DA Arrears ನಿರೀಕ್ಷಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಭಾರೀ ಹೊಡೆತ: ಇನ್ಮುಂದೆ ಈ ಹಣ ಬರಲ್ವಂತೆ…!!

7th Pay Commission latest news: ಜನವರಿ 2020 ಮತ್ತು ಜೂನ್ 2021 ರ ನಡುವೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವನ್ನು ಕೇಂದ್ರವು ಸ್ಥಗಿತಗೊಳಿಸಿತ್ತು. ಜುಲೈ 14, 2021 ರಂದು ಕ್ಯಾಬಿನೆಟ್ ಸಭೆಯ ನಂತರ ಡಿಎ ಹೆಚ್ಚಳವನ್ನು ಪುನರಾರಂಭಿಸಲಾಯಿತು. ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯನ್ನು ಸಂಪೂರ್ಣವಾಗಿ ಶೇಕಡಾ 11 ರಷ್ಟು ಹೆಚ್ಚಿಸಲಾಯಿತು. ಆದರೆ, ನೌಕರರು ಈ ಅವಧಿಯ ಬಾಕಿ ವೇತನಕ್ಕಾಗಿ ನಿರಂತರವಾಗಿ ಬೇಡಿಕೆಯನ್ನು ಎತ್ತುತ್ತಿದ್ದು, ಸರ್ಕಾರವು ಈ ವಿಷಯವನ್ನು ಪರಿಗಣಿಸುತ್ತದೆ ಎಂದು ನಂಬಿಕೆ ಇಟ್ಟಿದ್ದರು.

Written by - Bhavishya Shetty | Last Updated : Mar 14, 2023, 02:58 PM IST
    • ಜನವರಿ 2020 ಮತ್ತು ಜೂನ್ 2021 ರ ನಡುವೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವನ್ನು ಕೇಂದ್ರವು ಸ್ಥಗಿತಗೊಳಿಸಿತ್ತು.
    • ಜುಲೈ 14, 2021 ರಂದು ಕ್ಯಾಬಿನೆಟ್ ಸಭೆಯ ನಂತರ ಡಿಎ ಹೆಚ್ಚಳವನ್ನು ಪುನರಾರಂಭಿಸಲಾಯಿತು.
    • ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯನ್ನು ಸಂಪೂರ್ಣವಾಗಿ ಶೇಕಡಾ 11 ರಷ್ಟು ಹೆಚ್ಚಿಸಲಾಯಿತು
DA Arrears ನಿರೀಕ್ಷಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಭಾರೀ ಹೊಡೆತ: ಇನ್ಮುಂದೆ ಈ ಹಣ ಬರಲ್ವಂತೆ…!! title=
7th Pay Commission

7th Pay Commission latest news: 18 ತಿಂಗಳ ತುಟ್ಟಿಭತ್ಯೆ (ಡಿಎ) ಬಾಕಿ ಬೇಡಿಕೆಯ ಸಂಬಂಧ ಕೇಂದ್ರ ಸರ್ಕಾರ ನೀಡಿದ ಇತ್ತೀಚಿನ ಹೇಳಿಕೆಯು ಲಕ್ಷಾಂತರ ಸರ್ಕಾರಿ ನೌಕರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಕೋವಿಡ್ -19 ಬಳಿಕ ಡಿಎ ಹೆಚ್ಚಳವನ್ನು ಸರ್ಕಾರ ಸ್ಥಗಿತಗೊಳಿಸಿತ್ತು.

ಇದನ್ನೂ ಓದಿ: ಪಡಿತರ ವಿತರಣೆಯ ನಿಯಮ ಬದಲಾಯಿಸಿದ ಸರ್ಕಾರ! ಪ್ರತಿ ತಿಂಗಳು ಉಚಿತವಾಗಿ  ಸಿಗಲಿದೆ ವಿಶೇಷ ರೀತಿಯ ಅಕ್ಕಿ 

