ಕೂದಲುದುರುವಿಕೆ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಈ ಜ್ಯೂಸ್ ಟ್ರೈ ಮಾಡಿ ನೋಡಿ!

Hair Care: ಬೇಸಿಗೆ ಕಾಲದಲ್ಲಿ ಕೂದಲು ಆರೋಗ್ಯಕರವಾಗಿ ಮತ್ತು ದಟ್ಟವಾಗಿರಲು ಮಾಡಲು ನಿತ್ಯ ಈ ಟೇಸ್ಟಿ ಜ್ಯೂಸ್ ಸೇವಿಸಿ. ಇದರಿಂದ ನೈಸರ್ಗಿಕ ಮಾಯಿಶ್ಚರೈಸಿಂಗ್ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಬಲಿಷ್ಠವಾಗಿರುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಈ ಟೆಸ್ಟಿ ಜ್ಯೂಸ್ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ.

Written by - Nitin Tabib | Last Updated : Mar 17, 2023, 10:28 PM IST
  • ಸಾಮಾನ್ಯವಾಗಿ ಕೂದಲು ಸೀಳುವುದು, ತಲೆಹೊಟ್ಟು,
  • ಕೂದಲು ಉದುರುವುದು ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿದೆ.
  • ಕೂದಲಿನ ಈ ಎಲ್ಲಾ ಸಮಸ್ಯೆಗಳು ವಿಪರೀತ ಬಿಸಿಲಿನ ಕಾರಣವೂ ಉಂಟಾಗುತ್ತವೆ,
ಕೂದಲುದುರುವಿಕೆ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಈ ಜ್ಯೂಸ್ ಟ್ರೈ ಮಾಡಿ ನೋಡಿ! title=
ಕೂದಲಿನ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಒಂದು ಅದ್ಭುತ ಜ್ಯೂಸ್!

Best Juice For Hair Care: ಬೇಸಿಗೆ ಕಾಲ ಬಂತೆಂದರೆ, ಬೆವರು ಹಾಗೂ ಉಷ್ಣತೆಯ ತಾಪಮಾನದಿಂದ ಬಹುಶಃ ಪ್ರತಿಯೊಬ್ಬ ವ್ಯಕ್ತಿಯು ಕೂದಲು ಉದುರುವಿಕೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾನೆ. ಒಂದು ವೇಳೆ ಕೂದಲು ಉದುರದೇ ಇದ್ದರೂ ಒಣಗುತ್ತವೆ, ಸಾಮಾನ್ಯವಾಗಿ ಕೂದಲು ಸೀಳುವುದು, ತಲೆಹೊಟ್ಟು, ಕೂದಲು ಉದುರುವುದು ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿದೆ. ಕೂದಲಿನ ಈ ಎಲ್ಲಾ ಸಮಸ್ಯೆಗಳು ವಿಪರೀತ ಬಿಸಿಲಿನ ಕಾರಣವೂ ಉಂಟಾಗುತ್ತವೆ, ಇನ್ನೊಂದೆಡೆ ಸಾಕಷ್ಟು ಶಕೆ ಇರುವ ಕಾರಣ ನಾವು ವಾಹನ ಚಲಾಯಿಸುವಾಗ ತಲೆಗೆ ಹೆಲ್ಮೆಟ್ ಧರಿಸಿ ಸುತ್ತಾಡುತ್ತೇವೆ. ಇದು ಶಕೆಯ ಕಾರಣ ತಲೆಯಲ್ಲಿ ಕೂದಲು ವಿಪರೀತ ನೆನೆದು ಉದುರಲು ಪ್ರಾರಂಭಿಸುತ್ತವೆ.  ಆದರೆ, ಬೇಸಿಗೆ ಕಾಲದಲ್ಲಿ ಇದು ಒಂದು ಸಾಮಾನ್ಯ ಸಮಸ್ಯೆಯಾಗ ಕಾರಣ, ನಾವು ಅದಕ್ಕೆ ಪರಿಹಾರ ಕಂಡುಕೊಳ್ಳುವತ್ತ  ಗಮನ ಹರಿಸುವುದು ಸೂಕ್ತ.

