Sunil Gavaskar: ಈ ಅನುಭವಿ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ಶಾಕಿಂಗ್ ಹೇಳಿಕೆ! ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ

Sunil Gavaskar on MS Dhoni: ಭಾರತದಲ್ಲಿ ಸದ್ಯ ಐಪಿಎಲ್ 16 ನೇ ಸೀಸನ್ ನಡೆಯುತ್ತಿದೆ. ಈ ಕ್ರೇಜ್ ಮಧ್ಯೆ, ಸುನಿಲ್ ಗವಾಸ್ಕರ್ ಅನುಭವಿ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಧೋನಿ ಪ್ರಸ್ತುತ ಐಪಿಎಲ್ 16 ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಸಿ ಎಸ್ ಕೆ ತಂಡದಲ್ಲಿ 200 ಪಂದ್ಯಗಳನ್ನು ಓರ್ವ ನಾಯಕನಾಗಿ ಮುನ್ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Written by - Bhavishya Shetty | Last Updated : Apr 13, 2023, 12:46 AM IST
    • ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುವವರು.
    • ಅವರ ಮಾತುಗಳು ಕಟುವಾಗಿದ್ದರು ಸಹ ಸತ್ಯ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯಕ್ಯಿ.
    • ಇದೀಗ ಅವರು ಟೀಂ ಇಂಡಿಯಾದ ಅನುಭವಿ ಆಟಗಾರ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ
Sunil Gavaskar: ಈ ಅನುಭವಿ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ಶಾಕಿಂಗ್ ಹೇಳಿಕೆ! ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ title=
sunil gavaskar

Sunil Gavaskar on MS Dhoni: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುವವರು. ಅವರ ಮಾತುಗಳು ಕಟುವಾಗಿದ್ದರು ಸಹ ಸತ್ಯ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯಕ್ಯಿ. ಇದೀಗ ಅವರು ಟೀಂ ಇಂಡಿಯಾದ ಅನುಭವಿ ಆಟಗಾರ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ವಿರಾಟ್-ರೋಹಿತ್ ಹಿಂದಿಕ್ಕಿ ಇತಿಹಾಸ ಬರೆದ MS Dhoni: ಯಾರಿಂದಲೂ ಟಚ್ ಮಾಡೋಕಾಗಲ್ಲ ಅನ್ಸುತ್ತೆ ಈ ದಾಖಲೆ!

ಭಾರತದಲ್ಲಿ ಸದ್ಯ ಐಪಿಎಲ್ 16 ನೇ ಸೀಸನ್ ನಡೆಯುತ್ತಿದೆ. ಈ ಕ್ರೇಜ್ ಮಧ್ಯೆ, ಸುನಿಲ್ ಗವಾಸ್ಕರ್ ಅನುಭವಿ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಧೋನಿ ಪ್ರಸ್ತುತ ಐಪಿಎಲ್ 16 ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಸಿ ಎಸ್ ಕೆ ತಂಡದಲ್ಲಿ 200 ಪಂದ್ಯಗಳನ್ನು ಓರ್ವ ನಾಯಕನಾಗಿ ಮುನ್ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಐಪಿಎಲ್‌’ನಲ್ಲಿ 200 ಪಂದ್ಯಗಳನ್ನು ಒಂದೇ ತಂಡದ ನಾಯಕತ್ವ ವಹಿಸಿಕೊಂಡು ಆಟವಾಡಿದ ಏಕೈಕ ಆಟಗಾರ ಧೋನಿ.

ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಬ್ಯಾಟಿಂಗ್ ಮಾಡುವಾಗ ಧೋನಿ ಮೇಲಿನ ಕ್ರಮಾಂಕದಲ್ಲಿ ಇಳಿಯಬೇಕು ಎಂದು ಅವರು ಹೇಳುತ್ತಾರೆ. ಅದರ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ. ಗವಾಸ್ಕರ್ ಕ್ರಿಕ್‌ ಇನ್‌ಫೋ ಜೊತೆ ಮಾತನಾಡುವಾಗ ಈ ಬಗ್ಗೆ ಪ್ರಸ್ತಾಪಿದ್ದಾರೆ, 'ಬ್ಯಾಟಿಂಗ್ ಸಮಯದಲ್ಲಿ ಎಂಎಸ್ ಧೋನಿ ಮೇಲಿನ ಕ್ರಮಾಂಕದಲ್ಲಿ ಬರಬೇಕು ಎಂದು ನಾನು ಭಾವಿಸುತ್ತೇನೆ. ಇದರಿಂದ ಇನ್ನೂ 2-3 ಓವರ್‌’ಗಳ ಬ್ಯಾಟಿಂಗ್‌’ಗೆ ಅವಕಾಶ ಸಿಗಲಿದೆ. ಅವರು ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಇದರಿಂದ ತಂಡಕ್ಕೂ ಲಾಭವಾಗಲಿದೆ” ಎಂದು ಬೆಸ್ಟ್ ಸಲಹೆಯನ್ನು ನೀಡಿದ್ದಾರೆ.

ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ

ಧೋನಿ ಲೀಗ್‌’ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಲ್ಕು ಬಾರಿ ಐಪಿಎಲ್‌’ನ ಟ್ರೋಫಿಯನ್ನು ಗೆದ್ದಿದೆ. ತಂಡವು ಮೊದಲ ಬಾರಿಗೆ 2010 ರಲ್ಲಿ ಐಪಿಎಲ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು. ಇದಾದ ಬಳಿಕ 2011, 2018 ಹಾಗೂ 2021ರಲ್ಲೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News