Shani Vakra Drushti Effect: ನವಗ್ರಹಗಳಲ್ಲಿ ಪ್ರತಿ ಗ್ರಹಕ್ಕೂ ಕೂಡ ಅದರದೇ ಆದ ವೈಶಿಷ್ಟ್ಯವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಪ್ರತಿಫಲಗಳನ್ನು ನೀಡುವ ದೇವರು ಎಂದು ಕರೆಯಲ್ಪಡುವ ಶನಿ ದೇವರನ್ನು ಕ್ರೂರ ಗ್ರಹ ಎಂತಲೂ ಕರೆಯಲಾಗುತ್ತದೆ. ಶನಿ ಮಹಾತ್ಮಕ ವಕ್ರ ದೃಷ್ಟಿ ಅಥವಾ ಮೂರನೇ ದೃಷ್ಟಿ ಜಾತಕದ ಮೇಲೆ ಬಿತ್ತೆಂದರೆ ಆ ವ್ಯಕ್ತಿ ಜೀವನದಲ್ಲಿ ಸಂಕಷ್ಟಗಳಿಗೆ ಕೊನೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಮಯದಲ್ಲಿಯೂ ಶನಿಯು ಕೆಲವು ರಾಶಿಯವರ ಜೀವನದಲ್ಲಿ ವಕ್ರ ದೃಷ್ಟಿಯನ್ನು ಬೀರಿದ್ದು, ಈ ರಾಶಿಯವರಿಗೆ ಇದನ್ನು ತುಂಬಾ ಅಪಾಯಕಾರಿ ಎಂದು ವರ್ಣಿಸಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು ತಿಳಿಯೋಣ...
ಈ ರಾಶಿಯವರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಶನಿಯ ವಕ್ರ ದೃಷ್ಟಿ:-
ಮೇಷ ರಾಶಿ:
ಶನಿಯ ಮೂರನೇ ಕಣ್ಣು ಮೇಷ ರಾಶಿಯವರಿಗೆ ಅಪಾಯಕಾರಿ ಎಂದು ಸಾಬೀತಾಪಡಿಸಲಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. ಮಾತ್ರವಲ್ಲ, ಆರೋಗ್ಯದ ವಿಷಯದಲ್ಲೂ ಎಚ್ಚರಿಕೆಯಿಂದ ಇರುವುದು ಮುಖ್ಯ.
ಇದನ್ನೂ ಓದಿ- ‘ಪಿತೃ ದೋಷ ಯೋಗ’ದ ಕರಿನೆರಳು; ಈ 3 ರಾಶಿಗಳಿಗೆ ಮುಂದಿನ 30 ದಿನಗಳು ತುಂಬಾ ಸಂಕಷ್ಟ!
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಉದ್ಯೋಗ, ವ್ಯಾಪಾರ-ವ್ಯವಹಾರದಲ್ಲಿ ಶನಿ ವಕ್ರ ದೃಷ್ಟಿ ಹೆಚ್ಚು ಪರಿಣಾಮ ಉಂಟು ಮಾಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಕನ್ಯಾ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರಷ್ಟೇ ಫಲ ದೊರೆಯುತ್ತದೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ನಿಮ್ಮ ಕೆಲಸಕ್ಕೆ ಕುತ್ತು ಬರಬಹುದು, ಎಚ್ಚರ.
ತುಲಾ ರಾಶಿ:
ಶನಿ ಮಹಾತ್ಮನ ವಕ್ರ ದೃಷ್ಟಿ ತುಲಾ ರಾಶಿಯವರಿಗೂ ಕೂಡ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಳಿದ್ದಾನೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ವೆಚ್ಚ ಹೆಚ್ಚಾಗುವುದರಿಂದ ಒತ್ತಡ ಹೆಚ್ಚಾಗಬಹುದು.
ಮಕರ ರಾಶಿ:
ಶನಿ ವಕ್ರದೃಷ್ಟಿ ಮಕರ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭಾರೀ ನಷ್ಟವನ್ನು ಉಂಟು ಮಾಡಬಹುದು. ಮಾತ್ರವಲ್ಲ, ನಿಮ್ಮ ವೈವಾಹಿಕ ಜೀವನದಲ್ಲೂ ಕೂಡ ಬಿರುಕು ಉಂಟಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ವಾದ-ವಿವಾದಗಳನ್ನು ತಪ್ಪಿಸಿ.
ಮೀನ ರಾಶಿ:
ಮೀನ ರಾಶಿಯವರ ಆರ್ಥಿಕ ಭಾಗಕ್ಕೆ ಸಂಬಂಧಿಸಿದಂತೆ ಶನಿಯ ವಕ್ರದೃಷ್ಟಿ ತುಂಬಾ ಭಾರ ಎಂದು ಸಾಬೀತುಪಡಿಸಬಹುದು. ಈ ಸಂಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ. ಉದ್ಯೋಗ-ವ್ಯವಹಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.