ಇದಕ್ಕಾಗಿ ನಾವು ನಿಮಗೆ ಬೇಸಿಗೆ ಕಾಲದಲ್ಲಿ ಸಾಕಷ್ಟು ಆರೋಗ್ಯ ಒಂದು ವಿಶೇಷ  ಜ್ಯೂಸ್ ಪಾಕವಿಧಾನವನ್ನು ಹೇಳಿಕೊಡಲಿದ್ದೇವೆ. ಈ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ, ಬೇಸಿಗೆ ಕಾಲದಲ್ಲಿ ನಿಮ್ಮ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನೀವು ತೆಗೆದುಹಾಕಬಹುದು. ಅಲ್ಲದೆ, ಇದನ್ನು ಕುಡಿಯುವುದರಿಂದ, ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟವು ಎಂದಿಗಿಂತಲೂ ಉತ್ತಮವಾಗಿರುತ್ತದೆ. ವಿಶೇಷವೆಂದರೆ ಬೇಸಿಗೆ ಕಾಲದಲ್ಲಿ ಪ್ರತಿದಿನ ಈ ಜ್ಯೂಸ್ ಕುಡಿದರೆ ಆರೋಗ್ಯದ ಮೇಲೆ ಉಷ್ಣದ ಕೆಟ್ಟ ಪರಿಣಾಮ ಗೋಚರಿಸುವುದಿಲ್ಲ. ಈ ಜ್ಯೂಸ್‌ನ ಹೆಸರು ಎಬಿಸಿ ಜ್ಯೂಸ್ ಅಂದರೆ ಆಮ್ಲಾ-ಬೀಟ್‌ರೂಟ್-ಕ್ಯಾರೆಟ್ ಜ್ಯೂಸ್ ಎಂದರ್ಥ.

ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ಜ್ಯೂಸ್
ಕೂದಲು ಉದುರುವುದನ್ನು ತಡೆಯಲು, ನೀವು ಸಲಾಡ್ ರೂಪದಲ್ಲಿ ಸೇವಿಸುವ ಕಾಲೋಚಿತ ತರಕಾರಿಗಳನ್ನು ಬಳಸಬೇಕಾಗುತ್ತದೆ. ಅಂದರೆ, 
2 ಕ್ಯಾರೆಟ್ಗಳು
2 ಆಮ್ಲಾ
1 ಬೀಟ್
10 ರಿಂದ 15 ಒಣದ್ರಾಕ್ಷಿ
15 ರಿಂದ 20 ಪುದೀನ ಎಲೆಗಳು
ಸ್ವಲ್ಪ ಶುಂಠಿ
ಅರ್ಧ ನಿಂಬೆ
ರುಚಿಗೆ ಉಪ್ಪು

ಈ ಜ್ಯೂಸ್ ಹೇಗೆ ತಯಾರಿಸಬೇಕು?
ನೀವು ವಿಶೇಷವಾಗಿ ಆಮ್ಲಾ, ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಬಳಸಬೇಕು. ಉಳಿದ ಎಲ್ಲ ಸಂಗತಿಗಳು ಐಚ್ಛಿಕ ಸಂಗತಿಗಳಾಗಿವೆ. ಅಂದರೆ, ನಿಮಗೆ ಬೇಕಾದರೆ ನೀವು ಅವುಗಳನ್ನು ಬಳಸಿ ಮತ್ತು ಬೇಡವಾದರೆ ಬಳಸಬೇಡಿ.

>> ಮೊದಲಿಗೆ ಎಲ್ಲಾ ತರಕಾರಿಗಳನ್ನು ಸರಿಯಾಗಿ ತೊಳೆದುಕೊಳ್ಳಿ.  ಸಿಪ್ಪೆ ಸುಲಿದು ಮತ್ತು ನುಣ್ಣಗೆ ಕತ್ತರಿಸಿ. ಇದಾದ ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಒಣದ್ರಾಕ್ಷಿ ವಿಶೇಷವಾಗಿ ಟೇಸ್ಟ್ ಹೆಚ್ಚಿಸಲು ಬಳಸಲಾಗುತ್ತದೆ. ಇದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದ್ದರೂ ಸಹ, ನೀವು ಅದರ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
>> ರಸವು ಸಿದ್ಧವಾದ ನಂತರ, ಅದನ್ನು ಗ್ಲಾಸಿಗೆ ಹಾಕಿ ಮತ್ತು ಉಪ್ಪು ಮತ್ತು ನಿಂಬೆ ಬೆರೆಸಿ ಮಜಾ ಸವಿಯಿರಿ.

