Arshdeep Singh Destroys Stumps: ಕಳೆದ ದಿನ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ಗೆಲುವಿಗೆ ಕಾರಣವಾಗಿದ್ದಾರೆ. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್’ನಲ್ಲಿ 4 ವಿಕೆಟ್ ಪಡೆದರು. ಅಷ್ಟೇ ಅಲ್ಲದೆ, ತಮ್ಮ ವೇಗದ 2 ಎಸೆತಗಳಿಂದ ಎರಡು ಬಾರಿ ಸ್ಟಂಪ್ ಅನ್ನು ಮುರಿದಿದ್ದಾರೆ. ಆದರೆ ಈ ಸ್ಟಂಪ್’ಗಳ (LED Stumps) ದರ ಎಷ್ಟು ಗೊತ್ತೇ?
ಇದನ್ನೂ ಓದಿ: Hardik -Krunal: ಪಂದ್ಯದ ಮಧ್ಯೆ ಹಾರ್ದಿಕ್-ಕೃನಾಲ್ ಸಹೋದರರ ಕಿತ್ತಾಟ! ಆಮೇಲೆ ಆಗಿದ್ದು… ವಿಡಿಯೋ ನೋಡಿ
ಈ ಪಂದ್ಯದಲ್ಲಿ, ಅರ್ಷದೀಪ್ ಸಿಂಗ್ ಸತತ ಎರಡು ಎಸೆತಗಳಲ್ಲಿ ಎರಡು ಬಾರಿ ಸ್ಟಂಪ್ ಮುರಿದಿದ್ದಾರೆ. ಇದರಿಂದ ಬಿಸಿಸಿಐಗೆ ಬರೋಬ್ಬರಿ 35 ರಿಂದ 40 ಲಕ್ಷ ರೂ.ನಷ್ಟ ಉಂಟಾಗಿದೆ. ತಂತ್ರಜ್ಞಾನ ರಹಿತ ಎಲ್‌ಇಡಿ ಸ್ಟಂಪ್’ಗಳ ಬೆಲೆ ಸುಮಾರು 35 ರಿಂದ 40 ಲಕ್ಷ ರೂ. ಇದೆ.
Stump breaker,
Game changer!Remember to switch to Stump Cam when Arshdeep Akram bowls 😄#MIvPBKS #IPLonJioCinema #IPL2023 #TATAIPL | @arshdeepsinghh pic.twitter.com/ZnpuNzeF7x
— JioCinema (@JioCinema) April 22, 2023
ಈ ಎಲ್’ಇಡಿ ಸ್ಟಂಪ್‌ಗಳನ್ನು ಐಸಿಸಿ 2013ರ ವಿಶ್ವಕಪ್’ನಲ್ಲಿ ಮೊದಲು ಅಳವಡಿಸಿಕೊಂಡಿತ್ತು. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಪ್ರಸಿದ್ಧ ಬಿಗ್ ಬ್ಯಾಷ್ ಲೀಗ್’ನಲ್ಲಿ ಬಳಸಲಾಗಿತ್ತು. ಬಿಗ್ ಬ್ಯಾಷ್ ಲೀಗ್’ನಲ್ಲಿ ಯಶಸ್ವಿಯಾದ ನಂತರ 2013 ರಲ್ಲಿ ಇದನ್ನು ಮೊದಲ ಬಾರಿಗೆ ಬಳಸಲಾಯಿತು. ಈ ತಂತ್ರಜ್ಞಾನವು ಅಂಪೈರಿಂಗ್’ನಲ್ಲಿ ಸಹಾಯಕವಾಗಿರುವುದರಿಂದ, ಈ ಸ್ಟಂಪ್‌ಗಳು ವಿಶ್ವದ ಅತ್ಯಂತ ದುಬಾರಿ ಸ್ಟಂಪ್’ಗಳಾಗಿವೆ. ಪ್ರಸ್ತುತ ODI ಮತ್ತು T20ಗಳಲ್ಲಿ LED ಸ್ಟಂಪ್;ಗಳನ್ನು ಬಳಸಲಾಗುತ್ತದೆ. ಸೆಕೆಂಡುಗಳಲ್ಲಿ ಮೈಕ್ರೊಪ್ರೊಸೆಸರ್ ಚಲನೆಯನ್ನು ಗ್ರಹಿಸುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ಬ್ಯಾಟರಿಗಳನ್ನು ಸಹ ಇವು ಹೊಂದಿವೆ. ಹೀಗಾಗಿಯೇ ಬಾಲ್ ಸ್ಟಂಪ್ ಟಚ್ ಆಗುತ್ತಿದ್ದಂತೆ, ಸ್ವಯಂಚಾಲಿತವಾಗಿ ಕೆಂಪು ದೀಪ ಬೆಳಗುತ್ತದೆ.
ಇದನ್ನೂ ಓದಿ: W,W,W,W..9 ವರ್ಷದಿಂದ ಟೀಂ ಇಂಡಿಯಾದಿಂದ ಔಟ್! ಆದ್ರೆ ಇಂದು ಗುಜರಾತ್ ಗೆಲುವಿಗೆ ಕಾರಣವಾಗಿದ್ದು ಅದೇ ಆಟಗಾರ
ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್!
ಮುಂಬೈ ಇಂಡಿಯನ್ಸ್ ವಿರುದ್ಧ ಅರ್ಷದೀಪ್ ಸಿಂಗ್ ಅತ್ಯಂತ ಮಾರಕ ಬೌಲಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಅರ್ಷದೀಪ್ 4 ಓವರ್ ಬೌಲ್ ಮಾಡಿ 29 ರನ್ ನೀಡಿ 4 ವಿಕೆಟ್ ಪಡೆದರು. ಆದರೆ ಅರ್ಷದೀಪ್ ಸಿಂಗ್ ಮುಂದೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ಸ್ಕೋರ್ ಗಳಿಸಲು ವಿಫಲರಾದರು. ಈ ಬಾರಿಯ ಐಪಿಎಲ್‌ನಲ್ಲಿ ಅರ್ಷದೀಪ್ ಸಿಂಗ್ 7 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