Kichcha Sudeep: ಪ್ರಕೃತಿ ಕಂದಮ್ಮಗಳ ದಾಹ ನೀಗಿಸಲು ಹೊರಡಿದೆ ‘ಕಿಚ್ಚನ ಅಭಿಮಾನ’ದ ಮೆರವಣಿಗೆ..!

ಇನ್ನು ಬೆಂಗಳೂರಿನಲ್ಲಿ ನೀರಿಗೆ ಜನರೇ ಪರದಾಡುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ-ಪಕ್ಷಿಗಳ ಪಾಡೇನು? ಇವೆಲ್ಲವನ್ನು ಒಂದು ಬಾರಿ ಯೋಚಿಸಿದರೆ ಮನಸ್ಸು ಭಾರ ಅನಿಸುತ್ತೆ. ಆದರೆ ಇದೀಗ ಈ ಮೂಕ ಜೀವಿಗಳ ದಾಹ, ಹಸಿವು ನೀಗಿಸಲು ಕಿಚ್ಚನ ಅಭಿಮಾನದ ಬಳಗವೊಂದು ಸವಾರಿ ಹೊರಟಿದೆ.

Written by - K Karthik Rao | Edited by - Bhavishya Shetty | Last Updated : Mar 13, 2023, 10:46 PM IST
    • ಇನ್ನು ಬೆಂಗಳೂರಿನಲ್ಲಿ ನೀರಿಗೆ ಜನರೇ ಪರದಾಡುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ-ಪಕ್ಷಿಗಳ ಪಾಡೇನು?
    • ಇವೆಲ್ಲವನ್ನು ಒಂದು ಬಾರಿ ಯೋಚಿಸಿದರೆ ಮನಸ್ಸು ಭಾರ ಅನಿಸುತ್ತೆ.
    • ಆದರೆ ಇದೀಗ ಈ ಮೂಕ ಜೀವಿಗಳ ದಾಹ, ಹಸಿವು ನೀಗಿಸಲು ಕಿಚ್ಚನ ಅಭಿಮಾನದ ಬಳಗವೊಂದು ಸವಾರಿ ಹೊರಟಿದೆ.
Kichcha Sudeep: ಪ್ರಕೃತಿ ಕಂದಮ್ಮಗಳ ದಾಹ ನೀಗಿಸಲು ಹೊರಡಿದೆ ‘ಕಿಚ್ಚನ ಅಭಿಮಾನ’ದ ಮೆರವಣಿಗೆ..! title=
Kichcha Sudeep

Kichcha Sudeep Charitable Society: ಬೇಸಿಗೆ ಕಾಲ ಶುರುವಾಗಿದ್ದು, ಸುಡು ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸೂರ್ಯ ಆಗಸ ಬಿಟ್ಟು ಭೂಮಿಗೆ ಬಂದಿದ್ದಾನೆ ಏನೋ ಅನ್ನೋವಷ್ಟು ಭೀಕರವಾಗಿದೆ ಈ ಬಿಸಿಲು. ಇನ್ನು ಈ ಬಿಸಿಲಿನ ತಾಪವನ್ನು ಮನುಷ್ಯರೇ ತಡೆದುಕೊಳ್ಳಲು ಕಷ್ಟಪಡುತ್ತಿದ್ದಾರೆ. ಹಾಗಾದ್ರೆ ಪ್ರಾಣಿ ಪಕ್ಷಿಗಳ ಗತಿ ಹೇಗಿರಬೇಡ ಹೇಳಿ. ಊಹಿಸಲೂ ಕಷ್ಟ ಅಲ್ವಾ!!

ಇನ್ನು ಬೆಂಗಳೂರಿನಲ್ಲಿ ನೀರಿಗೆ ಜನರೇ ಪರದಾಡುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ-ಪಕ್ಷಿಗಳ ಪಾಡೇನು? ಇವೆಲ್ಲವನ್ನು ಒಂದು ಬಾರಿ ಯೋಚಿಸಿದರೆ ಮನಸ್ಸು ಭಾರ ಅನಿಸುತ್ತೆ. ಆದರೆ ಇದೀಗ ಈ ಮೂಕ ಜೀವಿಗಳ ದಾಹ, ಹಸಿವು ನೀಗಿಸಲು ಕಿಚ್ಚನ ಅಭಿಮಾನದ ಬಳಗವೊಂದು ಸವಾರಿ ಹೊರಟಿದೆ.