ಯಾವಾಗ ಮತ್ತು ಹೇಗೆ ಕುಡಿಯಬೇಕು?
ಬೆಳಗಿನ ಉಪಾಹಾರ ಮತ್ತು ಊಟದ ನಡುವಿನ ಸಮಯದಲ್ಲಿ ಅಥವಾ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ವಿರಾಮದ ಸಮಯದಲ್ಲಿ ನೀವು ಈ ರಸವನ್ನು ಸೇವಿಸಬಹುದು. ಆದರೆ ಇದನ್ನು ಹಗಲಿನಲ್ಲಿ ಮಾತ್ರ ಸೇವಿಸಲು ಯತ್ನಿಸಿ.

ನೀವು ಇದನ್ನು ಪ್ರತಿದಿನ ಕುಡಿಯಬಹುದು. ನಿತ್ಯ ಸೇವಿಸಿದ ನಂತರವೇ ನೀವು ತ್ವರಿತ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಕೂದಲಿನ ಆರೋಗ್ಯವು ತ್ವರಿತವಾಗಿ ಸುಧಾರಿಸಲು ನೀವು ಬಯಸಿದರೆ, ಇದನ್ನು ನಿತ್ಯ ಸೇವಿಸುವುದರ ಜೊತೆಗೆ, ಪರಿಪೂರ್ಣ ನಿದ್ರೆ ಮತ್ತು ವ್ಯಾಯಾಮ ಮಾಡಿ.

ತರಕಾರಿಗಳನ್ನು ಕುದಿಸಿ ಕೂಡ ನೀವು ಈ ಜ್ಯೂಸ್ ಅನ್ನು ತಯಾರಿಸಬಹುದು
ನಿಮಗೆ ಜೀರ್ಣಕಾರಿ ಸಮಸ್ಯೆ ಇದ್ದರೆ ಅಥವಾ ಜೀರ್ಣಕ್ರಿಯೆ ನಿಧಾನವಾಗಿದ್ದರೆ ಅಥವಾ ಬೇರೆ ಯಾವುದೇ ಸಮಸ್ಯೆ ಇದ್ದರೆ, ನೀವು ಮೊದಲು ಬೀಟ್‌ರೂಟ್, ಆಮ್ಲಾ ಮತ್ತು ಕ್ಯಾರೆಟ್ ಅನ್ನು ಕುಕ್ಕರ್ ಗೆ ಹಾಕಿ ಒಂದು ವಿಶಲ್ ಬರುವವರೆಗೆ ಕುದಿಸಿಕೊಳ್ಳಿ.

ನಂತರ ಅದನ್ನು ಕುದಿಸಲು ಬಳಸುವ ನೀರಿನೊಂದಿಗೆ ರುಬ್ಬಿಕೊಳ್ಳಿ ಮತ್ತು ಅದರ ರಸವನ್ನು ತಯಾರಿಸಿ. ಹೀಗೆ ಮಾಡುವುದರಿಂದ ಜ್ಯೂಸ್ ತ್ವರಿತವಾಗಿ ಜೀರ್ಣ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಭಾರವಾದಂತಹ ಅನುಭವ ಉಂಟಾಗುವುದಿಲ್ಲ.

ಇದನ್ನೂ ಓದಿ-ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದಿಂದ ಕಾಣಿಸಿಕೊಳ್ಳುವ ಈ‌ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಈ ರಸವನ್ನು ಮಕ್ಕಳಿಗೆ ನಿಯಮಿತವಾಗಿ ನೀಡಬಹುದು. ಇದರಿಂದಾಗಿ ಅವರ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ ಮತ್ತು ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.

ಇದನ್ನೂ ಓದಿ-ಹಲವು ಮಾರಣಾಂತಿಕ ಕಾಯಿಲೆಗಳಿಗೆ ಈ ಹಣ್ಣುಗಳ ಎಲೆಗಳು ವರದಾನವಿದ್ದಂತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News