ಜನವರಿ 2020 ಮತ್ತು ಜೂನ್ 2021 ರ ನಡುವೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವನ್ನು ಕೇಂದ್ರವು ಸ್ಥಗಿತಗೊಳಿಸಿತ್ತು. ಜುಲೈ 14, 2021 ರಂದು ಕ್ಯಾಬಿನೆಟ್ ಸಭೆಯ ನಂತರ ಡಿಎ ಹೆಚ್ಚಳವನ್ನು ಪುನರಾರಂಭಿಸಲಾಯಿತು. ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯನ್ನು ಸಂಪೂರ್ಣವಾಗಿ ಶೇಕಡಾ 11 ರಷ್ಟು ಹೆಚ್ಚಿಸಲಾಯಿತು. ಆದರೆ, ನೌಕರರು ಈ ಅವಧಿಯ ಬಾಕಿ ವೇತನಕ್ಕಾಗಿ ನಿರಂತರವಾಗಿ ಬೇಡಿಕೆಯನ್ನು ಎತ್ತುತ್ತಿದ್ದು, ಸರ್ಕಾರವು ಈ ವಿಷಯವನ್ನು ಪರಿಗಣಿಸುತ್ತದೆ ಎಂದು ನಂಬಿಕೆ ಇಟ್ಟಿದ್ದರು.

ಆದರೆ ಹಣಕಾಸು ಖಾತೆ MoS ಪಂಕಜ್ ಚೌಧರಿ ಅವರು ಇತ್ತೀಚಿಗೆ ಹೇಳಿಕೆಯೊಂದನ್ನು ನೀಡಿದ್ದು, “2020-21 ರ ಕಷ್ಟಕರವಾದ ಹಣಕಾಸು ವರ್ಷಕ್ಕೆ ಸಂಬಂಧಿಸಿದ DA/DR ನ ಬಾಕಿಗಳನ್ನು ಕಾರ್ಯಸಾಧ್ಯವೆಂದು ಪರಿಗಣಿಸಲಾಗುವುದಿಲ್ಲ" ಎಂದು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. "2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರತಿಕೂಲ ಆರ್ಥಿಕ ಪರಿಣಾಮ ಮತ್ತು ಸರ್ಕಾರವು ತೆಗೆದುಕೊಂಡ ಕಲ್ಯಾಣ ಕ್ರಮಗಳ ಕಾರಣ ಹಣಕಾಸು ವರ್ಷ 2020-21 ರಲ್ಲಿ ತೀವ್ರ ಹಣಕಾಸಿನ ಸಮಸ್ಯೆ ಎದುರಿಸಿದೆ" ಎಂದು ಹೇಳಿದೆ.

“01.01.2020, 01.07.2020 ಮತ್ತು 01.01.2021 ರಿಂದ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರಿಗೆ ಮೂರು ಕಂತುಗಳ ತುಟ್ಟಿಭತ್ಯೆ (ಡಿಎ)/ಡಿಆರ್‌ನೆಸ್ ರಿಲೀಫ್ (ಡಿಆರ್) ಸ್ಥಗಿತಗೊಳಿಸುವ ನಿರ್ಧಾರವನ್ನು ಕೋವಿಡ್-19 ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ. 2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರತಿಕೂಲ ಆರ್ಥಿಕ ಪರಿಣಾಮ ಮತ್ತು ಸರ್ಕಾರವು ತೆಗೆದುಕೊಂಡ ಕಲ್ಯಾಣ ಕ್ರಮಗಳ ಕಾರಣ ಹಣಕಾಸು ವರ್ಷ 2020-21 ರಲ್ಲಿ ತೀವ್ರ ಹಣಕಾಸಿನ ಸಮಸ್ಯೆ ಎದುರಿಸಿದೆ. ಆದ್ದರಿಂದ 2020-21 ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ DA/DR ನ ಬಾಕಿಗಳನ್ನು ಕಾರ್ಯಸಾಧ್ಯವೆಂದು ಪರಿಗಣಿಸಲಾಗುವುದಿಲ್ಲ ” ಎಂದು ಎಂಓಎಸ್ ಚೌಧರಿ ಅವರು ಈ ವಿಷಯದ ಬಗ್ಗೆ ತಮ್ಮ ಲಿಖಿತ ಉತ್ತರದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿಹಿಡಿದ ಟೀಂ ಇಂಡಿಯಾ: WTC ಫೈನಲ್’ಗೆ ಗ್ರ್ಯಾಂಡ್ ಎಂಟ್ರಿ

ಕೇಂದ್ರದ ಉತ್ತರವು ಸರ್ಕಾರಿ ನೌಕರರ ನಿರೀಕ್ಷೆಯನ್ನು ಹುಸಿಗೊಳಿಸಿದಂತೆ ಕಾಣುತ್ತಿದೆ. ಇನ್ನೊಂದೆಡೆ ಈ ಕೇಂದ್ರ ಸರ್ಕಾರಿ ನೌಕರರು 2023 ರ ಮೊದಲ ಡಿಎ ಹೆಚ್ಚಳದ ಪ್ರಕಟಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News