Gattimela Serial : ನಟನೆ ಮೇಲಿನ ಕ್ರೇಜ್‌ ಗೆ ಡಾಕ್ಟರ್‌ ವೃತ್ತಿಯನ್ನೇ ಬದಿಗೊತ್ತಿದ "ಗಟ್ಟಿಮೇಳ" ನಟಿ  ಇವರೇ ನೋಡಿ!

Gattimela Serial Actress: ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲೊಂದಾದ 'ಗಟ್ಟಿಮೇಳ'ವು ವಿಭಿನ್ನ ಕಥೆ ಜೊತೆಗೆ ಅದ್ಭುತ ಕಲಾವಿದರ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಪಾತ್ರ ಮಾಡುತ್ತಿರುವ ಆರತಿ ಬಗ್ಗೆ ಒಂದಿಷ್ಟು ವಿಷಯ ನಿಮ್ಮ ಮುಂದೆ...

Written by - Zee Kannada News Desk | Last Updated : Apr 29, 2023, 06:42 PM IST
  • ನಟನೆ ಮೇಲಿನ ಕ್ರೇಜ್‌ ಗೆ ಡಾಕ್ಟರ್‌ ವೃತ್ತಿಯನ್ನೇ ಬದಿಗೊತ್ತಿದ "ಗಟ್ಟಿಮೇಳ" ನಟಿ
  • ನಟಿ ಆರತಿ ದಕ್ಷಿಣ ಕನ್ನಡದ ಪಡುಬಿದ್ರೆ ಮೂಲದವರು
  • ನಟಿ ಆರತಿ ಇದಕ್ಕೂ ಮೊದಲು ಹೂ ಮಳೆ ಧಾರಾವಾಹಿಯಲ್ಲಿ ನಟನೆ
Gattimela Serial : ನಟನೆ ಮೇಲಿನ ಕ್ರೇಜ್‌ ಗೆ ಡಾಕ್ಟರ್‌ ವೃತ್ತಿಯನ್ನೇ ಬದಿಗೊತ್ತಿದ "ಗಟ್ಟಿಮೇಳ" ನಟಿ  ಇವರೇ ನೋಡಿ! title=

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲೊಂದಾದ 'ಗಟ್ಟಿಮೇಳ'ವು ವಿಭಿನ್ನ ಕಥೆ ಜೊತೆಗೆ ಅದ್ಭುತ ಕಲಾವಿದರ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ನಟಿಸುತ್ತಿರುವ ಆರತಿ ಪಡುಬಿದ್ರಿ ಫಿಜಿಯೋಥೆರಪಿಸ್ಟ್ ಎಂಬ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ.

ಹೌದು,

ವೃತ್ತಿಯಿಂದ ಫಿಜಿಯೋಥೆರಪಿಸ್ಟ್ ಅಂದರೆ ಡಾಕ್ಟರ್ ಆಗಿದ್ದ ಆರತಿ ಪಡುಬಿದ್ರಿಗೆ ಮಾಡಲಿಂಗ್ ಹಾಗೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತಂತೆ. ಕೆಲಸದ ಜೊತೆಗೆ ಬಿಡುವು ದೊರೆತಾಗಲೆಲ್ಲಾ ಮಾಡೆಲಿಂಗ್ ಕೂಡ ಮಾಡುತ್ತಿದ್ದ ಇವರು ಹೇಗಾದರೂ ನಟಿಯಾಗಬೇಕೆಂದು ಬಹಳಷ್ಟು ಕನಸು ಕಂಡಿದ್ದರು. ಅವಕಾಶಗಳು ದೊರಕಿದಾಗ ಕೆಲಸ ಹಾಗೂ ನಟನೆಯನ್ನು ಬ್ಯಾಲೆನ್ಸ್ ಮಾಡಲು ಬಹಳಷ್ಟು ಕಷ್ಟಪಟ್ಟ ಈಕೆ ತಮ್ಮ ನಟನೆಯ ಕನಸನ್ನು ಬಿಟ್ಟುಕೊಡಲಿಲ್ಲ.

