SK Bhagavan : ಕನ್ನಡ ಚಿತ್ರರಂಗದ ದಂತಕಥೆ, ಚಂದನವದಲ್ಲಿ ವಿಶಿಷ್ಟ ಕಥಾಹಂದರ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ರಾರಾಜಿಸಿದ್ದ ಖ್ಯಾತ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಇನ್ನಿಲ್ಲ. ವಯೋಸಹಜ ಖಾಯಿಲೆಯಿಂದಾಗಿ ಕಳೆದ 2 ತಿಂಗಳಿನಿಂದ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ದೊರೆ ಇಂದು ಅಪಾರ ಅಭಿಮಾನಿ ಬಳಗವನ್ನು ಒಂಟಿ ಮಾಡಿ ಇಹಲೋಕ ತ್ಯಜಿಸಿದ್ದಾರೆ.
ಹೌದು, ಭಗವಾನ್ ಅವರು ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ. ಸ್ಯಾಂಡಲ್ವುಡ್ನಲ್ಲಿ ವಿಶಿಷ್ಟ ಆಯಾಮ ಸಿನಿಮಾಗಳನ್ನು ದೊರೆ ಪರಿಚಿಯಿಸಿದ್ದರು. ಅವರ ಹಾಗೂ ವರನಟ ಡಾ, ರಾಜ್ ಕುಮಾರ್ ಕಾಂಬಿನೆಷನ್ನ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಸಿನಿರಸಿಕರು ಈ ಜೋಡಿಯ ಸಿನಿಮಾಗಳನ್ನು ನೋಡಲು ಸದಾ ಕುತೂಹಲದಿಂದ ಕಾಯುತ್ತಿದ್ದರು. ಅಣ್ಣಾವ್ರು ಹಾಗೂ ಭಗವಾನ್ ಜೊಡಿಯೇ ಹಾಗಿತ್ತು. ಆದ್ರೆ ಅದೇ ಜೋಡಿ ಸತತ 8 ವರ್ಷಗಳ ಕಾಲ ದೂರವಾಗಿದ್ದ ವಿಚಾರ ನಿಜಕ್ಕೂ ಅಂದಿನ ಕಾಲದ ಪ್ರೇಕ್ಷಕರಿಗೆ ಆಘಾತ ಉಂಟುಮಾಡಿತ್ತು.
ಇದನ್ನೂ ಓದಿ: SK Bhagavan : ಕನ್ನಡದ ಖ್ಯಾತ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶ
ಯಸ್.. ತಮ್ಮದಲ್ಲದ ತಪ್ಪಿಗೆ ದೊರೆ ರಾಜಣ್ಣ ಅವರಿಂದ ದೂರವಾಗಿದ್ದರು. ಇದಕ್ಕೆ ಕಾರಣ ಒಂದು ಕಹಿ ಘಟನೆ. 1984ರಲ್ಲಿ ʼಯಾರಿವನುʼ ಸಿನಿಮಾ ಚಿತ್ರೀಕರಣದ ವೇಳೆ ರಾಜ್ಕುಮಾರ್ ಅವರ ಮೇಲೆ ಹಲ್ಲೆ ನಡೆದಿತ್ತು. ಇದರಿಂದ ನಿರ್ದೇಶಕ ಭಗವಾನ್ ಅವರು ಮುಜುಗರಕ್ಕೊಳಗಾಗಬೇಕಾಯಿತು. ಈ ಘಟನೆ ಬಳಿಕ ಬರೋಬ್ಬರಿ 8 ವರ್ಷಗಳ ಕಾಲ ರಾಜ್ಕುಮಾರ್ ಜೊತೆ ದೊರೈ ಭಗವಾನ್ ಒಂದು ಸಿನಿಮಾವನ್ನೂ ಸಹ ಮಾಡಿರಲಿಲ್ಲ.
ಮತ್ತೇ ಒಂದಾದ ಜೋಡಿ 1992ರಲ್ಲಿ ʼಜೀವನ ಚೈತ್ರʼ ಸಿನಿಮಾ ಮಾಡುತ್ತಾರೆ. ಆ ಸಿನಿಮಾ ಕೂಡ ಸೂಪರ್ ಹಿಟ್ ಸಹ ಆಗಿತ್ತು. ʼಒಡಹುಟ್ಟಿದವರುʼ ಈ ಅಪರೂಪದ ಜೋಡಿಯ ಕೊನೆಯ ಸಿನಿಮಾವಾಗಿತ್ತು. ತನ್ನ ನೆಚ್ಚಿನ ಸ್ನೇಹಿತ ದೊರೆಯನ್ನು ಕಳೆದುಕೊಂಡಿದ್ದ ಭಗವಾನ್ ಅವರು ಈ ಸಿನಿಮಾವನ್ನು ಒಂಟಿಯಾಗಿ ನಿರ್ದೇಶನ ಮಾಡಿದ್ದರು. ಆದ್ರೆ ಕಲಾಸೇವೆ ನಿಲ್ಲಿಸಿದ ಭಗವಾನ್ ಅವರು, ಯುವ ಪೀಳಿಗೆ ಹಿರೋಗಳಾದ ಸಂಚಾರಿ ವಿಜಯ್ ನಟನೆಯ ʼಆಡುವ ಬೊಂಬೆʼ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಾರೆ. ಇದು ಅವರ ಕೊನೆಯ ಸಿನಿಮಾ ಆಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.