ಗ್ರಾಮೀಣಾಭಿವೃದ್ಧಿಗೆ ಬಜೆಟ್'ನಲ್ಲಿ ಹೆಚ್ಚಿನ ಅನುದಾನ ಸಾಧ್ಯತೆ: ಬದಲಾಗಲಿದೆಯೇ 'ಗ್ರಾಮೀಣ ಭಾರತ'ದ ಚಿತ್ರಣ

ಗ್ರಾಮೀಣ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಹಂಚಿಕೆಯಾದರೆ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ. 

Last Updated : Feb 1, 2019, 10:05 AM IST
ಗ್ರಾಮೀಣಾಭಿವೃದ್ಧಿಗೆ ಬಜೆಟ್'ನಲ್ಲಿ ಹೆಚ್ಚಿನ ಅನುದಾನ ಸಾಧ್ಯತೆ: ಬದಲಾಗಲಿದೆಯೇ 'ಗ್ರಾಮೀಣ ಭಾರತ'ದ ಚಿತ್ರಣ  title=

ನವದೆಹಲಿ: ಗ್ರಾಮೀಣ ವಲಯಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ದೊಡ್ಡ ಘೋಷಣೆ ಪ್ರಕಟಿಸಬಹುದು ಎನ್ನಲಾಗಿದೆ. ಇದಕ್ಕಾಗಿ ಗ್ರಾಮೀಣ ಕಲ್ಯಾಣ ಯೋಜನೆಗಳ ಅನುದಾನ ಹೆಚ್ಚಿಸಬಹುದು. ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 1.3 ಲಕ್ಷ ಕೋಟಿ ರೂ. ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ ಇದು 1.12 ಲಕ್ಷ ಕೋಟಿ ರೂ. ಒದಗಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಜನರು ಹಳ್ಳಿಗಳಲ್ಲಿದ್ದಾರೆ. ಲೋಕಸಭಾ ಚುನಾವಣೆ ಕೂಡಾ ಸಮೀಪಿಸುತ್ತಿರುವುದರಿಂದ ಸರ್ಕಾರ ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸಲು ಪ್ರಯತ್ನಿಸಬಹುದು.

ಸುದ್ದಿ ಸಂಸ್ಥೆಯಾದ ರಾಯಿಟರ್ಸ್ ಪ್ರಕಾರ, ಪಿಯೂಶ್ ಗೋಯಲ್ ಗ್ರಾಮೀಣ ಕಲ್ಯಾಣ ಯೋಜನೆಗಾಗಿ ಹಣವನ್ನು ಸಂಗ್ರಹಿಸಬಹುದು. ಏಜೆನ್ಸಿ ಪ್ರಕಾರ, ಗ್ರಾಮೀಣ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಹಂಚಿಕೆಯಾದರೆ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಈ ಯೋಜನೆಯಡಿ 70 ಮಿಲಿಯನ್ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪರಿಗಣಿಸಿದೆ. ಉದ್ಯೋಗ ಖಾತರಿ ಕಾರ್ಯಕ್ರಮಕ್ಕೆ(MNREGA)  60 ಸಾವಿರ ಕೋಟಿ ರೂಪಾಯಿಗಳಿಗೆ ಘೋಷಿಸಬಹುದು.

ಇದಲ್ಲದೆ, ರೈತರಿಗೆ ಪರಿಹಾರ ಪ್ಯಾಕೇಜ್ ಅನ್ನು ಬಜೆಟ್ನಲ್ಲಿ ಘೋಷಿಸಬಹುದು. ಇದರ ಅಡಿಯಲ್ಲಿ, ಪ್ರತಿಯೊಬ್ಬ ರೈತನ ಖಾತೆಗೆ ಹಣವನ್ನು ನೀಡಲಾಗುತ್ತದೆ. ರೈತರು ಪ್ರತಿ ವರ್ಷ 15 ಸಾವಿರ ರೂಪಾಯಿಗಳನ್ನು ನೀಡಲು ನೀತಿ ಆಯೋಗ ಶಿಫಾರಸು ಮಾಡಿದೆ. ರೈತರು ಎಷ್ಟು ಭೂಮಿ ಹೊಂದಿದ್ದಾರೆ ಅದರ ಪ್ರಮಾಣದ ಆಧಾರದ ಮೇಲೆ ಅವರು ಬೆಂಬಲ ಹಣ ಅವಲಂಬಿಸಿರುತ್ತದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಪ್ರಸ್ತುತ, ದೇಶದ ಸುಮಾರು 30 ಮಿಲಿಯನ್ ರೈತರು ಕಿಸಾನ್ ಕ್ರೆಡಿಟ್ ಕಾರ್ಡನ್ನು ಹೊಂದಿದ್ದಾರೆ.

ರೈತರಿಗೆ ಈ 5 ದೊಡ್ಡ ಪ್ರಕಟಣೆ ಸಾಧ್ಯತೆ:

1. 8,000-10,000 ರೂ. ವಾರ್ಷಿಕ ಕೊಡುಗೆ ಸಾಧ್ಯತೆ.
2. 3 ಲಕ್ಷ ಬಡ್ಡಿ ರಹಿತ ಸಾಲ ನೀಡುವ ಸಾಧ್ಯತೆ.
3. ಅಡಮಾನವಿಲ್ಲದೆ 2 ರಿಂದ 3 ಲಕ್ಷದವರೆಗೆ ಸಾಲ ನೀಡುವ ಸಾಧ್ಯತೆ.
4. ಬೆಳೆ ವಿಮೆ ಯೋಜನೆಗೆ 15 ಸಾವಿರ ಕೋಟಿ ರೂ. ಅನುದಾನ ಸಾಧ್ಯತೆ
5. ಬೆಳೆ ವಿಮೆಯ ಪ್ರೀಮಿಯಂ ಅನ್ನು ವಜಾಗೊಳಿಸಬಹುದು.
 

Trending News