ಇದನ್ನೂ ಓದಿ: Most Controversial Outfit: ವಿಚಿತ್ರ ಉಡುಗೆಯಲ್ಲಿ ಊರ್ಫಿಯನ್ನು ಮೀರಿಸಿದ ಕೇಟಿ ಪೆರ್ರಿ, ಈಕೆಯನ್ನು ನೀವು ನೋಡಿದರೇ ದಂಗ್ ಆಗೋದ್‌ ಗ್ಯಾರಂಟಿ !

ಹೂ ಮಳೆ ಎಂಬ ಧಾರಾವಾಹಿಯಲ್ಲಿ ನಾಯಕಿ ಅಕ್ಕನ ಪಾತ್ರ ದೊರೆತಾಗ ಖುಷಿಯಿಂದ ಒಪ್ಪಿಕೊಂಡು ಅದ್ಭುತವಾಗಿ ನಟಿಸಿದರು. ಸಿಕ್ಕ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಇವರು ಅಂಬಿಕಾ ಪಾತ್ರದಿಂದ ಕಿರುತೆರೆಯಲ್ಲಿ ಬಹುಬೇಗನೇ ಫೇಮಸ್ ಆದರು.

ಇದೀಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಡ್ಯಾನ್ಸಿಂಗ್ ಶೋನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ಆರತಿ ಪಡುಬಿದ್ರಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಮಾಡೆಲಿಂಗ್ ಚೆನ್ನಾಗಿ ಗೊತ್ತಿದ್ದ ಈಕೆ ನಟನೆ ಸುಲಭ ಎಂದುಕೊಂಡಿದ್ದರಂತೆ. ಆದರೆ ನಟನೆಯ ಕಷ್ಟಗಳು ನಟಿಯಾದ ಮೇಲೆ ತಿಳಿಯಿತಂತೆ. ಆದರೂ, ಸಹ ಛಲ ಬಿಡದೆ ನಟನೆ ಕಲಿತು ತಮ್ಮ ಅದ್ಭುತ ಅಭಿನಯದಿಂದ ಈಗ ಮನೆ ಮಾತಾಗಿದ್ದಾರೆ.

ಇದನ್ನೂ ಓದಿ: Kriti Sanan: ಕೃತಿ ಸನೋನ್ ನ ಸೀತೆ ರೂಪಕ್ಕೆ ಮನಸೋತ ಫ್ಯಾನ್ಸ್

ನಟನೆಯೊಂದಿಗೆ ಟ್ರಾವೆಲಿಂಗ್‌ನಲ್ಲಿಯೂ ಬಹಳಷ್ಟು ಆಸಕ್ತಿ ಇರುವ ಇವರು ಬಿಡುವು ಸಿಕ್ಕಾಗಲೆಲ್ಲ ಸುತ್ತಾಡುತ್ತಿರುತ್ತಾರೆ. ಜೊತೆಗೆ ಆಗಾಗ ಟ್ರೆಡಿಷನಲ್ ಹಾಗು ವೆಸ್ಟರ್ನ್ ಫೋಟೋ ಶೂಟ್‌ಗಳನ್ನು ಮಾಡಿಸುತ್ತಲೇ ಇರುವ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಆಕ್ಟಿವ್ ಆಗಿದ್ದಾರೆ.

ಗಟ್ಟಿಮೇಳ' ಧಾರಾವಾಹಿಯ ಸಹನಟಿಯಾಗಿ  ನಟಿಸುತ್ತಿದ್ದಾರೆ. ನಟಿ ರೀಲ್ಸ್ ಗಳನ್ನು ಮಾಡಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.  ನಟಿ ಆರತಿ ಪಡುಬಿದ್ರಿ ಅವರು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗುತ್ತಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News