ಬೆಂಗಳೂರು : ಖಾಸಗಿ ಸ್ಲೀಪರ್ ಬಸ್ಗಳಿಗೆ ಸೆಡ್ಡು ಹೊಡೆಯಲು ಕೆಎಸ್ಆರ್ಟಿಸಿ ಇಂದು 20 ಹೊಸ ಅಂಬಾರಿ ಉತ್ಸವ ಸ್ಲೀಪರ್(ವೋಲ್ವೋ ಮಲ್ಟಿ ಆಕ್ಸೆಲ್) ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಿದೆ.
ಇಂದು ವಿಧಾನಸೌಧದ ಮುಂದೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್ಗಳಿಗೆ ಇಂದು ಚಾಲನೆ ನೀಡಿದರು. ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಮಹತ್ವಾಕಾಂಕ್ಷೆಯ ಹೊಸ ವೋಲ್ವೋ ಅಂಬಾರಿ ಬಸ್ ಸೇವೆ ಆರಂಭಿಸಿದೆ.
ಇದನ್ನೂ ಓದಿ : ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರಾ ಹೆಚ್ ಡಿಕೆ? ಏನಿದೆ ಜೆಡಿಎಸ್ ಲೆಕ್ಕಾಚಾರ ?
ಕೆಎಸ್ಆರ್ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಈ ಬಸ್'ಗಳು ಅತ್ಯುತ್ತಮ ಸೌಕರ್ಯ ಹೊಂದಿದ್ದು, ಇವುಗಳಲ್ಲಿ ಪ್ರಯಾಣ ಮಾಡುವುದು ವಿಮಾನದಂತಹ ಪ್ರಯಾಣದ ಅನುಭವ ನೀಡುತ್ತದೆ. ಈ ಬಸ್'ಗಳು 15 ಮೀಟರ್ ಉದ್ದವಾಗಿವೆ. ಆದರೆ, ಅಂಬಾರಿ ಉತ್ಸವ್ ಬಸ್ ನಿಖರವಾದ ಮಾರ್ಗ ಮತ್ತು ಟಿಕೆಟ್ ದರಗಳು ಇನ್ನೂ ನಿಗದಿ ಆಗಿಲ್ಲ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಗೆ ಬಸ್ಗಳನ್ನು ಸೇರಿಸಲಾಗುವುದು. ಇನ್ನು 30 ಬಸ್ ಮುಂದಿನ ದಿನಗಳಲ್ಲಿ ಬರಲಿದೆ. ಅಂಬಾರಿ ಉತ್ಸವ್ - ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಬಸ್ ಸೇವೆ ಇಡಲಾಗಿದೆ.
ಇಡೀ ದೇಶದಲ್ಲೇ ಅತಿ ಹೆಚ್ಚು ಐಷಾರಾಮಿ ಬಸ್ ಹೊಂದಿರುವ ಗರಿಮೆ ಕೆಎಸ್ಆರ್ಟಿಸಿಗಿದೆ. ಇಡೀ ದೇಶದಲ್ಲೇ ಯಾವುದೇ ಖಾಸಗಿ ಕಂಪನಿಗಳು ಹೊಂದಿರದ ಬಸ್'ಗಳು ಈ ನಮ್ಮ ಕೆಎಸ್ಆರ್ಟಿಸಿಯಲ್ಲಿವೆ. ಅಂದರೆ. ಕೇವಲ ಒಂದೇ ಒಂದು ಖಾಸಗಿ ಬಸ್ ಟ್ರಾವೆಲ್ಸ್ ಮಾತ್ರ ಈ ಮಾದರಿಯ ಎರಡು ಬಸ್ ಹೊಂದಿದೆ. ಇಂದು 15 ಬಸ್'ಗಳು ವಿಧಾನಸೌಧದಲ್ಲಿ ಚಾಲನೆ ನೀಡಿದ್ದು, ಇನ್ನು 5 ಬಸ್ ಗಳು ಕೆಎಸ್ಆರ್ಟಿಸಿ ಡಿಪೋದಲ್ಲಿವೆ.
ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸಲ್ ಬಿ.ಎಸ್ 4 - 9600 ಸ್ಲೀಪರ್ ಬಸ್ಸುಗಳನ್ನು, ಲೋಕಾರ್ಪಣೆಗೊಳಿಸಿ ಮಾತನಾಡಿದರು. pic.twitter.com/NSuZ3Apk9M
— CM of Karnataka (@CMofKarnataka) February 21, 2023
ಅಂಬಾರಿ ಉತ್ಸವ್ ಬಸ್'ನ ವಿಶೇಷತೆಗಳು
ಈ ಬಸ್'ಗಳಲ್ಲಿ 40 ಸ್ಲೀಪರ್ ಬೆಡ್ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯವಿದೆ. ಅಲ್ಲದೆ, ಪಿಯು ಫೋಮ್ ಸ್ಲೀಪರ್ ಆಸನ ಜೊತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯದಯದಾಗಿದೆ. ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, ಯುಎಸ್'ಬಿ ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳಿವೆ. ಅಲ್ಲದೆ, 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್'ಗಳಿವೆ. ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಸ್ಟೋರೇಜ್ ವ್ಯವಸ್ಥೆ, ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಲೀಕರಿಸಿದ ವಸ್ತುಗಳ ಬಳಕೆ, ಸಂಪೂರ್ಣ ಪೆನೆಲಿಂಗ್, ಬಂಡಿಂಗ್ ಪ್ರಕ್ರಿಯೆ ಒಳಗೊಂಡಿದೆ.
ಕೆಎಸ್ಆರ್ಟಿಸಿ ಹೊಸ ವೋಲ್ವೋ ಮಲ್ಟಿ ಆಕ್ಸೆಲ್ ಬಸ್ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ರೈಲು ಮಾದರಿಯಲ್ಲಿಯೇ, ಬಸ್ಸಿನ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್ ಗಳು ದೂರ ಪ್ರಯಾಣಕ್ಕೆ ಬಹಳ ಅನುಕೂಲವಾಗುತ್ತೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಬಸ್ಸಿನಲ್ಲಿ ಸಿಗಲಿದೆ. ಈ ಬಸ್ಸುಗಳಿಗೆ ಪಡೆ ಅಂತ ನಾನು ಕರೆಯುತ್ತೇನೆ. ನಾನು ಕೂಡ ಕೆಎಸ್ಆರ್ಟಿಸಿ ಕೆಂಪು ಬಸ್ಸಿನಲ್ಲೇ ಶಾಲಾ ಕಾಲೇಜಿಗೆ ಹೋಗಿ ಓದಿದ್ದು. ಹಳ್ಳಿಗಳಲ್ಲಿ ವಿಶೇಷವಾಗಿ ಕೆಎಸ್ಆರ್ಟಿಸಿ ಬಸ್ಸುಗಳ ಜೊತೆ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಲಾಭದಲ್ಲಿದ್ದ ಸಾರಿಗೆ ನಿಗಮಗಳಿಗೆ ಕೊರೊನಾ ದೊಡ್ಡ ಹೊಡೆತ ನೀಡಿತು. ಆಗ ನಮ್ಮ ಬಿಜೆಪಿ ಸರ್ಕಾರದಿಂದ 4600 ಕೋಟಿ ಹಣವನ್ನ 4 ನಿಗಮಗಳಿಗೆ ನೀಡಿದೆ. ಸಾರಿಗೆ ನಿಗಮಗಳು ಮೊದಲಿನಂತೆ ಲಾಭದಲ್ಲಿ ನಡೆಯಬೇಕು. ಖಾಸಗಿ ಅವರಿಗೆ ನಾವು ಪೈಪೋಟಿ ನೀಡಬೇಕು ಅಂದ್ರೆ, ನಾವು ಕಮರ್ಶಿಯಲ್ ರೂಟ್ ಗಳನ್ನ ಹೆಚ್ಚಿಸಬೇಕು. ಅದರ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿನಿಯರಿಗೆ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡಲಾಗಿದೆ..ಏಪ್ರಿಲ್ 1 ರಿಂದ ಪಾಸ್ ಗಳನ್ನ ವಿತರಣೆ ಮಾಡಬೇಕು ಎಂದು ಪಾಸ್ ಗಳನ್ನ ಸಿದ್ದಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ರೋಹಿಣಿ ಸಿಂಧೂರಿ, ಡಿ.ರೂಪಾ ಬೀದಿ ರಂಪಾಟ ವಿಚಾರ - ಇಬ್ಬರಿಗೂ ಸರ್ಕಾರದಿಂದ ನೋಟಿಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.