ಮಧ್ಯಂತರ ಬಜೆಟ್ 2019: ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸಿಕ್ಕಿದ್ದೇನು?

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಈಗ ಬಿಡುಗಡೆಯಾಗಿದ್ದು ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಬಂಪರ್ ಘೋಷಣೆ ಹೊರಡಿಸಿದೆ.

Last Updated : Feb 1, 2019, 02:50 PM IST
 ಮಧ್ಯಂತರ ಬಜೆಟ್ 2019: ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸಿಕ್ಕಿದ್ದೇನು? title=

ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಈಗ ಬಿಡುಗಡೆಯಾಗಿದ್ದು ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಬಂಪರ್ ಘೋಷಣೆ ಹೊರಡಿಸಿದೆ.

ಹಣಕಾಸು ಸಚಿವ ಪಿಯುಶ್ ಗೋಯಲ್ ತಮ್ಮ ಬಜೆಟ್ ಭಾಷಣದಲ್ಲಿ ಬಡ ಮತ್ತು ಹಿಂದುಳಿದ ಸಮುದಾಯಗಳಿಗೆ ನೀಡುತ್ತಿರುವ ಹಲವು ಕೊಡುಗೆಗಳನ್ನು ವಿವರಿಸಿದರು.ಅದರಲ್ಲಿ ಪ್ರಮುಖವಾಗಿ ಎಸ್ಸಿ ಎಸ್ಟಿ,ಹಾಗೂ ಹಿಂದುಳಿದ ವರ್ಗಗಳಿಗೆ ಇರುವ ಪ್ರಸ್ತುತ ಮೀಸಲಾತಿಯನ್ನು ಹೊರತುಪಡಿಸಿ ಶೇ 10 ರಷ್ಟು ಹೆಚ್ಚಿನ ಮೀಸಲಾತಿಯನ್ನು ಬಡವರಿಗೆ ನೀಡುವ ಕ್ರಮವನ್ನು ಕೈಗೊಂಡಿದೆ.ಆ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಸೇವೆಗಳಲ್ಲಿ ಶೇ 25 ರಷ್ಟು ಸೀಟುಗಳು ಲಭಿಸಲಿವೆ.ಆ ಮೂಲಕ ಯಾವುದೇ ಸಮುದಾಯಗಳಿಗೆ ಸೀಟ್ ಗಳ ಕೊರತೆಯುಂಟಾಗುವುದಿಲ್ಲ ಎಂದು ಅವರು ವಿವರಿಸಿದರು.

ಈವರೆಗೂ ಸರ್ಕಾರ ಬಡ ಮತ್ತು ಮಧ್ಯಮ ವರ್ಗಗಳ ಬಡವರಿಗಾಗಿ ಆಹಾರ ಧಾನ್ಯಗಳನ್ನು ಕಡಿಮೆ ದರದಲ್ಲಿ ನೀಡುವ ಯೋಜನೆಯನ್ನು ಕೈಗೊಂಡಿದೆ.ಇದಕ್ಕಾಗಿಯೇ 1 ಲಕ್ಷ 70 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ.ಈಗ ನರೇಗಾ ಯೋಜನೆಗಾಗಿ ಈ ಸಾಲಿನ ಬಜೆಟ್ ನಲ್ಲಿ 60 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ.

ಸೌಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಉಚಿತ ವಿದ್ಯುತ್ ನ್ನು ನೀಡಲಾಗಿದೆ.2019 ರ ಮಾರ್ಚ್ ತಿಂಗಳ ವೇಳೆಗೆ ಮನೆಗಳು ಕೂಡ ವಿದ್ಯುತ್ ನ್ನು ಪಡೆಯಲಿವೆ.ಇದಕ್ಕಾಗಿ ಈಗಾಗಲೇ ಖಾಸಗಿ ಸಹಯೋಗದೊಂದಿಗೆ 143 ಕೋಟಿ ಎಲ್ಇಡಿ ವಿದ್ಯುತ್ ಬಲ್ಬ್ ಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಮಾರು ಐವತ್ತು ಸಾವಿರ ಕೋಟಿ ರೂ ಮೌಲ್ಯದ ವಿದ್ಯುತ್ ಉಳಿತಾಯವಾಗಲಿದೆ.

ಆಯುಷ್ಮಾನ್ ಯೋಜನೆಯ ಮೂಲಕ ಇದುವರೆಗೆ 10 ಲಕ್ಷ ರೋಗಿಗಳು ಇದರ ಸೌಲಭ್ಯವನ್ನು ಪಡೆದಿದ್ದು, ಇದರ ಒಟ್ಟು ವೈದಕೀಯ ವೆಚ್ಚ್ 3 ಸಾವಿರ ಕೋಟಿ ಎಂದು ಹೇಳಲಾಗಿದೆ.ಇದುವರೆಗೆ 2014 ರಿಂದ ಒಟ್ಟು 14 ಏಮ್ಸ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ.ಈಗ 22 ನೇ ನೂತನ ಏಮ್ಸ್ ಆಸ್ಪತ್ರೆಯನ್ನು ಹರ್ಯಾಣದಲ್ಲಿ ಪ್ರಾರಂಭಿಸಲಾಗುವುದು.

ದೇಶದ 115 ಅತಿ ಹಿಂದುಳಿದ ಜಿಲ್ಲೆಗಳನ್ನು ಎಲ್ಲ ರೀತಿಯಿಂದಲೂ ಅಭಿವೃದ್ದಿ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.ಅದರಲ್ಲಿ ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಕೌಶಲ್ಯ ಅಭಿವೃದ್ದಿ,ಹಣಕಾಸು ಒಳಗೊಳ್ಳುವಿಕೆ ಮುಂತಾದ ಅಂಶಗಳು ಇದರಲ್ಲಿ ಒಳಗೊಳ್ಳಲಿವೆ.

Trending News