ನವದೆಹಲಿ: ಹಣದುಬ್ಬರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಹೊರಬರುತ್ತಿದೆ. ಸತತ 2ನೇ ತಿಂಗಳಿನಿಂದ ಚಿಲ್ಲರೆ ಹಣದುಬ್ಬರ ದರದಲ್ಲಿ ಇಳಿಕೆಯಾಗಿದೆ. ಮಾರ್ಚ್ 2023ರಲ್ಲಿ ಹಣದುಬ್ಬರ ದರವು ಶೇ.5.66ಕ್ಕೆ ಕುಸಿತ ಕಂಡಿದೆ. ಫೆಬ್ರವರಿ ತಿಂಗಳಲ್ಲಿ ಈ ಅಂಕಿ ಅಂಶವು ಶೇ.6.44ರಷ್ಟಿತ್ತು. ಅದೇ ರೀತಿ ಜನವರಿ ತಿಂಗಳಲ್ಲಿ ಈ ಅಂಕಿ ಅಂಶವು ಶೇ.6.52ರಷ್ಟಿತ್ತು.
ಕಳೆದ ಆರ್ಥಿಕ ವರ್ಷದಲ್ಲಿ ಪರಿಸ್ಥಿತಿ ಹೇಗಿತ್ತು?
ಕಳೆದ ಹಣಕಾಸು ವರ್ಷದ ಬಗ್ಗೆ ಹೇಳುವುದಾದರೆ, ಮಾರ್ಚ್ 2022ರಲ್ಲಿ ಚಿಲ್ಲರೆ ಹಣದುಬ್ಬರವು ಶೇ.6.95ರ ಮಟ್ಟದಲ್ಲಿತ್ತು. ಈ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ದರದಲ್ಲೂ ಇಳಿಕೆ ಕಂಡು ಬರುತ್ತಿದೆ. ಈ ಸಮಯದಲ್ಲಿ ಆಹಾರ ಹಣದುಬ್ಬರ ದರವು ಶೇ.4.79ಕ್ಕೆ ಇಳಿದಿದೆ, ಇದು ಫೆಬ್ರವರಿ 2023ರಲ್ಲಿ ಶೇ.5.95ರಷ್ಟಿತ್ತು.
ಇದನ್ನೂ ಓದಿ: Good News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಸರ್ಕಾರ ಕೈಗೊಂಡಿದೆ ಈ ನಿರ್ಧಾರ!
ಹಾಲಿನ ಹಣದುಬ್ಬರ ದರವೂ ಕುಸಿತ!
ಮಾರ್ಚ್ ತಿಂಗಳಲ್ಲಿ ಧಾನ್ಯಗಳು ಮತ್ತು ಅದರ ಎಲ್ಲಾ ಸಂಬಂಧಿತ ಉತ್ಪನ್ನಗಳ ಹಣದುಬ್ಬರ ದರವು ಶೇ.15.27ರಷ್ಟಿದೆ. ಹಾಲು ಮತ್ತು ಡೈರಿಗೆ ಸಂಬಂಧಿಸಿದ ಉತ್ಪನ್ನಗಳ ಬಗ್ಗೆ ಮಾತನಾಡುವುದಾದರೆ, ಫೆಬ್ರವರಿಗೆ ಹೋಲಿಸಿದರೆ ಅವುಗಳ ಹಣದುಬ್ಬರ ದರ ಕಡಿಮೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಹಾಲಿನ ಹಣದುಬ್ಬರ ದರವು ಶೇ.9.65ರಷ್ಟಿತ್ತು ಮತ್ತು ಮಾರ್ಚ್ ತಿಂಗಳಲ್ಲಿ ಅದು 9.31ಕ್ಕೆ ಕುಸಿತ ಕಂಡಿದೆ.
ತರಕಾರಿ ಮತ್ತು ಬೇಳೆಕಾಳುಗಳ ಸ್ಥಿತಿ ಹೇಗಿತ್ತು?
ಸಾಂಬಾರ ಪದಾರ್ಥಗಳ ಹಣದುಬ್ಬರ ದರ ಶೇ.18.21, ಬೇಳೆಕಾಳುಗಳ ಹಣದುಬ್ಬರ ಶೇ.4.33 ಮತ್ತು ಹಣ್ಣುಗಳ ಹಣದುಬ್ಬರ ಶೇ.7.55ರಷ್ಟು ಆಗಿದೆ. ಮಾಹಿತಿಯ ಪ್ರಕಾರ ತರಕಾರಿಗಳ ಹಣದುಬ್ಬರ ದರ (-8.51%), ಮಾಂಸ ಮತ್ತು ಮೀನಿನ ಹಣದುಬ್ಬರ ದರ (-1.42%), ತೈಲಗಳು ಮತ್ತು ಕೊಬ್ಬಿನ ಹಣದುಬ್ಬರ ದರ (-7.86%).
ಇದನ್ನೂ ಓದಿ: Toll Plaza Rules Change: ಟೋಲ್ ಪ್ಲಾಜಾ ನಿಯಮಗಳಲ್ಲಿ ಭಾರೀ ಬದಲಾವಣೆ!
ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 15 ತಿಂಗಳ ಕನಿಷ್ಠ ಶೇ.5.66ಕ್ಕೆ ಇಳಿದಿದೆ. ಮುಖ್ಯವಾಗಿ ಅಗ್ಗದ ಆಹಾರ ಪದಾರ್ಥಗಳಿಂದ ಹಣದುಬ್ಬರ ದರ ಕಡಿಮೆಯಾಗಿದೆ. ಮಾರ್ಚ್‌ನ ಹಣದುಬ್ಬರ ಅಂಕಿಅಂಶವು ಆರ್‌ಬಿಐನ ತೃಪ್ತಿಕರ ಮಟ್ಟವಾದ ಶೇ.6ರ ಮೇಲಿನ ಮಿತಿಯಲ್ಲಿದೆ. ಹಣದುಬ್ಬರವನ್ನು ಶೇ.2ರಿಂದ 6ರ ನಡುವೆ ಇರಿಸುವ ಜವಾಬ್ದಾರಿಯನ್ನು ಆರ್‌ಬಿಐ ಪಡೆದುಕೊಂಡಿದೆ. ದತ್ತಾಂಶ ಬಿಡುಗಡೆ
ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ ಪ್ರಕಾರ, ಆಹಾರ ಉತ್ಪನ್ನಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇ.4.79ರಷ್ಟಿದೆ. ಈ ಅಂಕಿ ಅಂಶವು ಫೆಬ್ರವರಿಯಲ್ಲಿ ಶೇ.5.95 ಮತ್ತು 1 ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.7.68 ಆಗಿತ್ತು. ಸಿರಿಧಾನ್ಯಗಳು, ಹಾಲು ಮತ್ತು ಹಣ್ಣುಗಳ ಬೆಲೆಗಳ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2022ರಲ್ಲಿ ಶೇ.5.7ರಿಂದ ಫೆಬ್ರವರಿ 2023 ರಲ್ಲಿ ಶೇ.6.4ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2023-24ರ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ.5.2ರಷ್ಟಿದೆ ಎಂದು ಅಂದಾಜಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.