ಬೆಳಗಾವಿ: ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ನಲ್ಲಿ ಸುಮಾರು ಮುಂಜಾನೆ 3.30 ರ ಸುಮಾರಿಗೆ ಎಫ್ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ವೇಳೆ ದಾಖಲೆರಹಿತ ಎರಡು ಕೋಟಿ ನಗದು ಪತ್ತೆಯಾಗಿದೆ.
ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ
ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸಲಾಗುತ್ತಿದ್ದ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ಈ ಪ್ರಕರಣ ಕಂಡುಬಂದಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹೆದ್ದಾರಿ ಚೆಕ್ ಪೊಸ್ಟ್ ನಲ್ಲಿ ಪೊಲೀಸರು ವಾಹನ ತಡೆದು ವಿಚಾರಣೆ ನಡೆಸುವ ವೇಳೆ ಬಸ್ಸಿನ ಮೇಲೆ ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರಿಂದ ಅಧಿಕಾರ ದುರುಪಯೋಗ: ಸಿದ್ದರಾಮಯ್ಯ
ಪರಿಶೀಲನೆ ವೇಳೆ ಬಸ್ಸು ಒಳಗೆ ದಾಖಲೆರಹಿತ ಎರಡು ಕೋಟಿ ನಗದು ಚೀಲ ಪತ್ತೆಯಾಗಿದೆ. ಈ ವಿಚಾರಣೆ ಸಂಬಂಧ ಕಾರ್ಯಚಾರಣೆ ನಡೆಸಿದಾಗ ಬಸ್ಸು ಚಾಲಕ ಈ ಹಣದ ಬಗ್ಗೆ ದಾಖಲಾತಿ ಹಾಗೂ ಮಾಹಿತಿ ನೀಡಲು ಪೇಚಾಡಿದ್ದಾನೆ. ಈ ಹಿನ್ನೆಲೆ ಬಸ್ಸು ಚಾಲಕನನ್ನು ಬಂಧಿಸಿ ಘಟನೆ ಸಂಬಂಧಿಸಿದ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸಲು ಬಿಜೆಪಿಯ ಕಿರುಕುಳವೇ ಕಾರಣ: ಕಾಂಗ್ರೆಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.