ಒಂದರ ಹಿಂದೆ ಒಂದರಂತೆ ರೋಡಿಗಿಳಿಯಲಿವೆ ಅಗ್ಗದ ಕಾರುಗಳು ! Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ

Maruti-Tata-Hyundai Upcoming SUV: ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನಂತಹ ಟಾಪ್ ಕಂಪನಿಗಳು ಬಜೆಟ್ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ.

Written by - Ranjitha R K | Last Updated : Mar 1, 2023, 09:16 AM IST
  • ರೋಡಿಗಿಳಿಯಲಿವೆ ಆರು ಹೊಸ ಕಾರುಗಳು
  • ಎಸ್ ಯುವಿ ಖರೀದಿಸುವವರಿಗೆ ಆಯ್ಕೆ ಮೇಲೆ ಆಯ್ಕೆ ಲಭ್ಯ
  • ಬೆಲೆ ಕೂಡಾ ದುಬಾರಿಯೇನಲ್ಲ
ಒಂದರ ಹಿಂದೆ ಒಂದರಂತೆ ರೋಡಿಗಿಳಿಯಲಿವೆ ಅಗ್ಗದ  ಕಾರುಗಳು !  Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ title=

Maruti-Tata-Hyundai Upcoming SUV : ಕೈಗೆಟುಕುವ ದರದಲ್ಲಿ ಶಕ್ತಿಯುತ ಎಸ್‌ಯುವಿಯನ್ನು ಎದರು ನೋಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯಿದೆ. ಶೀಘ್ರದಲ್ಲಿಯೇ ಹಲವು ಉತ್ತಮ ಆಯ್ಕೆಗಳು ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನಂತಹ ಟಾಪ್ ಕಂಪನಿಗಳು ಬಜೆಟ್ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. 

ಮಾರುತಿ ಮುಂಬರುವ ಕಾರು :
ಮಾರುತಿ ಸುಜುಕಿ ಮುಂದಿನ ಕೆಲವೇ ತಿಂಗಳುಗಳಲ್ಲಿ 3 ಹೊಸ SUVಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಫ್ರಾಂಕ್ಸ್ ಮತ್ತು ಜಿಮ್ನಿ 5 ಡೋರ್‌ಗಾಗಿ ಬುಕ್ಕಿಂಗ್‌ಗಳನ್ನು ಕಂಪನಿಯು ಈಗಾಗಲೇ ಪ್ರಾರಂಭಿಸಿದೆ. ಫ್ರಾಂಕ್ಸ್ ಮತ್ತು ಜಿಮ್ನಿಯನ್ನು ಆಟೋ ಎಕ್ಸ್‌ಪೋ 2023ರಲ್ಲಿ ಅನಾವರಣಗೊಳಿಸಲಾಗಿತ್ತು. ಅವುಗಳ ಬೆಲೆ ಕ್ರಮವಾಗಿ 7 ಲಕ್ಷ ಮತ್ತು 10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದು ಎಂದು  ಹೇಳಲಾಗಿದೆ. ಮಾರುತಿ ಸುಜುಕಿ ಬ್ರೆಜಾದ  ಸಿಎನ್‌ಜಿ ಮಾದರಿ ಕೂಡಾ ಉತ್ತಮ ಮೈಲೇಜ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಉದ್ಯೋಗದ ಆಸೆಗೆ ಬಲಿಯಾಗದಿರಿ! ಲಿಂಕ್ಡ್‌ಇನ್‌ ಈಗ ವಂಚಕರ ಹೊಸ ಅಡ್ಡ

ಟಾಟಾ ಪಂಚ್ ಸಿಎನ್‌ಜಿ ಮತ್ತು ಇವಿ :
ಟಾಟಾ ಮೋಟಾರ್ಸ್ ತನ್ನ ಬಹು ನಿರೀಕ್ಷಿತ ಮೈಕ್ರೋ ಎಸ್‌ಯುವಿ ಪಂಚ್ ಅನ್ನು ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. ಪಂಚ್ ಸಿಎನ್‌ಜಿಯನ್ನು ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಗಿತ್ತು. ಪಂಚ್ ಸಿಎನ್‌ಜಿ ಮತ್ತು ಇವಿ ಎರಡನ್ನೂ 10 ಲಕ್ಷದವರೆಗಿನ ಬೆಲೆ ಶ್ರೇಣಿಯಲ್ಲಿ ಪರಿಚಯಿಸಬಹುದು  ಎನ್ನಲಾಗಿದೆ. ಇದು ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಟಾಟಾ ಮೋಟಾರ್ಸ್‌ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. 

ಹ್ಯುಂಡೈ ಮೈಕ್ರೋ ಎಸ್‌ಯುವಿ : 
ಹ್ಯುಂಡೈ ಮೋಟಾರ್ ಕೂಡಾ ಕ್ಯಾಸ್ಪರ್ ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕ್ಯಾಸ್ಪರ್ ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಅದರ ಆರಂಭಿಕ ಬೆಲೆ 6-7 ಲಕ್ಷ ರೂ ಆಗಿರಲಿದೆ. ಒಟ್ಟಾರೆಯಾಗಿ, ಮುಂಬರುವ ಸಮಯವು ಭಾರತದಲ್ಲಿ SUV ಖರೀದಿದಾರರಿಗೆ ಆಯ್ಕೆಗಳ ಮೇಲೆ ಆಯ್ಕೆಗಳು ಲಭ್ಯವಾಗಲಿದೆ. ಏಕೆಂದರೆ ಅನೇಕ ಹೊಸ ಮತ್ತು ಕೈಗೆಟುಕುವ  ಕಾರುಗಳು ಮಾರುಕಟ್ಟೆಗೆ ಬರಲಿವೆ.

ಇದನ್ನೂ ಓದಿ : Jio Offer : ಉಚಿತ ಇಂಟರ್ನೆಟ್ ಮತ್ತು ಅನಿಯಮಿತ ಕರೆ.. ಜಿಯೋ ಹೊಸ ಆಫರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News