ಬೆಂಗಳೂರು: ‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್!
‘ಕಬ್ಜ’ ಚಿತ್ರದಿಂದ ಮೊದಲ ಬಾರಿ ಶ್ರಿಯಾ ಶರಣ್ ಅವರ ಫಸ್ಟ್ ಲುಕ್ ಬಿಡುಗಡೆ ಆದಾಗ ಎಲ್ಲರ ಗಮನ ಸೆಳೆದಿದ್ದೇ ಅವರ ಕಾಸ್ಟ್ಯೂಮ್. ಸಿಂಹಾಸನದ ಮೇಲೆ ಮಹಾರಾಣಿಯಂತೆ ಕುಳಿತ ಅವರನ್ನು ನೋಡೋಕೆ ಎರಡು ಕಣ್ಣು ಸಾಲದಾಯಿತು. ಇದು ರೆಟ್ರೋ ಕಾಲದ ರಾಯಲ್ ಫ್ಯಾಮಿಲಿಯ ಹೆಣ್ಣು ಮಗಳ ಪಾತ್ರವೆಂದು ಜನರಿಗೆ ಗೊತ್ತಾಯ್ತು. ಅಂತಹ ರಾಯಲ್ ಲುಕ್ನ ಕಲ್ಪನೆ ಆರ್.ಚಂದ್ರು ಅವರದ್ದು. ಆ ಕಲ್ಪನೆಗೆ ಜೀವ ಬರುವಂತೆ ಶ್ರಮಿಸಿರುವುದು ಕಾಸ್ಟ್ಯೂಮ್ ಡಿಸೈನರ್ ಸಿತಾರಾ.
ಈಗಾಗಲೇ ಗೊತ್ತಿರುವಂತೆ ಇದು ರೆಟ್ರೋ ಕಾಲದ ಕಥೆ ಇರುವ ಸಿನಿಮಾ. ಎಲ್ಲಾ ಪಾತ್ರಗಳು ಕೂಡ ಹಾಗೆಯೇ ಕಾಣಬೇಕು. ಶ್ರಿಯಾ ಶರಣ್ ಅವರ ಲುಕ್ಗಾಗಿ ಕಾಸ್ಟ್ಯೂಮ್ ಡಿಸೈನರ್ ಸಿತಾರಾ ಅವರು ಸಾಕಷ್ಟು ರಿಸರ್ಚ್ ನಡೆಸಿದ್ದರು. ತುಂಬಾ ಕಾಳಜಿ ವಹಿಸಿ, ಹಲವಾರು ದಿನ ಸಮಯ ತೆಗೆದುಕೊಂಡು ಆ ಪಾತ್ರಕ್ಕೆ ಬೇಕಾದ ಎಲ್ಲಾ ಕಾಸ್ಟ್ಯೂಮ್ ರೆಡಿ ಮಾಡಿದ್ದರು. ಕಾಂಚಿವರಂ, ಮೈಸೂರು ಸಿಲ್ಕ್, ಬನಾರಸಿ ಸೀರೆಗಳನ್ನು ತೆಗೆದುಕೊಂಡು ಅವುಗಳಿಗೆ ಹೊಸ ರೂಪ ನೀಡಿದ್ದರು. ಇಡೀ ದೇಶದಲ್ಲಿ ಸಿಗುವ ದಿ ಬೆಸ್ಟ್ ಕ್ವಾಲಿಟಿಯ ಬಟ್ಟೆಗಳಿಂದ ಶ್ರಿಯಾರ ಕಾಸ್ಟ್ಯೂಮ್ ಡಿಸೈನ್ ಮಾಡಿದ್ರು. ಪ್ರತಿ ಲೆಹಂಗಾಗೆ 7-8 ದಿನಗಳ ಕಾಲ ಸಮಯ ತೆಗೆದುಕೊಂಡು ಕಸೂತಿ ಹಾಕಲಾಯಿತು.
ಇದನ್ನೂ ಓದಿ: Kabzaa Collection: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕಬ್ಜʼ
ಇನ್ನು ಶ್ರಿಯಾ ಶರಣ್ ಧರಿಸಿದ ಆಭರಣಗಳಂತೂ ಸಿಕ್ಕಾಪಟ್ಟೆ ದುಬಾರಿ ಮತ್ತು ಅಪರೂಪದ್ದು. ಪ್ಯೂರ್ ಗೋಲ್ಡ್ ಮತ್ತು ಡೈಮಂಡ್ ಆಭರಣಗಳನ್ನ ಧರಿಸಿ ಶ್ರಿಯಾ ಆ್ಯಕ್ಟ್ ಮಾಡಿದ್ದಾರೆ. 2 ಪ್ರತಿಷ್ಠಿತ ಜ್ಯೂವೆಲ್ಲರಿ ಬ್ರ್ಯಾಂಡ್ಗಳ ಜೊತೆ ಕೈಜೋಡಿಸಿ ಅತ್ಯಾಕರ್ಷಕವಾದ ಆಭರಣಗಳನ್ನು ಸೆಲೆಕ್ಟ್ ಮಾಡಲಾಯಿತು. ಇದನ್ನೆಲ್ಲ ಧರಿಸಿದ ಶ್ರಿಯಾ ಅವರು ಕ್ಯಾಮೆರಾ ಮುಂದೆ ಬಂದು ನಿಂತಾಗ ಥೇಟ್ ಮಹಾರಾಣಿಯಂತೆ ಕಾಣಿಸಿದ್ದರು.
