7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಜುಲೈ 2023 ರಲ್ಲಿ, ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಇದಲ್ಲದೇ ಪ್ರಯಾಣ ಭತ್ಯೆ (ಟಿಎ) ಕೂಡಾ ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನು ಜುಲೈ ತಿಂಗಳಲ್ಲಿ ಏರಿಕೆಯಾಗುವ ಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡಲಾಗುವುದು. ಅಂದರೆ 3 ತಿಂಗಳ ಡಿಎ ಬಾಕಿಯೊಂದಿಗೆ ವೇತನ ನೀಡಲಾಗುವುದು. ಇದರೊಂದಿಗೆ ಜುಲೈ 2023ರ ನಂತರ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಂಡು ಬರಲಿದೆ ಎನ್ನುವುದು ಸ್ಪಷ್ಟ.
ಈ ಭತ್ಯೆಗಳಲ್ಲಿಯೂ ಹೆಚ್ಚಳ :
ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮಾತ್ರವಲ್ಲದೆ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಕೂಡಾ ಏರಿಕೆಯಾಗಲಿದೆ. ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.
ಇದನ್ನೂ ಓದಿ : ಹಿಂದಿನ ಸರ್ಕಾರದ ನಿರ್ಧಾರದಲ್ಲಿ ಬದಲಾವಣೆ! ಸರ್ಕಾರಿ ನೌಕರರಿಗೆ ಲಾಭ
3 ತಿಂಗಳ ಬಾಕಿ ಸೇರಿಸಿ ಸಿಗಲಿದೆ ವೇತನ :
ಮುಂದಿನ ದಿನಗಳಲ್ಲಿ, ಸಿಪಿಐ-ಐಡಬ್ಲ್ಯೂ ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಡಿಎ ಎಷ್ಟು ಹೆಚ್ಚಾಗುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಜನವರಿ 2023 ರಿಂದ ಜೂನ್ 2023 ರವರೆಗಿನ ಅಂಕಿಅಂಶಗಳ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ.
ಅಕ್ಟೋಬರ್ನಲ್ಲಿ ಆಗುವುದು ಘೋಷಣೆ :
ಅಕ್ಟೋಬರ್ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದಾದರೂ, ಇದು ಜುಲೈನಿಂದ ಅನ್ವಯವಾಗಲಿದೆ. ಹೀಗಾದರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿಯೂ (ಡಿಎ ಬಾಕಿ) ನೌಕರರಿಗೆ ಲಭ್ಯವಾಗಲಿದೆ. ಈ ಮೂಲಕ ನೌಕರರ ಖಾತೆಗೆ ಭಾರೀ ಮೊತ್ತ ಜಮಾ ಆಗಲಿದೆ.
ಇದನ್ನೂ ಓದಿ : Good News: ಸಾಲ ಕಟಬಾಕಿ ದಂಡಕ್ಕೆ ಸಂಬಂಧಿಸಿದಂತೆ ಹೊಸ ಕರಡು ನಿಯಮ ಜಾರಿಗೊಳಿಸಿದ RBI
ತುಟ್ಟಿಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗುವ ನಿರೀಕ್ಷೆ :
ಬೆಲೆ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗಬಹುದು. 2023ರ ಮಾರ್ಚ್ನಲ್ಲಿ ಶೇ 4ರಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳ ಜನವರಿಯಿಂದಲೇ ಅನ್ವಯವಾಗಲಿದೆ. ಇನ್ನು ಜುಲೈಯಲ್ಲಿ ಕೂಡಾ ಶೇಕಡಾ 4 ರಷ್ಟೇ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೂಡಾ ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.