Immunity Boost Tea: ಚಳಿಗಾಲದಲ್ಲಿ ಸಾಮಾನ್ಯ ಚಹಾವನ್ನು ಕುಡಿಯುವುದು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ, ಶುಂಠಿ ಮತ್ತು ಮಸಾಲೆಗಳನ್ನು ಬೆರೆಸಿ ಚಹಾವನ್ನು ಕುಡಿಯುವುದರ ಹಲವು ಪ್ರಯೋಜನಗಳನ್ನು ನೀವು ತಿಳಿದಿರಬಹುದು. ಆದರೆ ಇಂದು ನಾವು ನಿಮಗೆ ತೆಂಗಿನಕಾಯಿ ಚಹಾದ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಹೌದು, ಈ ಚಹಾ ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತೆಂಗಿನಕಾಯಿ ಚಹಾದ ರುಚಿ ಕೂಡ ತುಂಬಾ ಅದ್ಭುತವಾಗಿರುತ್ತದೆ. ತೆಂಗಿನ ನೀರಿನ ಪ್ರಯೋಜನಗಳನ್ನು ನೀವು ತಿಳಿದಿರಬೇಕು, ಆದರೆ ಚಳಿಗಾಲದಲ್ಲಿ ತೆಂಗಿನಕಾಯಿ ಚಹಾವು ನಿಮಗೆ ತುಂಬಾ ಪರಿಣಾಮಕಾರಿಯಾಗಿದೆ. ಇದರ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಹೃದ್ರೋಗದಂತಹ ಸಮಸ್ಯೆಗಳಲ್ಲಿ ಪ್ರಯೋಜನಕಾರಿ
ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೋಂಕನ್ನು ತಪ್ಪಿಸಲು ನೀವು ತೆಂಗಿನ ಚಹಾವನ್ನು ಬಳಸಬಹುದು. ಪದೇ ಪದೇ ರೋಗಗಳಿಗೆ ಗುರಿಯಾಗುವ ಜನರು ಇದನ್ನು ಬಳಸಬಹುದು. ಈ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಬೇಗನೇ ಹೆಚ್ಚಾಗುತ್ತದೆ. ಈ ಚಹಾವು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗ ಗುಣಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ ತುಂಬಾ ಹಾಳಾಗಿದೆ. ಈ ಕಾರಣದಿಂದಾಗಿ ಹೃದ್ರೋಗದಂತಹ ಸಮಸ್ಯೆಗಳು ಬೇಗನೆ ವಕ್ಕರಿಸುತ್ತಿವೆ. ತೆಂಗಿನಕಾಯಿ ಚಹಾವು ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Bad Cholesterol: ಕೇವಲ 2 ರೂ.ಗಳಲ್ಲಿ ರಕ್ತದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಿ! ಹೊಸ ಉಪಾಯ ಕಂಡುಹಿಡಿದ ಹಾರ್ವರ್ಡ್
ತೂಕ ಇಳಿಕೆ ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರಿ
ತೆಂಗಿನಕಾಯಿ ಚಹಾದಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಇರುತ್ತದೆ. ಈ ಕಾರಣದಿಂದಾಗಿ, ತೆಂಗಿನಕಾಯಿ ಚಹಾವನ್ನು ಕುಡಿಯುವುದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವೂ ಕೂಡ ತೂಕವನ್ನು ನಿಯಂತ್ರಿಸಲು ಬಯಸುತ್ತಿದ್ದರೆ, ಪ್ರತಿದಿನ ಈ ಚಹಾವನ್ನು ಸೇವಿಸಿ. ಇದಲ್ಲದೆ, ಈ ಚಹಾವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಏಕೆಂದರೆ ಇದು ಕೊಬ್ಬು ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇದನ್ನೂ ಓದಿ-ಆಲೂಗಡ್ಡೆ ಹಾಲಿನಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆಷ್ಟು ಗೊತ್ತು?
ತೆಂಗಿನಕಾಯಿ ಚಹಾವನ್ನು ಹೇಗೆ ತಯಾರಿಸಬೇಕು
>> ತೆಂಗಿನಕಾಯಿ ಚಹಾ ಬೇಕಾಗುವ ಸಾಮಗ್ರಿಗಳು: 3 ಕಪ್ ನೀರು, 1 ಕಪ್ ತೆಂಗಿನ ಹಾಲು, 1/2 ಕಪ್ ಹೆವಿ ಕ್ರೀಮ್, 2 ಬ್ಯಾಗ್ ಗ್ರೀನ್ ಟೀ, 1 ಟೀ ಚಮಚ ಬ್ರೌನ್ ಶುಗರ್.
>> ಈ ಚಹಾವನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ಅದರಲ್ಲಿ ಗ್ರೀನ್ ಟೀ ಬ್ಯಾಗ್ ಗಳನ್ನು ಹಾಕಿ. ಇದಕ್ಕೆ ತೆಂಗಿನ ಹಾಲು ಸೇರಿಸಿ ಮತ್ತು ಹೆವಿ ಕ್ರೀಮ್ ಮಿಶ್ರಣ ಮಾಡಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಟೀ ಬ್ಯಾಗ್ಗಳನ್ನು ಹೊರತೆಗೆಯಿರಿ. ಟೇಸ್ಟ್ ಹೆಚ್ಚಿಸಲು ಬ್ರೌನ್ ಶುಗರ್ ಬೆರೆಸಿ.
ಇದನ್ನೂ ಓದಿ-ಮಕ್ಕಳ ಮೆದುಳನ್ನು ಐನ್ಸ್ಟೈನ್ ನಂತೆ ಚುರುಕಾಗಿಸಬೇಕೆ? ಈ ಉಪಾಯ ಟ್ರೈ ಮಾಡಿ ನೋಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.