Women’s World Championship 2023: ಈ ದಿನ ಭಾರತದ ಒಬ್ಬರಲ್ಲ ಇಬ್ಬರು ಹೆಣ್ಣು ಮಕ್ಕಳು ಇತಿಹಾಸ ಸೃಷ್ಟಿಸಿದ್ದಾರೆ. ಮಹಿಳಾ ವಿಶ್ವ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಒಬ್ಬರಲ್ಲ ಇಬ್ಬರು ಹೆಣ್ಣು ಮಕ್ಕಳು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ, ಭಾರತದ ಹೆಮ್ಮೆಯ ಕುವರಿ ನೀತು ಘಂಘಾಸ್ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಸ್ವೀಟಿ ಬುರಾ 81 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ನೀತು ಘಂಘಾಸ್ ಮಂಗೋಲಿಯಾದ ಬಾಕ್ಸರ್ ಅನ್ನು ಸೋಲಿಸುವ ಮೂಲಕ 5-0 ಮುನ್ನಡೆ ಸಾಧಿಸಿದ್ದರು. ಈ ಮೂಲಕ ಚಿನ್ನದ ಪದಕ ಗೆದ್ದ ನೀತು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನ ಫೈನಲ್‌ನಲ್ಲಿ ನೀತು 5-0 ಅಂತರದಲ್ಲಿ ಮಂಗೋಲಿಯಾದ ಲುಟ್ಸೈಖಾಲಿ ಅಲ್ಟಾಂಟ್ಸೆಗ್ ಅವರನ್ನು ಸೋಲಿಸಿದರು. ಈ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎನ್ನಬಹುದು. ನೀತು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 48 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ:
ನೀತು ಬಾಕ್ಸಿಂಗ್’ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಕನಿಷ್ಠ ತೂಕ ವಿಭಾಗದಲ್ಲಿ ಅಲ್ಟಾನ್ಸೆಟ್ಸೆಗ್ ಅನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದರು. ನೀತು ತನ್ನ ಆರಂಭಿಕ ಆಟದಲ್ಲಿ ತುಂಬಾ ಆಕ್ರಮಣಕಾರಿಯಾಗಿದ್ದರು. ಇದಾದ ಬಳಿಕ ಉತ್ತಮವಾಗಿ ಆಡಿದ ಅವರು ಫೈನಲ್ ಪಂದ್ಯವನ್ನು ಗೆದ್ದುಕೊಂಡರು.
ಇದನ್ನೂ ಓದಿ: IPL 2023: “ಮಾರಾಟ ಆಗದಿರುವುದೇ ಉತ್ತಮ!”: ವಿರಾಟ್ ಸಹ ಆಟಗಾರನ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ!
ಇತಿಹಾಸ ಸೃಷ್ಟಿಸಿದ ಸ್ವೀಟಿ:
ಭಾರತಾಂಬೆಯ ಮತ್ತೋರ್ವ ಹೆಮ್ಮೆಯ ಪುತ್ರಿ ಸ್ವೀಟಿ ಬುರಾ ಬಾಕ್ಸಿಂಗ್’ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 81 ಕೆಜಿ ವಿಭಾಗದಲ್ಲಿ ಚೀನಾದ ಬಾಕ್ಸರ್‌ನನ್ನು ಸೋಲಿಸಿ ಸ್ವೀಟಿ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಸ್ವೀಟಿ 2014ರ ಎಐಬಿಎ ಮಹಿಳಾ ವಿಶ್ವಕಪ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನಲ್ಲಿ ಲೈಟ್ ಹೆವಿವೇಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.