Chennai Super Kings Next Captain: ಮುಂಬರುವ ಐಪಿಎಲ್-2023 ಸೀಸನ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಫೆಬ್ರವರಿ 17 ರ ಸಂಜೆ ಇಂಡಿಯನ್ ಪ್ರೀಮಿಯರ್ ಲೀಗ್ನ 16 ನೇ ಸೀಸನ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರು ಮುಂಬರುವ ಮೆಗಾ ಈವೆಂಟ್ಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲು ಪ್ರಾರಂಭಿಸಿದ್ದಾರೆ. ಅನುಭವಿ ಮಹೇಂದ್ರ ಸಿಂಗ್ ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ನ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಯೂ ಇದೆ. ಈ ಬಗ್ಗೆ ಅನುಭವಿ ವಿಕೆಟ್ಕೀಪರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧೋನಿ ನಂತರ CSK ನಾಯಕ ಯಾರು?
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಅವರು ಇಲ್ಲಿಯವರೆಗೆ 4 ಬಾರಿ ಟ್ರೋಫಿಯನ್ನು ಗೆದ್ದಿದ್ದಾರೆ ಮತ್ತು ಎಲ್ಲಾ ನಾಲ್ಕು ಬಾರಿಯೂ ನಾಯಕತ್ವವು ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು. ಧೋನಿ ಐಪಿಎಲ್ ತೊರೆದ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಈಗ ಎದ್ದಿವೆ. ಈ ಬಗ್ಗೆ ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ಪಾರ್ಥಿವ್ ಪಟೇಲ್ ತಮ್ಮ ಅಭಿಪ್ರಾಯವನ್ನು ನೀಡಿದ್ದು, ಪಟ್ಟಿಯಲ್ಲಿ ಅನುಭವಿ ಇಂಗ್ಲೆಂಡ್ ಕ್ರಿಕೆಟಿಗರನ್ನು ಆಯ್ಕೆಯಾಗಿ ಹೇಳಿದ್ದಾರೆ.
ಇದನ್ನೂ ಓದಿ : ಪಬ್ಲಿಕ್ ನಲ್ಲಿಯೇ ಬಂದೂಕು ಹಿಡಿದ ಶೂಟ್ ಮಾಡಲು ಮುಂದಾದ Sanju Samson! ಮುಂದೆ..?
ಇಂಗ್ಲೆಂಡ್ನ ಆಲ್ರೌಂಡರ್ ಮೊಯಿನ್ ಅಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ಗೆ ನಾಯಕರಾಗಬಹುದು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ವಿಶೇಷ ಸಂವಾದದಲ್ಲಿ ಪಾರ್ಥಿವ್ ಪಟೇಲ್, 'ನಾನು ಪ್ರಸ್ತಾಪಿಸಲು ಬಯಸುವ ಒಂದು ಹೆಸರು ಇದೆ, ಅದು ಮೊಯಿನ್ ಅಲಿ. ರಿತುರಾಜ್ ಗಾಯಕ್ವಾಡ್ ನಾಯಕತ್ವಕ್ಕೆ ಸಿದ್ಧರಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು" ಎಂದಿದ್ದಾರೆ.
37 ವರ್ಷದ ಪಾರ್ಥಿವ್ ಪಟೇಲ್ ಅವರು ಮೊಯಿನ್ ಪರವಾಗಿ ಒಂದು ಸಕಾರಾತ್ಮಕ ವಿಷಯವೆಂದರೆ ಅವರು ಟೆಸ್ಟ್ ಆಡದ ಕಾರಣ ಸಂಪೂರ್ಣ ಐಪಿಎಲ್-2023 ಕ್ಕೆ ಲಭ್ಯವಿರುತ್ತಾರೆ ಎಂದು ಹೇಳಿದರು. ಹಾಗಾಗಿ ಅವರು ಆಸಿಸ್ ಸರಣಿಗೆ ಹೋಗಬೇಕಾಗಿಲ್ಲ. ಪಟೇಲ್, 'ಮೊಯಿನ್ ಅಲಿ ಟೆಸ್ಟ್ ಪಂದ್ಯಗಳನ್ನು ಆಡದ ಮಾದರಿಯ ಆಟಗಾರ. ಜೋಸ್ ಬಟ್ಲರ್ ಗಾಯಗೊಂಡಾಗ ಅಥವಾ ಅಲಭ್ಯವಾದಾಗ ಅವರು ಇಂಗ್ಲೆಂಡ್ನ ನಾಯಕರಾಗಿದ್ದಾರೆ. ಆದ್ದರಿಂದ, ಅವರು ಅಲ್ಪಾವಧಿಯ ಆಯ್ಕೆಯಾಗಿರಬಹುದು, ಏಕೆಂದರೆ CSK ಮತ್ತು ಮುಂಬೈ ಯಾವಾಗಲೂ ದೀರ್ಘಾವಧಿಯ ಆಯ್ಕೆಗಳ ಬಗ್ಗೆ ಯೋಚಿಸುತ್ತವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಯಲ್ಲಿ ಮೊಯಿನ್ ಅವರೊಂದಿಗೆ ಆಡಿದ ಅನುಭವವಿದೆ ಎಂದು ಪಾರ್ಥಿವ್ ಹೇಳಿದರು.
ಇದನ್ನೂ ಓದಿ : MS Dhoni ಅಲ್ಲ, ಈ ಆಟಗಾರ IPLನ ಅತ್ಯುತ್ತಮ ನಾಯಕ ಎಂದ ಸೆಹ್ವಾಗ್: ರೊಚ್ಚಿಗೆದ್ದ ಭಜ್ಜಿ ಹೇಳಿದ್ದು ಹೀಗೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.