ಮನೆಯಲ್ಲಿರುವ ಸ್ಮಾರ್ಟ್‌ ಟಿವಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ? ತಕ್ಷಣ ಈ ಕೆಲಸ ಮಾಡಿ

Smart TV Spying: ನಿಮ್ಮ ಮನೆಯಲ್ಲಿರುವ ಮನರಂಜನಾ ಸಾಧನ ಟಿವಿ ಕೂಡ ನಿಮ್ಮ ಮೇಲೆ ಗೂಢಾಚಾರ ನಡೆಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ...? ಹೌದು, ನಿಮ್ಮ ಮನೆಯಲ್ಲಿರುವ ಸ್ಮಾರ್ಟ್ ಟಿವಿ ಸಹ ನಿಮ್ಮ ಮೇಲೆ ಬೇಹುಗಾರಿಕೆ ನಡೆಸಬಹುದು. ಇದನ್ನು ತಪ್ಪಿಸಲು ಏನು ಮಾಡಬೇಕು ಎಂದು ತಿಳಿಯಲು ಈ ಲೇಖನವನ್ನು ತಪ್ಪದೇ ಓದಿ. 

Written by - Yashaswini V | Last Updated : Mar 21, 2023, 12:01 PM IST
  • ಸ್ಮಾರ್ಟ್ ಟಿವಿಗಳು ACR - ಸ್ವಯಂಚಾಲಿತ ವಿಷಯ ಗುರುತಿಸುವಿಕೆ ವೈಶಿಷ್ಟ್ಯವನ್ನು ಹೊಂದಿವೆ.
  • ಸ್ಮಾರ್ಟ್ ಟಿವಿಯಲ್ಲಿ ಟ್ರ್ಯಾಕಿಂಗ್ ಎಂಬ ವೈಶಿಷ್ಟ್ಯವೂ ಇರಲಿದೆ.
  • ಇದು ಡೇಟಾ ಸಂಗ್ರಹಣೆಯನ್ನು ಸಹ ಹೊಂದಿರಲಿದೆ.
ಮನೆಯಲ್ಲಿರುವ ಸ್ಮಾರ್ಟ್‌ ಟಿವಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ? ತಕ್ಷಣ ಈ ಕೆಲಸ ಮಾಡಿ  title=
Smart TV Spying

How To Stop Smart TV Spying: ಪ್ರಸ್ತುತ, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿವಿಗಳೇ ಜನರ ಪ್ರಪಂಚ. ಆದರೆ, ತಂತ್ರಜ್ಞಾನ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ನಮ್ಮ ಮನೆಯ ಗೋಡೆಯ ಮೇಲಿರುವ ಸ್ಮಾರ್ಟ್ ಟಿವಿ. ಮನೆಯಲ್ಲಿರುವ ಮನರಂಜನಾ ಸಾಧನವಾದ ಟಿವಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? 

ಹಲವು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಇಂಟರ್ನೆಟ್‌ಗೆ ಕನೆಕ್ಟ್ ಮಾಡುವುದರಿಂದ ಹಿಡಿದು OTT ಆಪ್‌ಗಳವರೆಗೆ ಎಲ್ಲವೂ ಲಭ್ಯವಿರುವ ಸ್ಮಾರ್ಟ್ ಟಿವಿಯಲ್ಲಿ ಮನರಂಜನೆಗೆ ಕೊರತೆ ಎಂಬುದೇ ಇರುವುದಿಲ್ಲ. ಆದರೆ, ಈ ಮೋಜಿನ ಪೆಟ್ಟಿಗೆ ನಿಮ್ಮ ಮೇಲೆ ಹದ್ದಿನ ಕಣ್ಣಿಟ್ಟಿರಬಹುದು. 

ಇದನ್ನೂ ಓದಿ- ಫುಲ್ ಚಾರ್ಜ್ನಲ್ಲಿ 7 ದಿನ ಬಾಳಿಕೆ ಬರುತ್ತಂತೆ ಈ Waterproof Smartphone

ವಾಸ್ತವವಾಗಿ, ಸ್ಮಾರ್ಟ್ ಟಿವಿಗಳು ACR - ಸ್ವಯಂಚಾಲಿತ ವಿಷಯ ಗುರುತಿಸುವಿಕೆ ವೈಶಿಷ್ಟ್ಯವನ್ನು ಹೊಂದಿವೆ.  ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊಂದಿರುತ್ತದೆ. ಸ್ಮಾರ್ಟ್ ಟಿವಿಯಲ್ಲಿ ಟ್ರ್ಯಾಕಿಂಗ್ ಎಂಬ ವೈಶಿಷ್ಟ್ಯವೂ ಇರಲಿದೆ. ಇದು ಡೇಟಾ ಸಂಗ್ರಹಣೆಯನ್ನು ಸಹ ಹೊಂದಿರಲಿದೆ. ನೀವು YouTube ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗಲೆಲ್ಲಾ ಕಂಪನಿಯು ಸಂಪೂರ್ಣ ಡೇಟಾವನ್ನು ಕಲೆಹಾಕುತ್ತದೆ. ಇದರ ಆಧಾರದ ಮೇಲೆಯೇ ಜಾಹೀರಾತುಗಳನ್ನು ನೀಡಲಾಗುತ್ತದೆ. ಅಂದರೆ ನೀವು ವೀಕ್ಷಿಸುವ ಎಲ್ಲಾ ವೀಡಿಯೊಗಳನ್ನು ಇದು ಮೇಲ್ವಿಚಾರಣೆ ಮಾಡುತ್ತದೆ. ಮಾರ್ಕೆಟಿಂಗ್ ಕಂಪನಿಗಳು ಇವುಗಳ ಆಧಾರದ ಮೇಲೆಯೇ ಜಾಹೀರಾತುಗಳನ್ನು ನೀಡುತ್ತವೆ.  

ಇದನ್ನೂ ಓದಿ- Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ

ಸ್ಮಾರ್ಟ್ ಟಿವಿ ನಿಮ್ಮನ್ನು ಮೇಲ್ವಿಚಾರಣೆ ಮಾಡುವುದನ್ನು ತಪ್ಪಿಸಲು ಈ ಒಂದು  ಸೆಟ್ಟಿಂಗ್ ಅನ್ನು ಆಫ್ ಮಾಡಿ:
ಸ್ಮಾರ್ಟ್ ಟಿವಿ ನಿಮ್ಮನ್ನು ಮೇಲ್ವಿಚಾರಣೆ ಮಾಡುವುದನ್ನು ತಪ್ಪಿಸಲು ಟಿವಿಯಲ್ಲಿ ಒಂದು ಸೆಟ್ಟಿಂಗ್ ಆಫ್ ಮಾಡಿದರೆ ಅಷ್ಟೇ ಸಾಕು. ಪ್ರತಿ ಟಿವಿ ವಿಭಿನ್ನ ಸೆಟ್ಟಿಂಗ್ಗಳನ್ನು ಹೊಂದಿರುತ್ತದೆ. ನೀವು ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಯನ್ನು ಹೊಂದಿದ್ದರೆ, ಇದರಲ್ಲಿ ಸ್ಮಾರ್ಟ್ ಹಬ್ ಪಾಲಿಸಿಗೆ ಹೋಗಿ ಅಲ್ಲಿ ನೀವು ಸಿಂಕ್ ಪ್ಲಸ್ ಮತ್ತು ಮಾರ್ಕೆಟಿಂಗ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News