ಇದನ್ನೂ ಓದಿ: ಬಡ ಹೊಟ್ಟೆ ತುಂಬಿಸಲು ಅನ್ನವೆಂಬ ಅಮೃತವಿಡಿದು ಹೊರಟಿದೆ ʼಕಿಚ್ಚನ ದೂತʼರ ಸವಾರಿ..!

ಹೌದು ನಗರದಲ್ಲಿ ಸುಡುಬಿಸಿಲಿನಿಂದ ಆಹಾರ ನೀರು ಸಿಗದೆ ಪರದಾಡುತ್ತಿರುವ ಜೀವಿಗಳಿಗೆ ಹೊಟ್ಟೆ ತುಂಬಿಸಲು 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ಮುಂದಾಗಿದೆ.

'ಮೊದಲು ಮಾನವನಾಗು' ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕಿಚ್ಚ ಸುದೀಪ್ ಅವರ 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ಈ ಕೆಲಸವನ್ನು ಮಾಡುತ್ತಿದೆ.

ಪ್ರಾಣಿ-ಪಕ್ಷಿಗಳ ಬಿಸಿಲಿನ ಬೇಗಯನ್ನ ನೀಗಿಸೋದಕ್ಕಾಗಿ ರಸ್ತೆ ಬದಿಯ ಮರಗಳ ಮೇಲೆ ಪಕ್ಷಿಗಳಿಗೆ ಅನುಕೂಲವಾಗುವಂತೆ ನೀರು ಮತ್ತು ಅದಕ್ಕೆ ಬೇಕಾದ ಆಹಾರವನ್ನು ಇಡುವ ವ್ಯವಸ್ಥೆಯನ್ನ ಮಾಡುತ್ತಿದೆ. ಇದರ ಜೊತೆಗೆ ಬೀದಿಬದಿಗಳಲ್ಲಿ ಓಡಾಡುತ್ತಿರುವ ಶ್ವಾನಗಳು ಸೇರಿ ಇತರ ಪ್ರಾಣಿಗಳಿಗೂ ಹಸಿವು ದಾಹ ತೀರಿಸುವ ವ್ಯವಸ್ಥೆಯನ್ನ ಮಾಡಿದೆ.

ಈ ಬಗ್ಗೆ ಸಂದೇಶ ಸಾರಿರುವ 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ', “ಈ ಕೆಲಸ ಪೂರ್ಣಗೊಳ್ಳೋದು ನಮ್ಮಿಂದ ಮಾತ್ರವಲ್ಲ. ನೀವು ಜೊತೆಯಾಗಿ. ನಾವು ನಮ್ಮ ಕೆಲಸ ಶುರು ಮಾಡಿದ್ದೀವಿ, ನಿಮ್ಮ ಊರುಗಳಲ್ಲಿ ನೀವು ಮುಂದುವರೆಸಿ” ಎಂದು ಹೇಳಿದೆ.

ಇದನ್ನೂ ಓದಿ: Rani Mukerji : ಮನೆಯಲ್ಲಿನ ಬಡತನವೇ ನಟಿ ರಾಣಿ ಮುಖರ್ಜಿಗೆ ಈ ಕೆಲಸ ಮಾಡಲು ಪ್ರೇರೆಪಿಸಿತು.!

ಪ್ರತೀ ಜೀವರಾಶಿಗೂ ನೀರು-ಆಹಾರ ಅತ್ಯಮೂಲ್ಯ. ಇದನ್ನು ಗಮನದಲ್ಲಿಟ್ಟುಕೊಂಡು ನೀರು ಮತ್ತು ಆಹಾರವನ್ನು ಮಿತವಾಗಿ ಬಳಸೋಣ. ನಮ್ಮಿಂದ ಸಾಧ್ಯವಾಗುವ ಮಟ್ಟಿಗೆ ಪ್ರಾಣಿ-ಪಕ್ಷಿಗಳ ರಕ್ಷಣೆ ಮಾಡುವ ಪಣತೊಡೋಣ. ಇಂತಹ ಮಹಾಕಾರ್ಯದಿಂದ ಜೀವಸಂಕುಲವನ್ನು ಕಾಪಾಡುವಂತೆ ಮಾಡುವುದೇ ಜೀ ಕನ್ನಡ ನ್ಯೂಸ್ ಆಶಯ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News