕೆ ಉತ್ತರಿಸಲಿ
ಚೀನಾ & ಅದಾನಿ ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?: ಕಾಂಗ್ರೆಸ್ title=
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಚೀನಾ ಮತ್ತು ಅದಾನಿ ಈ ಎರಡು ಪದಗಳು ಪ್ರಧಾನಿ ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಲೋಕಸಭೆಯಲ್ಲಿ ದೇಶದ ದಿಕ್ಕುತಪ್ಪಿಸುವ, ಕಾಂಗ್ರೆಸ್ ಬಗ್ಗೆ ಇಲ್ಲದ ಆರೋಪ ಹೊರಿಸಲು ಕಾಲಹರಣ ಮಾಡದೆ ಪ್ರಧಾನಿ ಮೋದಿಯವರು ನೇರವಾಗಿ ದೇಶಕ್ಕೆ ಉತ್ತರಿಸಲಿ. ಅದಾನಿಗೆ ಪ್ರಧಾನಿ ಮೋದಿ ಮಾಡಿದ ಸಹಾಯವೇನು? LIC ಹೂಡಿಕೆಯ ನಷ್ಟಕ್ಕೆ ಹೊಣೆ ಯಾರು? ಅದಾನಿಗೆ ಬ್ಯಾಂಕುಗಳು ನೀಡಿದ ಅಪರಿಮಿತ ಸಾಲದ ಕತೆ ಏನು? ಅದಾನಿ ವಿರುದ್ದದ ಆರೋಪಗಳ ಕುರಿತು ತನಿಖೆ ಯಾವಾಗ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್

‘ಅದಾನಿ ಹಗರಣದ ಕುರಿತ ಪ್ರಶ್ನೆಗೆ ಉತ್ತರಿಸಬೇಕಾದ ಪ್ರಧಾನಿ ತೀರ ಬಾಲಿಶವಾಗಿ ಮಾತನಾಡುವುದು ದೇಶದ ದೌರ್ಭಾಗ್ಯ. "ಚೀನಾ & ಅದಾನಿ" ಈ 2 ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ? 8 ವರ್ಷ ಆಡಳಿತ ಪೂರೈಸಿದ ಮೇಲೂ ಉತ್ತರದಾಯಿಯತ್ವ ಹೊರಲು ಮೋದಿಯವರಿಗೆ ಆಗುತ್ತಿಲ್ಲವೇಕೆ? ಗಂಭೀರವಾದ ಅದಾನಿ ಹಗರಣದ ಬಗ್ಗೆ ಮಾತಾಡುವುದು ಯಾವಾಗ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅದಾನಿಯೇ ಪ್ರಧಾನಿಯೋ ಪ್ರಧಾನಿಯೇ ಅದಾನಿಯೋ, ಅದಾನಿಯೊಳ್ ಪ್ರಧಾನಿಯೋ ಪ್ರಧಾನಿಯೊಳ್ ಅದಾನಿಯೋ, ಅದಾನಿಯಿಂದ ಪ್ರಧಾನಿಯೋ ಪ್ರಧಾನಿಯಿಂದ ಅದಾನಿಯೋ? ಈ ಒಗಟ ಬಿಡಿಸುವವರಾರು ಓ ಹರಿಯೇ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ & ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಬಿಎಸ್‍ವೈ ಹೆಸರು ಮರೆತ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News