50% ಡಿಸ್ಕೌಂಟ್ ನಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಚಾಲಕರು..!

ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ  ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು. ಹಾಗಾದ್ರೆ ಎಷ್ಟು ದಂಡ ಕಲೆಕ್ಟ್ ಆಗಿದೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

Written by - VISHWANATH HARIHARA | Edited by - Manjunath N | Last Updated : Feb 11, 2023, 08:32 PM IST
  • ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳ ಮೇಲಿರುವ ಹಳೇ ಕೇಸ್ ಗಳ ದಂಡ ಪಾವತಿ ಮಾಡಿದರು.
  • ಇದೇ ವೇಳೆ ಕೆಲವು ಸವಾರರು ಈ ಕಾಲಾವಕಾಶ ಸಾಗುತ್ತಿಲ್ಲ
  • ರಿಯಾಯಿತಿ ದಂಡ ಪಾವತಿಗೆ ಇನ್ನೂ ಒಂದು ವಾರ ಕಾಲಾವಕಾಶ ವಿಸ್ತರಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ.
50% ಡಿಸ್ಕೌಂಟ್ ನಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಚಾಲಕರು..!  title=

ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ  ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು. ಹಾಗಾದ್ರೆ ಎಷ್ಟು ದಂಡ ಕಲೆಕ್ಟ್ ಆಗಿದೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಹೌದು...ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಬಾಕಿ ಉಳಿಸಿಕೊಂಡಿರುವ ವಾಹನಗಳ ದಂಡ ಕಟ್ಟಲು ಸರ್ಕಾರ ೫೦% ರಿಯಾಯಿತಿ ನೀಡಿದ್ದರು. 50% ಡಿಸ್ಕೌಂಟ್ ಗೆ ಇಂದು ಕೊನೆಯ ದಿನವಾದ್ದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ವಾಹನ ಸವಾರರು ಇಂದು ದಂಡ ಕಟ್ಟಲು ಮುಗಿಬಿದ್ದಿದ್ದಾರೆ.ನಗರದ ಪೊಲೀಸ್ ಠಾಣೆಗಳು, ಟಿಎಂಸಿ ಕೇಂದ್ರ ಕಚೇರಿ ಹಾಗೂ ಪೇಟಿಎಂ ಮತ್ತು ಪಿಡಿಎ ಮೂಲಕ ಲಕ್ಷಾಂತರ ಮಂದಿ ವಾಹನ ಸವಾರರು ಇಂದು ದಂಡ ಕಟ್ಟಿದ್ದಾರೆ.

ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಖುದ್ದು ಪರಿಶೀಲನೆ ನಡೆಸಿದ ನ್ಯಾ‌.ಬಿ.ಎಸ್.ಪಾಟೀಲ್

ಫೈನ್ ಕಟ್ಟಲು ಇಂದು ಲಾಸ್ಟ್ ಡೇ ಅಂತ ತಿಳಿದ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳ ಮೇಲಿರುವ ಹಳೇ ಕೇಸ್ ಗಳ ದಂಡ ಪಾವತಿ ಮಾಡಿದರು. ಇದೇ ವೇಳೆ ಕೆಲವು ಸವಾರರು ಈ ಕಾಲಾವಕಾಶ ಸಾಗುತ್ತಿಲ್ಲ. ರಿಯಾಯಿತಿ ದಂಡ ಪಾವತಿಗೆ ಇನ್ನೂ ಒಂದು ವಾರ ಕಾಲಾವಕಾಶ ವಿಸ್ತರಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕೆಲವರ ಬಳಿ ಹಣ ಇರುತ್ತೆ, ಇನ್ನೂ ಕೆಲವರ ಬಳಿ ಹಣ ಇರಲ್ಲ. ಹಾಗೂ ಸರ್ವರ್ ಗಳು ಇವತ್ತು ಜಾಮ್ ಆಗಿದ್ದು, ದಂಡ ಕಟ್ಟಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಇನ್ನೂ ನಾಲ್ಕೈದು ದಿನಗಳ ಕಾಲ ಸಮಯ ಕೊಡಬೇಕು ಅಂತ ಒತ್ತಾಯ ಮಾಡಿದ್ದಾರೆ.ಇನ್ನೂ ಟ್ರಾಫಿಕ್ ಫೈನ್ ಕಟ್ಟಲು ರಿಯಾಯಿತಿ ಘೋಷಣೆ ಬಳಿಕ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಫೆಬ್ರವರಿ 3 ರಿಂದ ಇಂದಿನವರೆಗೆ ಸುಮಾರು ೩೫ ಲಕ್ಷ ಟ್ರಾಫಿಕ್ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಕಲೆಕ್ಟ್ ಮಾಡಿದ್ದಾರೆ.

ಹಾಗಾದ್ರೆ ಯಾವ್ಯಾವ ದಿನ ಎಷ್ಟೆಷ್ಟು ದಂಡ ವಸೂಲಾಗಿದೆ ಅಂತಾ ನೋಡೊದಾದ್ರೆ.

3Feb - 2.24 ಲಕ್ಷ ಕೇಸ್, 7 ಕೋಟಿ ದಂಡ.

4Feb - 3 ಲಕ್ಷ ಕೇಸ್, 9 ಕೋಟಿ ದಂಡ.

5Feb - 2.87 ಲಕ್ಷ ಕೇಸ್, 7.49 ಕೋಟಿ ದಂಡ.

6Feb - 3.34 ಲಕ್ಷ ಕೇಸ್, 9.57 ಕೋಟಿ ದಂಡ.

7Feb - 3.45 ಲಕ್ಷ ಕೇಸ್, 9.70 ಕೋಟಿ ದಂಡ.

8Feb- 3.87 ಲಕ್ಷ ಕೇಸ್, 10 ಕೋಟಿ ದಂಡ.

9Feb- 5.51 ಲಕ್ಷ ಕೇಸ್, 14.64 ಕೋಟಿ ದಂಡ.

10Feb- 6.70 ಲಕ್ಷ ಕೇಸ್,17.61 ಕೋಟಿ ದಂಡ.

11Feb- 3.85 ಲಕ್ಷ ಕೇಸ್, 12.52 ಕೋಟಿ ದಂಡ (ಮಧ್ಯಾಹ್ನ ಮೂರು ಗಂಟೆ)

ಇದನ್ನೂ ಓದಿ : ಜನವರಿ ತಿಂಗಳಲ್ಲಿ 6,085 ಕೋಟಿ ರೂ. GST ಸಂಗ್ರಹ: ಸಿಎಂ ಬಸವರಾಜ ಬೊಮ್ಮಾಯಿ

ಟ್ರಾಫಿಕ್ ಫೈನ್ ಕಟ್ಟಲು ಫೆಬ್ರವರಿ 3 ರಿಂದ ವಾಹನ ಸವಾರರಿಗೆ ರಿಯಾಯಿತಿ ನೀಡಲಾಗಿದೆ. ಕಳೆದ ಒಂಭತ್ತು ದಿನಗಳಲ್ಲಿ ಒಟ್ಟು 35.60 ಲಕ್ಷ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಇಂದು ಕೊನೆ ದಿನವಾದ್ದರಿಂದ ದಂಡದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಸಾರ್ವಜನಿಕರು ಕಾಲಾವಕಾಶ ವಿಸ್ತರಣೆಗೆ ಮನವಿ ಮಾಡಿದ್ದು, ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News