‘ನಮಾಮಿ ನಮಾಮಿ’ ಹಾಡು ರಿಲೀಸ್ ಆದಾಗ ದೇವಲೋಕದ ಅಪ್ಸರೆಯೇ ಧರೆಗಿಳಿದು ಬಂದು ಕುಣಿಯುತ್ತಿರುವಂತೆ ಅನಿಸ್ತು. ಶ್ರಿಯಾ ಶರಣ್ ಅವರು ಆ ರೀತಿ ಕಾಣೋಕೆ ಕಾರಣ ಆಗಿದ್ದೇ ಕಾಸ್ಟ್ಯೂಮ್ ಡಿಸೈನ್. ಹಾಡು ನೋಡಿದ ಹೆಣ್ಮಕ್ಕಳೆಲ್ಲ ಲೆಹಂಗಾ ಮತ್ತು ಆಭರಣದ ವೈಭವ ಕಂಡು ವಾವ್ಹ್ ಎಂದಿದ್ದಾರೆ. ಆ ವಿಚಾರದಲ್ಲಿ ನಿರ್ದೇಶಕ ಆರ್.ಚಂದ್ರು ಅವರ ವಿಷನ್ ಚೆನ್ನಾಗಿ ಕೆಲಸ ಮಾಡಿದೆ.
‘ಕಬ್ಜ’ ಚಿತ್ರದಲ್ಲಿ ಯಾವ ಪಾತ್ರ ಹೇಗೆ ಕಾಣಬೇಕು ಎಂಬುದರ ಸ್ಪಷ್ಟ ಕಲ್ಪನೆ ಆರ್.ಚಂದ್ರು ಅವರಿಗಿತ್ತು. ಆ ಕಲ್ಪನೆಗೆ ಅನುಗುಣವಾಗಿ ಇಡೀ ತಂಡದಿಂದ ಕೆಲಸ ಮಾಡಿಸುವ ಚಾಕಚಕ್ಯತೆ ಕೂಡ ಅವರಿಗಿದೆ. ಆ ಕಾರಣದಿಂದಲೇ ಕಾಸ್ಟ್ಯೂಮ್ ಡಿಸೈನ್ ಟೀಮ್ನವರು ಇಷ್ಟು ಅದ್ಭುತವಾಗಿ ರಿಸಲ್ಟ್ ನೀಡಿದ್ರು. ಇಡೀ ಸಿನಿಮಾದಲ್ಲಿ ಶ್ರಿಯಾ ಶರಣ್ ಅವರು ಈ ರೀತಿಯ ಹಲವು ಕಾಸ್ಟ್ಯೂಮ್ ಧರಿಸಿದ್ದಾರೆ. ದೊಡ್ಡ ಪರದೆಯಲ್ಲಿ ಅವರನ್ನು ನೋಡೋದೇ ಒಂದು ಸಂಭ್ರಮ. ಇನ್ನು ನವಾಮಿ ಹಾಡು ಹೆಚ್ಚಾಗಿ ಮಹಿಳಾ ಪ್ರೇಕ್ಷಕರನ್ನು ಸೆಳೆದಿದ್ದು, ಮೊದಲ ದಿನವೇ ಮಹಿಳಾ ಪ್ರೇಕ್ಷಕರು ಚಿತ್ರಮಂದಿರದತ್ತ ಬರ್ತಿದ್ದಾರೆ ಅಂದ್ರೆ ಅದರಲ್ಲಿ ನವಾಮಿ ಹಾಡಿನ ಕೊಡುಗೆ ಕೂಡ ಸಾಕಷ್ಟಿದೆ...
ಇದನ್ನೂ ಓದಿ: Kabzaa : 50 ದೇಶ, 5 ಭಾಷೆ, 4000 ಸ್ಕ್ರೀನ್! ವಿಶ್ವದ ಮೂಲೆ ಮೂಲೆಯಲ್ಲೂ ಕಬ್ಜ
ಥಿಯೇಟರ್‍ನಲ್ಲಿ ಕೂತ ಪ್ರೇಕ್ಷಕ ತಾನು 2023ರಲ್ಲಿ ಇದೀನಿ ಅನ್ನೋದನ್ನೇ ಮರೆತುಬಿಡ್ತಾನೆ. 1945ರ ನಂತರದ ಲೋಕ ಕಣ್ಣೆದುರು ಬರುತ್ತೆ. ಆ ರೀತಿ ಫೀಲ್ ನೀಡೋಕೆ ಕಾಸ್ಟ್ಯೂಮ್ಗಳು ಸಹ ಮುಖ್ಯ ಕಾರಣ ಆಗ್ತಾವೆ. ‘ರೆಟ್ರೋ ಸಿನಿಮಾ ಮಾಡಿದ್ರೆ ಹಿಂಗ್ ಮಾಡ್ಬೇಕಪ್ಪಾ’ ಅನ್ನೋ ಹಾಗೆ ‘ಕಬ್ಜ’ ಚಿತ್ರ ಒಂದು ಸ್ಟ್ಯಾಂಡರ್ಡ್ ಸೆಟ್ ಮಾಡಿದೆ ಅಂದ್ರೆ ಅದು ಅತಿಶಯೋಕ್ತಿ ಅಲ್ವೇ ಅಲ್ಲ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.